Railway Ticket: ರೈಲು ಪ್ರಯಾಣಿಕರಿಗೆ ಇನ್ನೊಂದು ಯೋಜನೆ, ಈಗ ಚಲಿಸುತ್ತಿರುವ ರೈಲಿನಲ್ಲಿ ಖಾಲಿ ಸೀಟ್ ಹುಡುಕಬಹುದು.
ರೈಲ್ವೆ ಟಿಕೆಟ್ ಕಾಯ್ದಿರಿಸಲು ಹೊಸ ಸೌಲಭ್ಯ.
Railway Ticket Reservation: ಸಾಮಾನ್ಯವಾಗಿ ಜನರು ದೂರದ ಪ್ರದೇಶಗಳಿಗೆ ಪ್ರಯಾಣಿಸಲು ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲು ಪ್ರಯಾಣವು ಒಂದು ರೀತಿಯಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ ಎನ್ನಬಹುದು. ಇನ್ನು ರೈಲುಪ್ರಯಾಣ ಮಾಡಲು ಮೊದಲು Railway Ticket ಅನ್ನು ಪಡೆಯಬೇಕೆಗುತ್ತದೆ.
ಇನ್ನು ರೈಲ್ವೆ ಇಲಾಖೆಯು ಟಿಕೆಟ್ ಪಡೆದುಕೊಳ್ಳಲು ಸಾಕಷ್ಟು ನಿಯಮವನ್ನು ಅಳವಡಿಸಿದೆ. ರೈಲ್ವೆ ಇಲಾಖೆಯ ನಿಯಮದ ಪ್ರಕಾರವೇ ಪ್ರಯಾಣಿಕರು ಟಿಕೆಟ್ ಅನ್ನು ಪಡೆಯಬೇಕಾಗುತ್ತದೆ. ಇದೀಗ ರೈಲ್ವೆ ಟಿಕೆಟ್ ಕಾಯ್ದಿರಿಸಲು ಹೊಸ ಸೌಲಭವನ್ನು ನೀಡಲಾಗಿದೆ.
ರೈಲು ಪ್ರಯಾಣಿಕರಿಗೆ ಇನ್ನೊಂದು ಸೌಲಭ್ಯ
ಕೆಲವೊಮ್ಮೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಟಿಕೆಟ್ ಫುಲ್ ಆದ ನಂತರ ಟಿಕೆಟ್ ಮಾಡಲು ಕಷ್ಟವಾಗುತ್ತದೆ. ಈ ವೇಳೆ ಟಿಕೆಟ್ ಅನ್ನು ವೈಟಿಂಗ್ ನಲ್ಲಿ ಇಡಲಾಗುತ್ತದೆ. ಇನ್ನು Ticket ಕನ್ಫರ್ಮ್ ಆಗಿದಿಯೋ ಇಲ್ಲವೋ ಎಂದು ತಿಳೀಯ್ಳು TTE ಅನ್ನು ಸಂಪರ್ಕಿಸಬೇಕಾಗುತ್ತದೆ.
TTE ರೈಲಿನಲ್ಲಿ ಖಾಲಿ ಸೀಟ್ ಇದ್ದರೆ ನಿಮಗೆ ಮಾಹಿತಿ ನೀಡುತ್ತಾರೆ. ಆದರೆ ಇದೀಗ ರೈಲ್ವೆ ಇಲಾಖೆ ಈ ಬಗ್ಗೆ ಮಾಹಿತಿ ತಿಳಿಯಲು ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಈ ಹೊಸ ಯೋಜನೆ ಮೂಲಕ ಪ್ರವೈಣಿಕರು ಮೂರನೇ ವ್ಯಕ್ತಿಯ ಸಹಾಯವಿಲ್ಲದೆ ರೈಲಿನಲ್ಲಿ ಸೀಟ್ ಖಾಲಿ ಇದೆಯೋ ಇಲ್ಲವೋ ಎನ್ನುವುದು ನೀವು ತಿಳಿದುಕೊಳ್ಳಬಹುದು.
ಇನ್ನುಮುಂದೆ ನೀವೇ ರೈಲಿನಲ್ಲಿ ಖಾಲಿ ಸೀಟ್ ಹುಡುಕಬಹುದು
*ನೀವು IRCTC ವೆಬ್ ಸೈಟ್ ಅಥವಾ ಅಪ್ಲಿಕೇಶನ್ ನ ಸಹಾಯದ ಮೂಲಕ ರೈಲಿನಲ್ಲಿ ಖಾಲಿ ಸೀಟ್ ಇದೆಯೋ ಇಲ್ಲವೋ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
*ಅಲ್ಲಿ Charts / vacancy ಎಂಬ ಆಯ್ಕೆ ಕಾಣುತ್ತಾದೆ.
*ಅದರ ಮೇಲೆ ಕ್ಲಿಕ್ ಮಾಡಿದರೆ Reservation Charts ತೆರೆಯುತ್ತದೆ.
*Reservation Charts ತೆರೆದಾಗ ಮೊದಲ ಬಾಕ್ಸ್ ನಲ್ಲಿ ರೈಲಿನ ಹೆಸರು ಅಥವಾ ರೈಲು ಸಂಖ್ಯೆಯನ್ನು ಮತ್ತು ಎರಡನೇ ಬಾಕ್ಸ್ ನಲ್ಲಿ ಬೋರ್ಡಿಂಗ್ ನಿಲ್ದಾಣದ ಹೆಸರನ್ನು ನಮೂದಿಸಬೇಕು.
*ಇದಾದ ಬಳಿಕ ನೀವು ಗೆಟ್ ಟ್ರೈನ್ ಚಾರ್ಟ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಖಾಲಿ ಸೀಟುಗಳ ಬಗ್ಗೆ ನಿಮಗೆ ಮಾಹಿತಿ ಸಿಗಲಿದೆ.