ಖ್ಯಾತ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ, ಇಡೀ ಪ್ರಪಂಚವೇ ಶಾಕ್ ಆಗಿದೆ, ಅಷ್ಟಕ್ಕೂ ಈ ನಟಿ ಯಾರು ಗೊತ್ತಾ.

ಈ ಭೂಮಿಯ ಮೇಲೆ ಏನೇನು ನಡೆಯುತ್ತದೆ ಅನ್ನುವುದನ್ನ ಊಹೆ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಎಂದು ಹೇಳಬಹುದು. ಹೌದು ಕಳೆದ ಎರಡು ವರ್ಷ ಬರಿ ಭಾರತದ ಚಿತ್ರರಂಗದ ಪಾಲಿಗೆ ಮಾತ್ರವಲ್ಲದೆ ಬೇರೆಬೇರೆ ದೇಶದ ಚಿತ್ರರಂಗದ ಪಾಲಿಗೆ ಕೂಡ ಬಹಳ ಕರಾಳವಾಗಿ ವರ್ಷವಾಗಿತ್ತು ಎಂದು ಹೇಳಬಹುದು. ಹೌದು ಅದೆಷ್ಟೋ ಚಿತ್ರರಂಗದ ಹಲವು ನಟ ನಟಿಯರು ಮತ್ತು ಚಿತ್ರರಂಗದ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದರು ಎಂದು ಹೇಳಬಹುದು. ಇನ್ನು ಈಗ ಖ್ಯಾತ ನಟಿಯೊಬ್ಬರ ದೇಹ ಚೀಲದಲ್ಲಿ ಪತ್ತೆಯಾಗಿದ್ದು ಇಡೀ ವಿಶ್ವವೇ ಶಾಕ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಈ ನಟಿ ಯಾರು ಮತ್ತು ಈಕೆ ಯಾವ ದೇಶದವರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಅವರು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೌದು ನಟಿ ರೈಮಾ ಕಾಣೆಯಾದ ಕಾರಣ ಆರ ಕುಟುಂಬದವರು ಪೊಲೀಸರಿಗೆ ದೂರನ್ನ ಕೊಟ್ಟಿದ್ದರು ಮತ್ತು ಇದರ ಸಲುವಾಗಿ ಪೊಲೀಸರು ಹುಡುಕುವ ಕೆಲಸವನಂ ಕೂಡ ಆರಂಭ ಮಾಡಿದ್ದರು. ಇನ್ನು ಇಂದು ಕೆರಣಿಗಂಜ್‍ನ ಹಜರತ್‍ಪುರ ಸೇತುವೆಯ ಬಳಿ ಗೋಣಿಚೀಲದಲ್ಲಿ ಆಕೆಯ ಶವ ಪತ್ತೆಯಾಗಿದೆ ಮತ್ತು ಪೊಲೀಸರು ದೇಹವನ್ನ ಹೊರತೆಗೆದು ಪರೀಕ್ಷೆಗೆ ಕಳುಹಿಸಿದ್ದು ತನಿಖೆಯನ್ನ ಕೂಡ ಆರಂಭ ಮಾಡಲಾಗಿದೆ.

Raima islam

ಸುಮಾರು 45 ವರ್ಷದ ರೈಮಾ 1998ರಲ್ಲಿ ಬರ್ತಮನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಸುಮಾರು 25 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅಷ್ಟೇ ಅಲ್ಲದೆ ಇವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದರು. ಇನ್ನು ಇವರು ಸಿನಿಮಾಗಳಲ್ಲಿ ಮಾತ್ರವಲ್ಲದೆ ಕೆಲವು ಧಾರಾವಾಹಿಯಲ್ಲಿ ಕೂಡ ನಟನೆಯನ್ನ ಮಾಡಿದ್ದು ದೇಶದಲ್ಲಿ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡಿದ್ದರು ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಇವರು ಕಾಣೆಯಾದ ದಿನದಿಂದ ಅಭಿಮಾನಿಗಳಲ್ಲಿ ಬಹಳ ಆತಂಕ ಉಂಟಾಗಿದ್ದು ಈಗ ದೇಹ ಚೀಲದಲ್ಲಿ ಸಿಕ್ಕಿದ್ದು ಇಡೀ ದೇಶವೇ ಶಾಕ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಅಲ್ಲಿನ ಅಭಿಮಾನಿಗಳು ತನಿಖೆಯನ್ನ ಬಹಳ ಸೂಕ್ಷ್ಮವಾಗಿ ಮಾಡಬೇಕು ಎಂದು ಒತ್ತಾಯವನ್ನ ಮಾಡುತ್ತಿದ್ದು ಸದ್ಯ ದೇಹವನ್ನ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ನೇಹಿತರೆ ಒಬ್ಬ ನಟಿಗೆ ಇಂತಹ ಪರಿಸ್ಥಿತಿ ಬಂದಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Raima islam

Join Nadunudi News WhatsApp Group