Raj B. Shetty: ರಮ್ಯಾ ಕೇಸ್ ಸೋತ ಮರುಕ್ಷಣವೇ ಹಾಸ್ಟೆಲ್ ಹುಡುಗರಿಗೆ ವಿಶೇಷ ಪತ್ರ ಹಂಚಿಕೊಂಡ ರಾಜ್ ಬಿ ಶೆಟ್ಟಿ
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನ ಮೆಚ್ಚಿಕೊಂಡು ಪತ್ರ ಬರೆದ ರಾಜ್ ಶೆಟ್ಟಿ.
Raj B. Shetty About Hostel Hudugaru Bekagiddare: ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ ನಟ ರಾಜ್ ಬಿ ಶೆಟ್ಟಿ (Raj B. Shetty) ಅವರು ಕನ್ನಡಿಗರಿಗೆ ಚಿರಪರಿಚಿತರು. ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯರಾದ ರಾಜ್ ಬಿ ಶೆಟ್ಟಿ ಅವರು ನಿರ್ದೇಶಕರಾಗಿ ಕೂಡ ಖ್ಯಾತಿ ಪಡೆದಿದ್ದಾರೆ.
ಇವರ ಯಾವುದೇ ಚಿತ್ರ ಬಿಡುಗಡೆಗೊಂಡರು ಹಿಟ್ ಆಗುತ್ತದೆ. ಇದೀಗ ರಾಜ್ ಬಿ ಶೆಟ್ಟಿ ಅವರು ಹಾಸ್ಟೆಲ್ ಹುಡುಗರು(Hostel Hudugaru) ಬೇಕಾಗಿದ್ದಾರೆ ಚಿತ್ರತಂಡಕ್ಕೆ ವಿಶೇಷ ಪತ್ರ ಬರೆದಿದ್ದಾರೆ. ಇವರ ಪತ್ರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (hostel Hudugaru Bekagiddaare Movie)
ಇತ್ತೀಚೆಗಷ್ಟೇ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ವಿವಾದಕ್ಕೆ ಒಳಗಾಗಿತ್ತು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ನಟಿ ರಮ್ಯಾ ಲೀಗಲ್ ನೋಟಿಸ್ ಕಳುಹಿಸಿ ಒಂದು ಕೋಟಿ ಹಣ ಪರಿಹಾರವನ್ನು ಕೇಳಿದ್ದರು. ಇದರಿಂದ ಚಿತ್ರದ ಬಿಡುಗಡೆಗೆ ತೊಂದರೆ ಉಂಟಾಗಿತ್ತು.
ಆದರೆ ಕೋರ್ಟ್ ರಮ್ಯಾ ಅವರ ನೋಟಿಸ್ ಅನ್ನು ತಿರಸ್ಕರಿ ಚಿತ್ರ ತಂಡದ ಮೇಲಿದ್ದ ಆರೋಪವನ್ನು ತೆಗೆದುಹಾಕಿದೆ. ಹೀಗಾಗಿ ಜುಲೈ 21 ರಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಭರ್ಜರಿಯಾಗಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಪತ್ರದ ಮೂಲಕ ರಾಜ್ ಬಿ ಶೆಟ್ಟಿ ಅವರು ಶುಭಾಶಯ ಕೋರಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡಕ್ಕೆ ರಾಜ್ ಬಿ ಶೆಟ್ಟಿ ಪತ್ರ
ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಕನ್ನಡ ಪ್ರೇಕ್ಷಕರ ಕೊರತೆಯಿದೆ ಎಂಬ ಹತಾಶೆಯನ್ನು ಸತ್ಯವೆಂದು ನಂಬಿ ಕುಳಿತಿದ್ದೆವು ನಾವು. ಮೊದಲ ಬಾರಿಗೆ ನಮ್ಮ ನಂಬಿಕೆ ಸುಳ್ಳಾಗಿದ್ದಕ್ಕೆ ಅಪಾರ ಸಂತೋಷವಿದೆ. ಅದನ್ನು ಕೆಡವಿದ ನಿಮ್ಮ ತಂಡಕ್ಕೆ ನಮ್ಮ ಪ್ರಣಾಮಗಳು. ಚಿತ್ರಮಂದಿರದಲ್ಲಿ ಪ್ರೇಕ್ಷಕರು ನುಗ್ಗಬೇಕಾದಲ್ಲಿ ನೂರಾರು ಕೋಟಿ ಬಜೆಟ್ ನ ಅಗತ್ಯವಿದೆ.
ಸ್ಟಾರ್ ನಟರ, ನಿರ್ದೇಶಕರ ಅನಿವಾರ್ಯತೆ ಇದೆ ಎಂಬೆಲ್ಲ ಸುಳ್ಳುಗಳನ್ನು ಸಮರ್ಥವಾಗಿ ನಿವಾಳಿಸಿ ಎಸೆದಿದ್ದಕ್ಕೆ ಧನ್ಯವಾದಗಳು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಇದು ಹುಚ್ಚು ಮನಸ್ಸಿನ ಅಭಿವ್ಯಕ್ತಿ. ಹತ್ತಾರು ಹುಡುಗರು ಗಂಭೀರವಾಗಿ ಮಾಡಿದ ತಮಾಷೆಯ ಸಿನಿಮಾ. ಜೊತೆಗೆ ಈ ಸಿನೆಮಾ ಮುಂದೆ ಬರುವ ಇನ್ನಷ್ಟು ಹುಚ್ಚು ಹುಡುಗರಿಗೆ ಧೈರ್ಯ. ಇಂತಹ ಸಿನಿಮಾಗಳು ಗೆದ್ದಾಗ ಮಾತ್ರ ಚಿತ್ರೋದ್ಯಮಕ್ಕೆ ನಿಜವಾದ ಲಾಭ.
View this post on Instagram
ಕನಸುಗಳಿಗೆ ಬಂಡವಾಳದ ಭಯವಿರಬಾರದು, ಕನಸುಗಳಿಗೆ ಸಿದ್ದ ಸೂತ್ರಗಳ ಹೊರೆಯಿರಬಾರದು, ಕನಸುಗಳಿಗೆ ವ್ಯಾಪಾರದ ಹಂಗಿರಬಾರದು. ಕನಸುಗಳಿಗೆ ಪ್ರಾಮಾಣಿಕತೆ, ಹಸಿವು, ಧೈರ್ಯ, ಅಪಾರ ಹುಚ್ಚು, ಒಂದಷ್ಟು ಪ್ರಾಕ್ಟಿಕಾಲಿಟಿ ಇಷ್ಟು ಜೊತೆಗಿದ್ದರೆ ನೀವೂ ಒಂದು ಸಿನಿಮಾ ಮಾಡಬಹುದು. ಇದನ್ನು ನಿರೂಪಿಸಿ ಗೆದ್ದ HHB ತಂಡಕ್ಕೆ ಜಯವಾಗಲಿ ಎಂದು ಪ್ರೀತಿಯಿಂದ ರಾಜ್ ಬಿ ಶೆಟ್ಟಿ ಪತ್ರ ಬರೆದಿದ್ದಾರೆ.