Rain Alert: ಜೂಲೈ 8 ರ ವರೆಗೆ ರಾಜ್ಯದ ಈ ಭಾಗದಲ್ಲಿ ಭರ್ಜರಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ.

ಜೂಲೈ 8 ರ ವರೆಗೆ ರಾಜ್ಯದ ಈ ಭಾಗದಲ್ಲಿ ಭರ್ಜರಿ ಮಳೆ

Rain Alert In Karnataka: ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ. ಜನರು ಸ್ಥಿತಿ ಅಸ್ತವಸ್ತವಾಗಿದೆ ಎನ್ನಬಹುದು. ರಾಜ್ಯದಲ್ಲೇ ಅನೇಕ ಪ್ರದೇಶದಲ್ಲಿ ವರ್ಷಧಾರೆ ಜೋರಾಗಿದೆ.

ಮಳೆ ಬಿಡುವಿಲ್ಲದೆ ಸುರಿಯುತ್ತಿರುವುದರಿಂದ ಅನೇಕ ರೀತಿಯಲ್ಲಿ ಹಾನಿ ಕೂಡ ಉಂಟಾಗಿದೆ ಎನ್ನಬಹುದು. ಇನ್ನು ವಿಪರೀತ ಮಳೆಯ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿತ್ತು. ಸದ್ಯ ಹವಾಮಾನ ಇಲಾಖೆ ಮುಂದಿನ ದಿನಗಲ್ಲಿ ಎದುರಾಗುವಂತಹ ಮಳೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

Rain Alert In Karnataka
Image Credit: Times Now News

ಜೂಲೈ 8 ರ ವರೆಗೆ ರಾಜ್ಯದ ಈ ಭಾಗದಲ್ಲಿ ಭರ್ಜರಿ ಮಳೆ
ರಾಜ್ಯದ ಕರಾವಳಿ ಭಾಗದಲ್ಲಿ ಇಂದಿನಿಂದ 4 ದಿನಗಳ ಕಾಲ Orange alert ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉ.ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಜುಲೈ 8 ರ ವರೆಗೆ Orange alert ಮತ್ತು ಜುಲೈ 9 ರಿಂದ Yellow alert ಘೋಷಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಹೆಚ್ಚಿನ ಸ್ಥಳಗಳಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ಹವಾಮಾನ ಇಲಾಖೆ Orange alert ಘೋಷಿಸಿದೆ.

Karnataka Rain Alert
Image Credit: Businesstoday

ಹವಾಮಾನ ಇಲಾಖೆ ಎಚ್ಚರಿಕೆ
ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗಾವಿ, ಧಾರವಾಡ ಮತ್ತು ಕೊಡಗು ಜಿಲ್ಲೆಗಳಿಗೆ Yellow alert ಘೋಷಿಸಲಾಗಿದ್ದು, ಶಿವಮೊಗ್ಗದಲ್ಲಿ Orange alert ಘೋಷಿಸಲಾಗಿದೆ. ಈ ಭಾಗದಲ್ಲಿ ಮುಂದಿನ 3 ದಿನ Orange alert ಹಾಗೂ 2 ದಿನ Yellow alert ಘೋಷಿಸಲಾಗಿದೆ. ಕೊಡಗು ಜಿಲ್ಲೆಗೆ ಇಂದಿನಿಂದ ಮೂರು ದಿನಗಳ ಕಾಲ Yellow alert ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ NDRF ತಂಡವನ್ನು ಕಳುಹಿಸಲಾಗಿದೆ. ಕಾರವಾರ, ಕುಮಟಾ, ಅಂಕೋಲಾಕ್ಕೆ 25 ಜನರ ಎರಡು NDRF ತಂಡಗಳನ್ನು ಕಳುಹಿಸಲಾಗಿದೆ. ಹವಾಮಾನ ಇಲಾಖೆ ಮಳೆಯ ಬಗ್ಗೆ ಎಚ್ಚರಿಸುತ್ತಿದೆ.

Join Nadunudi News WhatsApp Group

Rain Alert Update
Image Credit: Livemint

Join Nadunudi News WhatsApp Group