Ticket Refund: ಇನ್ನುಮುಂದೆ ರೈಲು ಮಿಸ್ ಆದರೆ ಭಯಪಡುವ ಅಗತ್ಯವಿಲ್ಲ, ಈ ರೀತಿ ಟಿಕೆಟ್ ಹಣ ವಾಪಾಸ್ ಪಡೆದುಕೊಳ್ಳಿ.
ರೈಲು ಮಿಸ್ ಆದರೆ ಈಗ ಟಿಕೆಟ್ ಹಣವನ್ನ ಈ ವಿಧಾನದ ಮೂಲಕ ವಾಪಾಸ್ ಪಡೆದುಕೊಳ್ಳಬಹುದು.
Indian Railway Ticket Refund Rule: ರೈಲು ಪ್ರಯಾಣಿಕರಿಗೆ Railway Ticket ಎಷ್ಟು ಮುಖ್ಯ ಎನ್ನುವುದು ಎಲ್ಲರಿಗು ತಿಳಿದೇ ಇದೆ. ರೈಲುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರು ಕೂಡ ರೈಲ್ವೆ ಟಿಕೆಟ್ ಅನ್ನು ಪಡೆಯಲೇ ಬೇಕು. ರೈಲುಗಳಲ್ಲಿ ಟಿಕೆಟ್ ಪರಿಶೀಲನೆಗಾಗಿಯೇ TTE ಗಳನ್ನೂ ನೇಮಕ ಮಾಡಲಾಗುತ್ತದೆ.
TTE ಬಂದ ಸಮಯದಲ್ಲಿ ರೈಲ್ವೆ ಟಿಕೆಟ್ ಅನ್ನು ತೋರಿಸದಿದ್ದರೆ ನೀವು ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಬಹುದು. ಸದ್ಯ ರೈಲ್ವೆ ಟಿಕೆಟ್ ನಿಯಮದಲ್ಲಿ ಇಲಾಖೆ ಬಹುದೊಡ್ಡ ಬದಲಾವಣೆಯನ್ನು ಮಾಡಿದೆ ಈ ಬಗ್ಗೆ ವಿವರ ಇಲ್ಲಿದೆ.
ಇನ್ನುಮುಂದೆ ರೈಲು ಮಿಸ್ ಆದರೆ ಭಯಪಡುವ ಅಗತ್ಯವಿಲ್ಲ
ಇನ್ನು ನೀವು Railway Ticket ಅನ್ನು ಮಾಡಿದ್ದರು ಕೂಡ ಕೆಲವೊಮ್ಮೆ ಟೈರ್ನ್ ಅನ್ನು ತಪ್ಪಿಸಿಕೊಳ್ಳುವ ಸಂದರ್ಭ ಇರುತ್ತದೆ. ಆಗ ನೀವು ಮಾಡಿದ ಟಿಕೆಟ್ ವ್ಯರ್ಥವಾಗುತ್ತದೆ. ನಿಮ್ಮ ಹಣ ಕೂಡ ಅನಾವಶ್ಯಕವಾಗಿ ಹಾಳಾಗುತ್ತದೆ. ಆದರೆ ಸದ್ಯ Railway ಇಲಾಖೆ ನಿಮ್ಮ ರದ್ದಾಗಿರುವ ಪ್ರಯಾಣದ ಟಿಕೆಟ್ ನ ಸಂಪೂರ್ಣ ಮಾರುಪಾವತಿಯನ್ನು ಮಾಡಿಕೊಳ್ಳೂ ಅವಕಾಶವನ್ನು ನೀಡಿದೆ. ಇನ್ನುಮುಂದೆ ನೀವು ರೈಲು ಪ್ರಯಾಣವನ್ನು ತಪ್ಪಿಸಿಕೊಂಡರೆ ಟಿಕೆಟ್ ನ ಮೊತ್ತದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಈ ಸುಲಭ ವಿಧಾನದ ಮೂಲಕ ನೀವು ನಿಮ್ಮ ಟಿಕೆಟ್ ನ ಸಂಪೂರ್ಣ ಮೊತ್ತವನ್ನು ಮರಳಿ ಪಡೆಯಬಹುದು.
ಟಿಕೆಟ್ ಹಣದ ಮರುಪಾವತಿಯ ನಿಯಮಗಳು
ನೀವು ಮೊದಲು ನಿಮ್ಮ ಟಿಕೆಟ್ ಹಣದ ಮರುಪಾವತಿಗಾಗಿ TDR (Ticket Deposit Receipt-TDR) ಅನ್ನು ಸಲ್ಲಿಸಬೇಕಾಗುತ್ತದೆ. ಚಾರ್ಟಿಂಗ್ ಸ್ಟೇಷನ್ ನಿಂದ ರೈಲು ಹೊರಡುವ ಒಂದು ಗಂಟೆಯೊಳಗೆ ಪ್ರಯಾಣಿಕರು TDR ಅನ್ನು ಸಲ್ಲಿಸಬಹುದು. ಇನ್ನು 1 ಗಂಟೆ ಕಳೆದ ನಂತರ ನೀವು ಮರುಪಾವತಿಯನ್ನು ಕೇಳಲು ಸಾಧ್ಯವಾಗುವುದಿಲ್ಲ. ರೈಲ್ವೆಯು ಪ್ರಯಾಣಿಕರಿಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ TDR ಸಲ್ಲಿಸುವ ಸೌಲಭ್ಯವನ್ನು ಒದಗಿಸುತ್ತದೆ.
ಈ ರೀತಿ ಟಿಕೆಟ್ ಹಣ ವಾಪಾಸ್ ಪಡೆದುಕೊಳ್ಳಿ
*ಆನ್ ಲೈನ್ ನಲ್ಲಿ TDR ಸಲ್ಲಿಸಲು ಪ್ರಯಾಣಿಕರು RCTC ಸೈಟ್ ಗೆ ಭೇಟಿ ನೀಡಬೇಕು.
*ನಂತರ ಬುಕ್ ಮಾಡಿದ ಟಿಕೆಟ್ ಇತಿಹಾಸವನ್ನು ಪಡೆಯುತ್ತೀರಿ. ಬುಕ್ ಮಾಡಿದ ಟಿಕೆಟ್ ಗಳು ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ.
*ನಂತರ PNR ಅನ್ನು ಆಯ್ಕೆ ಕ್ಲಿಕ್ ಮಾಡಿ. ಫೈಲ್ TDR ಬಟನ್ ಮೇಲೆ ಕ್ಲಿಕ್ ಮಾಡಿ. ಟಿಕೆಟ್ ವಿವರಗಳಿಂದ ಪ್ರಯಾಣಿಕರ ಹೆಸರನ್ನು ಆಯ್ಕೆಮಾಡಿ.
*ನಂತರ ಅಲ್ಲಿ ನೀಡಲಾದ ಬಾಕ್ಸ್ ನಿಂದ ರೈಲು ಕಾಣೆಯಾಗಲು ಕಾರಣವನ್ನು ಆಯ್ಕೆಮಾಡಿ ಅಥವಾ ಅದನ್ನು ನೀವೇ ಟೈಪ್ ಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
*TDR ಅನ್ನು ಆಫ್ಲೈನ್ ಅಥವಾ ಆನ್ಲೈನ್ನಲ್ಲಿ ಭರ್ತಿಮಾಡಿದ 45 ದಿನಗಳಲ್ಲಿ ನಿಮ್ಮ ಟಿಕೆಟ್ನ ಪೂರ್ಣ ಮರುಪಾವತಿಯನ್ನು ಹಿಂತಿರುಗಿಸಲಾಗುತ್ತದೆ.