Ticket Transfer: ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ಸೇವೆ ಆರಂಭ, ಈಗ ನಿಮ್ಮ ಟಿಕೆಟ್ ಬೇರೆಯವರಿಗೆ ವರ್ಗಾಯಿಸಿ.

ನಿಮ್ಮ ರೈಲ್ವೆ ಟಿಕೆಟ್ ಅನ್ನು ಬೇರೆಯವರಿಗೆ ವರ್ಗಾಯಿಸಬಹುದಾಗಿದೆ.

Railway Ticket Transfer New Rule: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ವಿವಿಧ ನಿಯಮವನ್ನು ನೀಡುವುದರ ಜೊತೆಗೆ ಸಾಕಷ್ಟು ಸೌಲಭ್ಯವನ್ನು ಕೂಡ ನೀಡುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ರೈಲ್ವೆ ಟಿಕೆಟ್ ನಿಂದ ಹಿಡಿದು ಪ್ರಯಾಣಿಕರು ರಾತ್ರಿ ಮಲಗುವ ಬಗ್ಗೆ ಕೂಡ ಅನೇಕ ಸೌಕರ್ಯವನ್ನು ರೈಲ್ವೆ ಮಾಡಿಕೊಡುತ್ತದೆ.

ಇತ್ತೀಚೆಗಂತೂ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕ್ ಮಾಡಲು ಕಷ್ಟವಾಗಬಾರದು ಎನ್ನುವ ಕಾರಣಕ್ಕೆ Ticket Booking ಗಾಗಿ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಸಹಾಯದಿಂದ ಪ್ರಯಾಣಿಕರು ಯಾವುದೇ ಸಮಸ್ಯೆಯಿಲ್ಲದೆ ತಮ್ಮ ಟಿಕೆಟ್ ಅನ್ನು ಮನೆಯ್ಲಲಿಯೇ ಬುಕ್ ಮಾಡಿಕೊಳ್ಳಬಹುದಾಗಿದೆ.

Railway Ticket Transfer
Image Credit: Red Bus

ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ಸೇವೆ ಆರಂಭ
ಕೆಲವೊಮ್ಮೆ ಪ್ರಯಾಣಿಕರು ತಾವು ನಿರ್ಧರಿಸಿದ ಪ್ರಯಾಣವನ್ನು ಕೈಬಿಡುವ ಸನ್ನಿವೇಶ ಸಾಕಷ್ಟು ಎದುರಾಗುತ್ತವೆ. ಈ ಸಮಯದಲ್ಲಿ ಪ್ರಯಾಣಿಕರು ತಮ್ಮ ಕಾಯ್ದಿರಿಸಿದ ಟಿಕೆಟ್ ಅನ್ನು ಏನು ಮಾಡುವುದು ಎನ್ನುವ ಗೊಂದಲ್ಲಿರುತ್ತಾರೆ. ಇನ್ನುಮುಂದೆ ನೀವು ನಿಮ್ಮ ಪ್ರಯಾಣ ರದ್ದು ಮಾಡಲು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ರೈಲು ಇಲಾಖೆ ನಿಮ್ಮ ಕಾಯ್ದಿರಿಸಿದ ಟಿಕೆಟ್ ಅನ್ನು ಬೇರೊಬ್ಬ ವ್ಯಕ್ತಿಗೆ ವ್ಯಕ್ತಿಗೆ ವರ್ಗಾಯಿಸಲು ಅನುಮತಿ ನೀಡಿದೆ. ನೀವು ಈ ಷರತ್ತುಗಳ ಮೇರೆಗೆ ನಿಮ್ಮ ಟಿಕೆಟ್ ಅನ್ನು ಸುಲಭವಾಗಿ ಬೇರೆಯವರಿಗೆ ವರ್ಗಾಯಿಸಬಹುದು.

ಈಗ ನಿಮ್ಮ ಟಿಕೆಟ್ ಬೇರೆಯವರಿಗೆ ವರ್ಗಾಯಿಸಿ
ಪ್ರಯಾಣಿಕನು ತನ್ನ ಟಿಕೆಟ್ ಅನ್ನು ತಾಯಿ, ತಂದೆ, ಸಹೋದರ, ಸಹೋದರಿ, ಮಗ, ಮಗಳು, ಗಂಡ, ಹೆಂಡತಿಯಂತಹ ಕುಟುಂಬದ ಸದಸ್ಯರಿಗೆ ವರ್ಗಾಯಿಸಬಹುದು. ರೈಲ್ವೆ ನಿಯಮಗಳ ಪ್ರಕಾರ ನೀವು ನಿಮ್ಮ ಟಿಕೆಟ್ ಅನ್ನು ನಿಮ್ಮ ಪೋಷಕರು, ಒಡಹುಟ್ಟಿದವರು, ಮಗ ಅಥವಾ ಮಗಳು ಅಥವಾ ಹೆಂಡತಿಯಂತಹ ನಿಮ್ಮ ಕುಟುಂಬದ ಸದಸ್ಯರ ಹೆಸರಿಗೆ ಮಾತ್ರ ವರ್ಗಾಯಿಸಬಹುದು. ನಿಮ್ಮ ಸ್ನೇಹಿತರು ನಿಮ್ಮ ಟಿಕೆಟ್ ನಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.

Indian Railway Ticket Transfer New Rule
Image Credit: India

ಟಿಕೆಟ್ ವರ್ಗಾವಣೆಯ ನಿಯಮ ತಿಳಿದುಕೊಳ್ಳಿ
ನಿಯಮಗಳ ಪ್ರಕಾರ ನೀವೂ ಬೇರೆಯವರ ಹೆಸರಿಗೆ ಟಿಕೆಟ್ ವರ್ಗಾವಣೆ ಮಾಡಲು 24 ಗಂಟೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ನಿಮ್ಮ ಟಿಕೆಟ್ ಅನ್ನು ನಿಮಗೆ ಒಮ್ಮೆ ಮಾತ್ರ ವರ್ಗಾಯಿಸಬಹುದಾಗಿದೆ. ಪ್ರಯಾಣಿಕರು ಸರ್ಕಾರಿ ನೌಕರನಾಗಿದ್ದರೆ ಮತ್ತು ಅವರ ಕೆಲಸಕ್ಕೆ ಸಂಬಂಧಿಸಿದಂತೆ ಹೋಗುತ್ತಿದ್ದರೆ ಟಿಕೆಟ್ ವರ್ಗಾವಣೆಗೆ ಒಂದು ದಿನ ಮುಂಚಿತವಾಗಿ ವಿನಂತಿಯನ್ನು ಮಾಡಬೇಕು. ಹಾಗೆಯೆ ಯಾರಾದರೂ ಮದುವೆ ಅಥವಾ ಯಾವುದೇ ವೈಯಕ್ತಿಕ ಕೆಲಸಕ್ಕಾಗಿ ಪ್ರಯಾಣಿಸಬೇಕಾದರೆ ಅವರು 48 ಗಂಟೆಗಳ ಮುಂಚಿತವಾಗಿ ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

Join Nadunudi News WhatsApp Group

ಟಿಕೆಟ್ ವರ್ಗಾವಣೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
ಟಿಕೆಟ್ ಅನ್ನು ವರ್ಗಾಯಿಸಲು, ಮೊದಲು ನೀವು ಆ ಟಿಕೆಟ್‌ ನ ಪ್ರಿಂಟ್‌ ಔಟ್ ತೆಗೆದುಕೊಂಡು ಅದರೊಂದಿಗೆ ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. ಟಿಕೆಟ್ ಅನ್ನು ಯಾರ ಹೆಸರಿಗೆ ವರ್ಗಾಯಿಸಬೇಕೋ ಆ ವ್ಯಕ್ತಿಯ ಆಧಾರ್ ಕಾರ್ಡ್‌ ನಂತಹ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು. ಇದನ್ನು ಅನ್ವಯಿಸುವ ಮೂಲಕ ನೀವು ಟಿಕೆಟ್ ವರ್ಗಾವಣೆಗೆ ಅರ್ಜಿಯನ್ನು ನೀಡಬೇಕಾಗುತ್ತದೆ.

Join Nadunudi News WhatsApp Group