Rajesh Dhruva: ಅಸಲಿಗೆ ಮನೆಯಲ್ಲಿ ಆಗಿದ್ದೆ ಬೇರೆ, ಸಂಪತ್ ಸಾವಿಗೆ ಅಸಲಿ ಕಾರಣ ತಿಳಿಸಿದ ರಾಜೇಶ್.

ಸಂಪತ್ ಜಯರಾಮ್ ಅವರ ಸಾವಿ ಹೇಗಾಗಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ ರಾಜೇಶ್ ಧ್ರುವ.

Rajesh Dhruva About Sampath Jayaram Suicide: ಕಿರುತೆರೆಯ ಖ್ಯಾತ ನಟನಾಗಿದ್ದ ಸಂಪತ್ ಜಯರಾಮ್ (Sampath Jayaram) ಏಪ್ರಿಲ್ 22 ರಂದು ವಿಧಿವಶರಾಗಿದ್ದರು. ಸಂಪತ್ ಅವರ ಸಾವಿನ ಬೆನ್ನಲ್ಲಿಯೇ ಸಾಕಷ್ಟು ಗಾಸಿಪ್ ಗಳು ಹುಟ್ಟಿಕೊಂಡವು. ಸಹನಟನ ಸಾವಿನ ಕಾರಣ ಏನು ಎಂಬುದನ್ನು ಅಗ್ನಿಸಾಕ್ಷಿ ಧಾರಾವಾಹಿಯ ಖ್ಯಾತ ನಟ ರಾಜೇಶ್ ಧ್ರುವ (Rajesh Dhruva) ಅವರು ಹೇಳಿದ್ದಾರೆ.

Rajesh Dhruva has given the information about the actual cause of Sampath Jayaram's death
Image Credit: varthabharati

ವಿಧಿವಶರಾದ ಕಿರುತೆರೆ ನಟ ಸಂಪತ್
ನಟ ಸಂಪತ್ ಜಯರಾಮ್ ಸಾವಿನ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹುಟ್ಟಿಕೊಂಡಿವೆ, ಇದೀಗ ಇವರ ಸಾವಿಗೆ ಕಾರಣ ಏನು ಎಂಬುದನ್ನು ನಟ ರಾಜೇಶ್ ಧ್ರುವ ಹೇಳಿದ್ದಾರೆ. ಆಪ್ತ ಸ್ನೇಹಿತನ ಬಗ್ಗೆ ಕೆಟ್ಟ ಗಾಸಿಪ್ ಗಳನ್ನೂ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಂಪತ್ ಸಾವಿನ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ನಟ ರಾಜೇಶ್ ಧ್ರುವ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಂಪತ್ ಸಾವನಪ್ಪಿದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Rajesh Dhruva has given the information about the actual cause of Sampath Jayaram's death
Image Credit: timesofindia.indiatimes

ಸಂಪತ್ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ ರಾಜೇಶ್
ಸಂಪತ್ ಹೇಗೆ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು ಅಷ್ಟು ಸಿಂಪಲ್ ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ವೀಕ್ ಮೈಂಡ್ ಹುಡುಗ ಅಲ್ಲ ಏಕೆಂದರೆ ಸಂಪತ್ ಅನೇಕರಿಗೆ ತಿದ್ದಿ ಬುದ್ಧಿ ಹೇಳಿದ್ದಾರೆ. ಆರ್ಥಿಕ ಸಮಸ್ಯೆ ಇತ್ತು, ಗಂಡ ಹೆಂಡತಿ ನೆಮ್ಮದಿಯಾಗಿ ಇರಲಿಲ್ಲ, ಅವಕಾಶ ಸಿಗಲಿಲ್ಲ ಎಂದು ಡಿಪ್ರೆಶನ್‌ನಲ್ಲಿದ್ದ ಅಂತಾ ವಿಡಿಯೋ ಹರಿದಾಡುತ್ತಿದೆ.

ಚಾನ್ಸ್ ಇರಲಿಲ್ಲ ನಿಜ, ಆದರೆ ನಮ್ಮ ತಂಡದಲ್ಲಿ ನಮಗೆ ನಾವೇ ಚಾನ್ಸ್ ಸೃಷ್ಠಿ  ಮಾಡಿಕೊಳ್ಳುತ್ತೇವೆ. ಸ್ವಲ್ಪ ವರ್ಷದಲ್ಲಿ ಒಂದೊಳ್ಳೆ ನಟ ಅಂತ ಹೆಸರು ಮಾಡುವ ಸಾಮರ್ಥ್ಯ ಅವನಲ್ಲಿ ಇತ್ತು.

 

View this post on Instagram

 

A post shared by Rajesh Dhruva (@onlyrajeshdhruva)

Join Nadunudi News WhatsApp Group

ಅಚಾನಕ್ ಆಗಿ ಸತ್ತು ಹೋದ ಸಂಪತ್
ಅಗ್ನಿಸಾಕ್ಷಿ ಧಾರಾವಾಹಿ ನೋಡಿ ಅನೇಕರು ಅವನ ನಟನೆ ಮೆಚ್ಚಿಕೊಂಡಿದ್ದರು. ಸಂಪತ್ ಎಂದಿಗೂ ಸೋಲು ಒಪ್ಪಿಕೊಳ್ಳುತ್ತಿರಲಿಲ್ಲ ತುಂಬಾ ಪ್ರಯತ್ನ ಮಾಡುತ್ತಿದ್ದರು. ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತಾ ಬಂದಾಗ ಹುಡುಗಾಟ ಮಾಡಿಕೊಳ್ಳಲು ಹೋಗಿ ಈ ರೀತಿ ಪರಿಣಾಮ ಬೀರಿದೆ.

ದಯವಿಟ್ಟು ಕೆಟ್ಟ ಗಾಸಿಪ್ ಮಾಡಬೇಡಿ. ಗಂಡ-ಹೆಂಡತಿ ನಡುವೆ ಆದ ಚಿಕ್ಕ ಜಗಳಕ್ಕೆ ನಾನು ಸತ್ತು ಹೋಗುತ್ತೀನಿ ಹಾಗೆ ಹೀಗೆ ಎಂದು ಹೆದರಿಸಿದ್ದಾನೆ, ಆಗ ಕುತ್ತಿಗೆ ಲಾಕ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹೀಗೆ ಮಾಡಿರೋದು ಅಲ್ಲ, ಹೆದರಿಸಲು ಹೋಗಿ ಅಚಾನಕ್ ಆಗಿ ಹೀಗೆ ಎಂದು ನಟ ರಾಜೇಶ್ ಧ್ರುವ ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group