Rajamouli Father Vijayendra Prasad: ರಾಜಮೌಳಿಗೆ ಕಥೆ ಕೊಡಲು ದುಬಾರಿ ಸಂಭಾವನೆ ಕೇಳಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್.

V. Vijayendra Prasad Remuneration Per Movie: ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ (S.S Rajamouli) ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕೂಡ ಅನೇಕ ಹಿಟ್ ಸಿನಿಮಾಗಳಿಗೆ ಕಥೆ ನೀಡಿದ್ದಾರೆ. ತೆಲುಗು ಚಿತ್ರಗಳ ಜೊತೆಗೆ ಸಾಕಷ್ಟು ಹಿಂದಿ ಚಿತ್ರಗಳಿಗೂ ಕೂಡ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ (Vijayendra Prasad) ಕಥೆ ನೀಡಿದ್ದಾರೆ.

Vijayendra Prasad gets a salary of two crores to write the story for a film
Image Credit: bollywoodhungama

ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್
ಬಾಹುಬಲಿ ಸಿನಿಮಾ ಸಮಯದಲ್ಲಿ ವಿಜಯೇಂದ್ರ ಪ್ರಸಾದ್ ಬಾಲಿವುಡ್ ನ ಭಜರಂಗಿ ಭಾಯಿಜಾನ್ ಚಿತ್ರಕ್ಕೆ ಕಥೆ ಹೇಳಿದ್ದರು. ಇದಕ್ಕೂ ಮುನ್ನ ಕಥೆಯನ್ನು ಆಮಿರ್ ಖಾನ್ ಅವರಿಗೆ ಹೇಳಿದ್ದರು. ಆದರೆ ಅವರು ಕಥೆಯನ್ನು ರಿಜೆಕ್ಟ್ ಮಾಡಿದ್ದರು.

ಇದರೊಂದಿಗೆ ಭಜರಂಗಿ ಭಾಯಿಜಾನ್ (Bajrangi Bhaijaan Movie) ಕಥೆ ಸಲ್ಮಾನ್ ಖಾನ್ (Salman Khan) ಬಳಿ ಹೋಗಿತ್ತು. ಮೊದಲು ಸಿನಿಮಾ ಕಥೆ ಕೇಳಿದ ಸಲ್ಮಾನ್ ಖಾನ್ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿ ನಿರ್ಮಾಪಕರೊಂದಿಗೆ ಮಾತನಾಡಲು ಹೇಳಿದ್ದರಂತೆ.

All Rajamouli's films are written by his father Vijayendra Prasad
Image Credit: instagramtimesofindia.indiatimes

ಇದರಂತೆ ನಿರ್ಮಾಪಕರೊಬ್ಬರಿಗೆ ಕಥೆ ಕೇಳಿದ ಸಂದರ್ಭದಲ್ಲಿ ಅವರು 20 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರಂತೆ.

Join Nadunudi News WhatsApp Group

ನಿರ್ಮಾಪಕರ ಆಫರ್ ರಿಜೆಕ್ಟ್ ಮಾಡಿದ ವಿಜಯೇಂದ್ರ ಪ್ರಸಾದ್ ಅವರು ಇದು 100 ಕೋಟಿ ರೂಪಾಯಿ ಕಲೆಕ್ಟ್ ಮಾಡುವ ಸಿನಿಮಾದ ಕಥೆ. ಈ ಕಥೆಗೆ ಎರಡು ಕೋಟಿ ರೂಪಾಯಿಗೆ ಒಂದು ರೂಪಾಯಿ ಕಡಿಮೆ ಆದರೂ ಕಥೆ ಕೊಡುವುದಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.

Vijayendra Prasad will get a salary of two crores even if he writes the story for one film
Image Credit: instagram

ಈ ವಿಚಾರ ಸಲ್ಮಾನ್ ಖಾನ್ ಅವರಿಗೆ ತಿಳಿದು ಅವರು ಬೇರೆ ನಿರ್ಮಾಪಕರನ್ನು ಕಳುಹಿಸಿದ್ದಾರಂತೆ. ಈ ನಿರ್ಮಾಪಕರಿಗೆ ಕಥೆ ಇಷ್ಟ ಆಗುವುದರೊಳಗೆ ಕೂಡಲೇ ಎರಡು ಕೋತಿ ರೂಪಾಯಿ ಕೊಟ್ಟು ಕಥೆಯ ಹಕ್ಕುಗಳನ್ನು ಪಡೆದುಕೊಂಡಿದ್ದರು.

ಇನ್ನು ಭಜರಂಗಿ ಭಾಯಿಜಾನ್ 2015 ರಂದು ತೆರೆಕಂಡಿದ್ದು, ಭರ್ಜರಿ ಯಶಸ್ಸು ಗಳಿಸಿದೆ. ನಟ ಸಲ್ಮಾನ್ ಖಾನ್ ಭಜರಂಗಿ ಭಾಯಿಜಾನ್ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದ್ದರು. ಭಜರಂಗಿ ಭಾಯಿಜಾನ್ ಸೀಕ್ವೆಲ್ ಗೂ ಕೂಡ ನಾನೇ ಕಥೆ ಬರೆಯಬೇಕು ಎಂದಿದ್ದರು.

Join Nadunudi News WhatsApp Group