Rain Alert: ಸಾರ್ವಜನಿಕರೇ ಎಚ್ಚರ, ಮುಂದಿನ 48 ಘಂಟೆ ಈ ಭಾಗಗಳಲ್ಲಿ ಭರ್ಜರಿ ಮಳೆ.

ಮುಂದಿನ 48 ಘಂಟೆ ಈ ಭಾಗದಲ್ಲಿ ಆಗಲಿದೆ ಭರ್ಜರಿ ಮಳೆ

Karnataka Rain Alert: ಸದ್ಯ ರಾಜ್ಯದೆಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಪ್ರದೇಶದಲ್ಲಿ ಹಾನಿಯಾಗಿದೆ. ಜನರು ಸ್ಥಿತಿ ಅಸ್ತವಸ್ತವಾಗಿದೆ ಎನ್ನಬಹುದು. ರಾಜ್ಯದಲ್ಲೇ ಅನೇಕ ಪ್ರದೇಶದಲ್ಲಿ ವರ್ಷಧಾರೆ ಜೋರಾಗಿದೆ.

ಮಳೆ ಬಿಡುವಿಲ್ಲದೆ ಸುರಿಯುತ್ತಿರುವುದರಿಂದ ಅನೇಕ ರೀತಿಯಲ್ಲಿ ಹನಿ ಕೂಡ ಉಂಟಾಗಿದೆ ಎನ್ನಬಹುದು. ಇನ್ನು ವಿಪರೀತ ಮಳೆಯ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿತ್ತು. ಸದ್ಯ ಹವಾಮಾನ ಇಲಾಖೆ ಮುಂದಿನ 48 ಗಂಟೆಗಲ್ಲಿ ಎದುರಾಗುವಂತಹ ಮಳೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

rain alert karnataka
Image Credit: Original Source

ಸಾರ್ವಜನಿಕರೇ ಎಚ್ಚರ
ರಾಜ್ಯದೆಲ್ಲೆಡೆ ಜೂನ್ ನಿಂದ ಬಾರಿ ಮಳೆಯಾಗುತ್ತಿದೆ. ಕೆಲ ಪ್ರದೇಶದಲ್ಲಂತೂ ಪ್ರತಿನಿತ್ಯ ಮಳೆಯ ಆರ್ಭಟ ಜೋರಾಗಿದೆ. ಹೆಚ್ಚಿನ ಮಳೆಯಿಂದಾಗಿ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ವಿಪರೀತ ಮಳೆ ಕಾರಣ ಅಲ್ಲಲ್ಲಿ ಭೂಕುಸಿತ ಆಗಿರುವ ಘಟನೆ ಕೂಡ ಇದೆ. ಸದ್ಯ ಹವಾಮಾನ ಇಲಾಖೆ ಮುಂದಿನ 48 ಘಂಟೆ ಬರಲಿರುವ ಮಳೆಯ ಬಗ್ಗೆ ಜನಸಾಮಾನ್ಯರನ್ನು ಅಲರ್ಟ್ ಮಾಡಿದೆ.

ಮುಂದಿನ 48 ಘಂಟೆ ಈ ಭಾಗಗಳಲ್ಲಿ ಭರ್ಜರಿ ಮಳೆ
ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ ಹಾಗೂ ಮಧ್ಯ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಬಿರುಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು IMD ಪ್ರಕಾರ, ಗಾಳಿಯ ವೇಗ ಗಂಟೆಗೆ 30-40 ಕಿ.ಮೀ. ಇದೆ ಎಂದು ತಿಳಿಸಿದೆ. ಜನಸಾಮಾನ್ಯರು ಮಳೆಯಿಂದ ಎಚ್ಚರಿಕೆ ವಹಿಸಬೇಕು ಎಂದು IMD ಸೂಚಿಸಿದೆ.

rain flow in karnataka 2024
Image Credit: Original Source

Join Nadunudi News WhatsApp Group

Join Nadunudi News WhatsApp Group