Rajitha: ನಿತ್ಯಾನಂದನ ಕೈಲಾಸ ದೇಶ ನಿಜಕ್ಕೂ ಹೇಗಿದೆ, ನಿತ್ಯಾನಂದ ಸ್ವಾಮಿ ದೇಶದ ಬಗ್ಗೆ ಹೇಳಿದ ರಂಜಿತಾ.
ಕೈಲಾಸ ದೇಶಕ್ಕೆ ಭೇಟಿ ನೀಡಿದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡ ನಿತ್ಯಾನಂದರ ಪರಮ ಶಿಷ್ಯೆ.
Rajitha About Nityananda: ಹಲವು ಆರೋಪಗಳಿಂದ ತಲೆಮರೆಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nithyananda) ಅವರು ಇದೀಗ ಸುದ್ದಿಯಲ್ಲಿದ್ದಾರೆ. ತಾವು ಕಟ್ಟಿರುವ ಹೊಸ ದೇಶಕ್ಕೆ ತಮ್ಮ ಶಿಷ್ಯೆಯನ್ನೇ ಪ್ರಧಾನಿಯನ್ನಾಗಿ ಮಾಡಿ ಅಚ್ಚರಿ ಮೂಡಿಸಿದ್ದಾರೆ. ನಿತ್ಯಾನಂದ ಅವರು ತಮ್ಮ ಶಿಷ್ಯೆಯನ್ನೇ ತಮ್ಮ ದೇಶದ ಪ್ರಧಾನಿಯನ್ನಾಗಿ ಮಾಡಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2019 ರಲ್ಲಿ ನಿತ್ಯಾನಂದ ಅವರು ದೇಶವನ್ನು ತೊರೆದು 2020 ರಲ್ಲಿ ಕೈಲಾಸ ಎನ್ನುವ ಸ್ವಯಂ ಘೋಷಿತ ರಾಷ್ಟ್ರವನ್ನು ಘೋಷಣೆ ಮಾಡಿದ್ದರು. ಈ ದೇಶಕ್ಕೆ ತಮ್ಮ ಶಿಷ್ಯೆ ರಂಜಿತಾರನ್ನು ಪ್ರಧಾನಿಯನ್ನಾಗಿ ಮಾಡಿದ್ದಾರೆ.
ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಅವರು ಬಿಡುಗಡೆ ಮಾಡಿದ್ದರು. ತನ್ನ ದೇಶದ ವೀಸಾ ಕೂಡ ಘೋಷಿಸಿ ಕೈಲಾಸ ದೇಶಕ್ಕೆ ಬರುವವರು ಯಾವೆಲ್ಲ ನಿಯಮವನ್ನು ಪಾಲಿಸಬೇಕು ಎನ್ನುವ ಕುರಿತು ವೆಬ್ ಸೈಟ್ ಕೂಡ ಮಾಡಿಕೊಂಡಿದ್ದರು.
ಕೈಲಾಸದ ಬಗ್ಗೆ ಮಾತನಾಡಿದ ರಂಜಿತಾ
ಇದೆ ಮೊದಲ ಬಾರಿಗೆ ರಂಜಿತಾ ಕೈಲಾಸ ದೇಶದ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ಕೈಲಾಸ ಸಮಾನತೆಯ ಅಭಯಾರಣ್ಯ. ಕೈಲಾಸವು ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಅಭಯಾರಣ್ಯ ಎಂದು ಹೊಗಳಿದ್ದಾರೆ.
ಮಹಿಳೆಯರಿಗೆ ಕೈಲಾಸ ಸ್ವರ್ಗವಾಗಿದೆ. ಮಹಿಳೆಯರ ಪ್ರಗತಿ ಸಬಲೀಕರಣ ಮತ್ತು ಆಡಳಿತದಲ್ಲಿ ಸಮಾನ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಕೈಲಾಸ ದೇಶದ ಉದ್ದೇಶವಾಗಿದೆ ಎಂದು ನಿತ್ಯಾನಂದನ ಪರಮ ಶಿಷ್ಯೆಯಾಗಿರುವ ರಂಜಿತಾ ಕೈಲಾಸ ದೇಶಕ್ಕೆ ಭೇಟಿ ನೀಡಿದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಕೈಲಾಸದಲ್ಲಿ ಲಿಂಗ ಸಮಾನತೆ ಕಡೆಗೆ ಇರುವ ಅದರ ಬದ್ಧತೆಯನ್ನು ರಂಜಿತಾ ಅವರು ತಿಳಿಸಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳಿಗೆ ಕೈಲಾಸ ಒಂದು ಭರವಸೆಯಾಗಿದೆ. ಮೊದಲ ಹಿಂದೂ ರಾಷ್ಟ್ರ ಎಂದು ಪರಿಕಲ್ಪನೆಯೊಂದಿಗೆ ನಿರ್ಮಾಣವಾಗಿದೆ.
ಜೀವನವನ್ನು ಗೌರವಿಸುವ ಶಿಕ್ಷಣವನ್ನು ಗೌರವಿಸುವ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಾಮರಸ್ಯದ ಸಮಾಜದ ಭರವಸೆಗಳಿಂದ ಆಕರ್ಷಿತರಾದ ಜನರು ಕೈಲಾಸಕ್ಕೆ ವಲಸೆ ಹೋಗುತ್ತಿದ್ದಾರೆ. ಈ ರಾಷ್ಟ್ರದ ಸಂಸ್ಥಾಪಕ ಸ್ವಾಮಿ ನಿತ್ಯಾನಂದ ಅವರು ಪ್ರಕೃತಿಯೊಂದಿಗೆ ಪರಸ್ಪರ ಸಾಮರಸ್ಯದಿಂದ ಬದುಕುವ ಯುಟೋಪಿಯನ್ ರಾಷ್ಟ್ರವನ್ನು ರೂಪಿಸುತ್ತಾರೆ ಎಂದು ರಂಜಿತಾ ಹೇಳಿದ್ದಾರೆ.
ಇಂದು ಕೈಲಾಸದ 98 ಶೇಕಡದಷ್ಟು ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ಲಿಂಗ ಸಮತೋಲನವು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿಯಲು ಮತ್ತು ಸಾಮರ್ಥ್ಯ ಹಾಗು ದೃಷ್ಟಿಕೋನದೊಂದಿಗೆ ಮುನ್ನಡೆಸಲು ಮಹಿಳೆಯರಿಗೆ ಅಧಿಕಾರ ನೀಡುತ್ತದೆ ಎಂದು ಕೈಲಾಸದ ಬಗ್ಗೆ ರಂಜಿತಾ ಹೊಗಳಿದ್ದಾರೆ.
ನಿತ್ಯಾನಂದನದ ಸ್ವಾಮಿ ಬಗ್ಗೆ ಮಾತನಾಡಿದ ಶಿಷ್ಯೆ ರಂಜಿತಾ
ನಾನು 2009 ರಲ್ಲಿ ಸ್ವಾಮಿ ನಿತ್ಯಾನಂದರನ್ನು ಭೇಟಿಯಾಗಿದ್ದೆ. ನನ್ನನ್ನು ನೋಡಿ ಅವರು ಮುಗುಳು ನಕ್ಕಿದ್ದಾರೆ. ಎಲ್ಲರೊಂದಿಗೆ ಮಾತನಾಡಿದರು. ಅವರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಹಣ ಅಥವಾ ವಸ್ತುಗಳನ್ನು ಗಳಿಸುವ ಯಾವುದೇ ಉದ್ದೇಶವಿಲ್ಲ. ಕೈಲಾಸವು ಯಾವಾಗಲೂ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡುತ್ತದೆ ಎಂದು ರಂಜಿತಾ ತಿಳಿಸಿದ್ದಾರೆ.