Raj B Shetty: ಬ್ರೇಕಪ್ ಬಗ್ಗೆ ಮುಲಾಜಿಲ್ಲದೆ ಸತ್ಯ ತಿಳಿಸಿದ ರಾಜ್ ಬಿ ಶೆಟ್ಟಿ

ಪ್ರೀತಿ, ಪ್ರೇಮ, ಬ್ರೇಕಪ್ ಕುರಿತು ಮನಬಿಚ್ಚಿ ಮಾತನಾಡಿದ ರಾಜ್ ಬಿ ಶೆಟ್ಟಿ.

Raj B Shetty Love Story: ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ರಾಜ್ ಬಿ ಶೆಟ್ಟಿ ಅವರು ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ ಹಾಗೆ ನಿರ್ದೇಶಕರಾಗಿ ಕೂಡ ಖ್ಯಾತಿ ಪಡೆದಿದ್ದಾರೆ.
ಇದೀಗ ರಾಜ್ ಬಿ ಶೆಟ್ಟಿ(Raj B Shetty) ಅವರ ನಟನೆಯ ‘ಟೋಬಿ’ ಮೂವಿ(Toby movie) ಆಗಸ್ಟ್ 25 ರಂದು ಚಿತ್ರ ರಂಗದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಅವರು ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್(Bharjari Bachelors ) ರಿಯಾಲಿಟಿ ಶೋನ ವೇದಿಕೆಯನ್ನು ಏರಿದ್ದರು. ಈ ವೇಳೆ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ, ಹಾಗೆ ಪ್ರೀತಿ, ಪ್ರೇಮ, ಬ್ರೇಕಪ್ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

Raj B Shetty shares his opinion about love marriage
Image Credit: TV9kannada

ಲವ್ ಮ್ಯಾರೇಜ್ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡ ರಾಜ್ ಬಿ ಶೆಟ್ಟಿ
ಪ್ರೀತಿ ವಿಚಾರದ ಬಗ್ಗೆ ಒಬೊಬ್ಬರಿಗೆ ಒಂದೊಂದು ಅಭಿಪ್ರಾಯ ಇರುತ್ತದೆ, ಅದು ಅವರವರ ಮನಸ್ಥಿತಿಗೆ ಬಿಟ್ಟುರುವಂತದ್ದು. ಒಬ್ಬರಿಗೆ ಲವ್ ಮ್ಯಾರೇಜ್ ಇಷ್ಟ ಆದರೆ ಅದು ಇನ್ನೊಬ್ಬರಿಗೆ ಇಷ್ಟ ಆಗುದಿಲ್ಲ. ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋನಲ್ಲಿ ರಾಜ್ ಬಿ ಶೆಟ್ಟಿ ಅವರು ನನಗೆ ಲವ್ ಮ್ಯಾರೇಜ್ ಆಗೋದು ಇಷ್ಟ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಶನ್ ಹಾಕಲ್ಲ ಎಂದ ರಾಜ್ ಬಿ ಶೆಟ್ಟಿ
ರಿಯಾಲಿಟಿ ಶೋನಲ್ಲಿ ರಾಜ್ ಬಿ ಶೆಟ್ಟಿ ಅವರಿಗೆ ಮದುವೆಯಾಗೋ ಹುಡುಗಿ ನೀವು ಬದಲಾಗಬೇಕು ಎಂದರೆ ಏನು ಮಾಡುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಅವರು ‘ನಾನು ಇರೋದು ಇಷ್ಟೇ . ನಾನು ಇರೋದೇ ಒಂದು ಲೋಟ. ಆ ನೀರನ್ನು ಚೊಂಬಿನಲ್ಲಿ ಹಾಕಿ ತುಂಬಿಸ್ತಿನಿ ಎಂದರೆ ಸಾಧ್ಯವಿಲ್ಲ. ನಾನು ಇರುವ ಹಾಗೆ ಇರೋಕೆ ಬಿಡು. ನೀನು ಹೇಗಿದ್ದರೂ ನಾನು ಅದನ್ನು ಪ್ರಶ್ನೆ ಮಾಡಲ್ಲ. ಇಬ್ಬರು ಬೆಳೆಯುತ್ತ ಹೋಗಬೇಕು. ಪ್ರಬುದ್ಧತೆ ಇರುವ ವ್ಯಕ್ತಿ ಕಂಡೀಶನ್ ಹಾಕಲ್ಲ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.

Raj B Shetty spoke openly about the breakup
Image Credit: TV9kannada

ಬ್ರೇಕಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಜ್ ಬಿ ಶೆಟ್ಟಿ
ನಾನು ಪದವಿ ಓದುತ್ತಿರುವಾಗ ಒಂದು ಹುಡುಗಿ ಪ್ರೀತಿ ಮಾಡಿದ್ದಳು. ನಾನು ಮೊದಲೇ ಅವಳಿಗೆ ಹೇಳಿದ್ದೆ, ‘ನೀನು ಬಿಟ್ಟು ಹೋಗುತ್ತೀಯಾ ಎಂದರೆ ನಾನು ಕಾರಣ ಕೇಳುದಿಲ್ಲ’ ಎಂದು. ಹೇಳಿದ ಹಾಗೆ ಆರು ವರ್ಷಗಳ ನಂತರ ಬ್ರೇಕಪ್ ಆಯಿತು. ಅವಳು ಬಿಟ್ಟು ಹೋಗದೆ ಇದಿದ್ದರೆ ನಾನು ಕೆಟ್ಟವನಾಗಿಯೇ ಉಳಿಯುತ್ತಿದ್ದೆ, ಅಂದರೆ ನಾನು ಒಳ್ಳೆಯವನಾಗಿದ್ದೀನಿ ಅಂತಲ್ಲ.

ಇದರಿಂದ ನನಗೆ ನಾನು ಎಷ್ಟು ಕೆಟ್ಟವನು ಅನ್ನುವುದು ಅರಿವಾಗಿದೆ. ಅವಳಿಂದ ಬ್ರೇಕಪ್ ಆಗಿದ್ದರಿಂದಲೇ ನಾನು ಬೆಳೆದೆ. ಅವಳು ನನಗೆ ಪ್ರೀತಿ ಕೊಡಲು ಬಂದಿರಲಿಲ್ಲ ಎಂಬುದು ನನಗೆ ಅರಿವಾಯಿತು. ‘ನಾನು ಯೋಗ್ಯ ಅಲ್ಲ ಅನ್ನೋದನ್ನು ತೋರಿಸಿ ಹೋದಳು’ ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group