ಖ್ಯಾತ ನಟ ರಜನೀಕಾಂತ್ ಯಾರಿಗೆ ತಾನೇ ಇಷ್ಟವಲ್ಲ. ಮೂಲತಃ ಕನ್ನಡದವರಾದ ರಜನೀಕಾಂತ್ ಅವರಿಗೆ ದೇಶಾದ್ಯಂತ ಅಪರಾವದ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಕೋಟ್ಯಾಂತರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿರುವ ನಟ ರಜನೀಕಾಂತ್ ಅವರು ದೇಶದ ಒಬ್ಬ ಶ್ರೀಮಂತ ನಟ ಎಂದು ಹೇಳಬಹುದು. ಮೊನ್ನೆ ಮೊನ್ನೆತಾನೆ ನಟ ರಜನೀಕಾಂತ್ ಅವರ ಅಣ್ಣಾಥೆ ಚಿತ್ರ ಬಿಡುಗಡೆಯಾಗಿದ್ದು ಜನರ ಈ ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ರಜನೀಕಾಂತ್ ಅವರು ಬಹಳ ಬ್ಯುಸಿ ಇರುತ್ತಾರೆ, ಆದರೆ ಅವರ ಅಭಿಮಾನಿಗಳಿಗೋಸ್ಕರ ಸದಾ ಸಹಾಯವನ್ನ ಮಾಡುತ್ತಿದ್ದಾರೆ.
ಇನ್ನು ರಜನೀಕಾಂತ್ ಅವರಿಗೆ ಬೆಂಗಳೂರಿನಲ್ಲಿ ಒಬ್ಬಳು ಅಭಿಮಾನಿ ಇದ್ದು ಆಕೆಯ ಹೆಸರು ಸೌಮ್ಯ. ಸೌಮ್ಯ ಅವರಿಗೆ ರಜನೀಕಾಂತ್ ಅಂದರೆ ತುಂಬಾ ಇಷ್ಟ ಮತ್ತು ಜೀವನದಲ್ಲಿ ಒಮ್ಮೆಯಾದರೂ ಅವರ ಜೊತೆ ಮಾತನಾಡಬೇಕು ಅನ್ನುವ ಬಯಕೆಯನ್ನ ಹೊತ್ತಿದ್ದಾರೆ ಅಭಿಮಾನಿ ಸೌಮ್ಯ. ಇನ್ನು ಬೇಸರದ ಸಂಗತಿ ಏನು ಅಂದರೆ ಅಭಿಮಾನಿ ಸೌಮ್ಯ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದ್ದು ಅವರು ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ. ತಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಆದರೆ ಒಮ್ಮೆ ನಾನು ರಜನೀಕಾಂತ್ ಅವರನ್ನ ನೋಡಬೇಕು ಅನ್ನುವ ಆಸೆಯನ್ನ ಹೊತ್ತಿದ್ದರು ಸೌಮ್ಯ.
ಇನ್ನು ರಜನೀಕಾಂತ್ ಅವರಿಗೆ ಅಭಿಮಾನಿಗಳನ್ನ ಕಂಡರೆ ಬಹಳ ಪ್ರೀತಿ ಮತ್ತು ಅವರು ಅದೆಷ್ಟೋ ಅಭಿನನಿಗಳಿಗೆ ಸಹಾಯವನ್ನ ಕೂಡ ಮಾಡಿದ್ದಾರೆ. ಇನ್ನು ಈಗ ಬೆಂಗಳೂರಿನ ಅಭಿಮಾನಿ ಸೌಮ್ಯ ಆಸೆಯನ್ನ ಈಡೇರಿಸಲು ರಜನೀಕಾಂತ್ ಮಾಡಿದ ಕೆಲಸ ನೋಡಿ ಇಡೀ ದೇಶವೇ ಹೆಮ್ಮೆ ಪಟ್ಟಿದೆ ಎಂದು ಹೇಳಬಹುದು. ಹಾಗಾದರೆ ರಜನೀಕಾಂತ್ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈಗ ಬೆಂಗಳೂರಿನ ಯುವತಿ ಒಬ್ಬಳ ಆಸೆಯನ್ನು ಸೂಪರ್ ಸ್ಟಾರ್ ಈಡೇರಿಸಿದ್ದಾಳೆ.
ಹೌದು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಯುವತಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡಿದ್ದಾರೆ ರಜನೀಕಾಂತ್ ಅವರು. ಸೌಮ್ಯಳನ್ನ ಭೇಟಿಮಾಡಲು ಮನಸ್ಸು ಮಾಡಿದ್ದ ನಟ ರಜನೀಕಾಂತ್ ಅವರಿಗೆ ಕರೋನ ಕಾರಣ ಅವರನ್ನ ಭೇಟಿಮಾಡಲು ಸಾಧ್ಯವಾಗಲಿಲ್ಲ, ಆದರೆ ವಿಡಿಯೋ ಕಾಲ್ ಮೂಲಕ ಸೌಮ್ಯ ಜೊತೆ ಮಾತನಾಡಿದ ರಜನೀಕಾಂತ್ ಅವರು ಅವರಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡಿದ್ದಾರೆ. ರಜನಿಕಾಂತ್ ಅವರಿಗೆ ಕರೆ ಮಾಡಿದ್ದ ಸೌಮ್ಯಾ ತಂದೆ ಮಗಳ ಆಸೆ ಬಗ್ಗೆ ವಿವರಿಸಿದ್ದರು. ನಂತರ ರಜನಿ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಅಷ್ಟೇ ಅಲ್ಲ ಅವರ ಸಹೋದರ ಸತ್ಯನಾರಾಯಣ್ ಅವರು ಸೌಮ್ಯಾ ಮನೆಗೆ ಭೇಟಿ ನೀಡಿ ರಜನಿ ಪರವಾಗಿ ಧೈರ್ಯ ತುಂಬೋ ಕೆಲಸಮಾಡಿ ಬಂದಿದ್ದಾರೆ. ಇನ್ನು ಸತ್ಯನಾರಾಯಣ್ ಅವರಿಗೆ ಸೌಮ್ಯ ಅವರಿಗೆ ರಜನೀಕಾಂತ್ ಪರವಾಗಿ ಧೈರ್ಯ ತುಂಬುವ ಕೆಲಸವನ್ನ ಕೂಡ ಮಾಡಿದ್ದಾರೆ. ಸ್ನೇಹಿತರೆ ರಜನೀಕಾಂತ್ ಅವರ ಈ ಗುಣದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.