Ads By Google

Meena Daughter: ಮೀನಾ ಎರಡನೇ ಮಗುವಿನ ಗರ್ಭಿಣಿ, ಮೀನಾ ಮಗಳ ಮಾತು ಕೇಳಿ ಕಣ್ಣೀರಿಟ್ಟ ತಲೈವಾ.

Meena Daughter And Rajinikanth

Image Source: India Posts English

Ads By Google

Meena Daughter And Rajinikanth: ಬಹುಭಾಷಾ ನಟಿ ನಟಿ ಮೀನಾ (Meena) ಹಿಂದೆ ತಮ್ಮ ಎರಡನೆಯ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದರು. ಮೀನಾ ಅವರ ಎರಡನೇ ಮದುವೆಯ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ತಮ್ಮ ಎರಡನೇ ಮದುವೆಯ ಬಗ್ಗೆ ನಟಿ ಮೀನಾ ಸಾಕಷ್ಟು ಬಾರಿ ಸ್ಪಷ್ಟನೆ ಕೂಡ ನೀಡಿದ್ದರು.

ಇತ್ತೀಚೆಗಂತೂ ಮೀನಾ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ಇದೀಗ ನಟಿ ಮೀನಾ ಅವರು ಮಗಳು ತಮ್ಮ ಅಮ್ಮನ ಬಗ್ಗೆ ಮಾತನಾಡಿದ್ದಾರೆ. ಅಮ್ಮನ ಬಗ್ಗೆ ಮಾತನಾಡಿದ ಮಗುವಿನ ಮಾತುಗಳನ್ನು ಕೇಳಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikant) ಅವರು ಭಾವುಕರಾಗಿದ್ದಾರೆ.

Image Source: India Today

ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ನಟಿ ಮೀನಾ
ನಟಿ ಮೀನಾ ಅವರು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ನಟಿ ಮೀನಾ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ಇನ್ನು ನಟಿ ಕಳೆದ ಜೂನ್ 22 ರಂದು ತಮ್ಮ ಪತಿಯನ್ನು ಕಳೆದುಕೊಡಿದ್ದರು.

ನಟಿ ಮೀನಾ ಅವರು ತಮ್ಮ ಪತಿಯ ಅಗಲಿಕೆಯ ನೋವಿನಿಂದಾಗಿ ಸ್ವಲ್ಪ ಸಮಯದ ಕಾಲ ಚಿತ್ರರಂಗದಿಂದ ದೂರ ಇದ್ದರು. ಆದರೆ ಇತ್ತೀಚೆಗಷ್ಟೇ ನಟಿ ಪತಿಯ ಅಗಲಿಕೆಯ ನೋವಿನಿಂದ ಹೊರಬಂದು ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನು ನಟಿ ಮೀನಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷಗಳು ಕಳೆದಿದೆ. ಇನ್ನು 4 ದಶಕಗಳನ್ನು ಪೂರೈಸಿದ ಸಂಭ್ರಮಕ್ಕೆ ಅದ್ದೂರಿ ಕಾರ್ಯಕ್ರಮ ನೆರವೇರಿದೆ.

ಈ ವೇಳೆ ನಟಿ ಮೀನಾ ಅವರ 12 ವರ್ಷದ ಮಗಳು ನೈನಿಕ ತಮ್ಮ ತಾಯಿಯ ಬಗ್ಗೆ ಮನದಾಳದ ಮಾತುಗಳನ್ನು ಆಡಿದ್ದಾರೆ. ನೈನಿಕ ಮಾತುಗಳನ್ನು ಕೇಳಿದವರು ಬಾವುಕರಾಗಿದ್ದಾರೆ.

Image Source: Oneindia

ತಾಯಿ ಬಗ್ಗೆ ಮಾತನಾಡಿದ ನೈನಿಕ
ಅಮ್ಮ ನೀನು ಈ ಸ್ಥಾನಕ್ಕೆ ಎಷ್ಟೋ ಕಷ್ಟಪಟ್ಟು ಬಂದಿದ್ದೀಯಾ. ನಟಿಯಾಗಿ ಯಾವಾಗಲು ಕಷ್ಟಪಡುತ್ತಲೇ ಇರುತ್ತೀಯ. ಆದರೆ ಈ ಕಷ್ಟವನ್ನು ಮನೆಯಲ್ಲಿ ಯಾವಾಗಲು ತೋರಿಸಿಲ್ಲ. ನನ್ನನು ಪ್ರತಿಕ್ಷಣ ಎಚ್ಚರಿಕೆಯಿಂದ ನೋಡಿಕೊಂಡಿದ್ದೀಯ. ನಾನು ನಿನಗೆ ತುಂಬಾ ತೊಂದರೆ ಕೊಟ್ಟಿದ್ದೇನೆ. ಇನ್ನು ಮೇಲೆ ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.

ತಂದೆ ಮರಣದ ನಂತರ ಜೀವನ ಕತ್ತಲಾಗಿ ಹೋಗಿತ್ತು. ನೀನು ಮಾನಸಿಕವಾಗಿ ಕುಗ್ಗಿ ಹೋಗಿದ್ದು ನನಗೆ ಗೊತ್ತು. ಆದರೆ ಕೆಲವು ಮಾದ್ಯಮದವರು ನಮ್ಮ ತಾಯಿ ಬಗ್ಗೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದವು. ನನ್ನ ಅಮ್ಮ 2 ನೇ ಮಗುವಿನ ಗರ್ಭಿಣಿ ಆಗಿದ್ದಾರೆ ಎನ್ನುವ ಸುಳ್ಳು ಸುದ್ದಿಯನ್ನು ಮರೆಯೋಕ್ಕಾಗಲ್ಲ. ನನಗೆ ಇದು ತಮಾಷೆ ಎನಿಸಿತು. ದಯವಿಟ್ಟು ನನಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಬಿಡಿ.

Image Source: Instagram

ಅಮ್ಮ ಹೀರೋಯಿನ್ ಆಗಿರಬಹುದು. ಆದರೆ ನಿಮ್ಮಂತೆಯೇ ಅವಳು ಮನುಷ್ಯಳು. ಅವರಿಗೂ ಭಾವನೆಗಳು ಇರುತ್ತವೆ. ದಯವಿಟ್ಟು ಈ ರೀತಿ ಮಾಡಬೇಡಿ. ಸುಳ್ಳು ಸುದ್ದಿ ಹರಡಿಸಬೇಡಿ ಎಂದು ನೈನಿಕ ಮಾತನಾಡಿದ್ದಾರೆ. ನಟಿ ಮೀನಾ ಅವರ ಮಗಳು ಅಮ್ಮನ ಬಗ್ಗೆ ಹೇಳಿದ ಮಾತನ್ನ ಕೇಳಿ ಕಣ್ಣೀರು ಹಾಕಿದ ನಟ ರಜಿನಿಕಾಂತ್

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in