Ads By Google

Rakesh Adiga: ಅಮೂಲ್ಯ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ, ಎಲ್ಲಾ ಪ್ರಶ್ನೆಗೂ ಉತ್ತರ.

Rakesh Adiga About Amulya Gowda

Image Source: Filmibeat

Ads By Google

Rakesh Adiga About Amulya Gowda:  ಬಿಗ್ ಬಾಸ್ ಸೀಸನ್ 9 (Bigg Boss Season 9) ರ ಖ್ಯಾತಿಯ ರಾಕೇಶ್ ಅಡಿಗ (Rakesh adiga) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಅಭಿಮಾನಿಗಳ ಜೊತೆ ಹೊಸ ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 9 ರ ರನ್ನರ್ ಅಪ್ ಆದ ರಾಕೇಶ್ ಅಡಿಗ ಇದೀಗ ಮತ್ತೆ ಅಮೂಲ್ಯ ಅವರ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಇನ್ನು ರಾಕೇಶ್ ಹಾಗೂ ಅಮೂಲ್ಯ (Amulya Gowda) ಅವರ ಮದುವೆಯ ಸುದ್ದಿ ಮತ್ತೆ ವೈರಲ್ ಆಗುತ್ತಿದ್ದು, ಈ ಸುದ್ದಿಗೆ ರಾಕೇಶ್ ಸ್ಪಷ್ಟನೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿ ರಾಕೇಶ್ ಹಾಗು ಅಮೂಲ್ಯ
ಇನ್ನು ಪ್ರತಿ ಬಿಗ್ ಬಾಸ್ ಸೀಸನ್ ನಲ್ಲಿ ಒಂದೊಂದು ಜೋಡಿ ಹೈಲೆಟ್ ಆಗುತ್ತಲೇ ಇರುತ್ತಾರೆ. ಇನ್ನು ಸೀಸನ್ 9 ರಲ್ಲಿ ಅಮೂಲ್ಯ ಹಾಗು ರಾಕೇಶ್ ಹೆಚ್ಚು ಗಮನ ಸೆಳೆದಿದ್ದರು.

Image Credit: news18

ಈ ಇಬ್ಬರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಕೂಡ ಹುಟ್ಟಿಕೊಂಡಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲುಕೋಡ ರಾಕೇಶ್ ಹಾಗೂ ಅಮೂಲ್ಯ ಸಾಕಷ್ಟು ಬಾರಿ ಮೀಟ್ ಆಗಿದ್ದಾರೆ. ಈ ಕಾರಣದಿಂದ ಈ ಇಬ್ಬರ ಮದುವೆಯ ಗಾಸಿಪ್ ಇನ್ನಷ್ಟು ಹೆಚ್ಚಿದೆ. ಇದೀಗ ಸ್ವತಃ ರಾಕೇಶ್ ಅಡಿಗ ಅವರು ತಮ್ಮ ಹಾಗೂ ಅಮೂಲ್ಯ ಅವರ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅಮೂಲ್ಯ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ
ನಾವಿಬ್ಬರು ಒಳ್ಳೆಯ ಸ್ನೇಹಿತರು, ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ಮಿಬ್ಬರ ಪ್ಯಾನ್ ಪೇಜ್ ಕೊಡ ಆಗುತ್ತೆ. ಜೋಡಿ ಅಂತಾನೂ ಟ್ರೋಲ್ ಮಾಡ್ತಾರೆ ಎಂದು ಒಂದು % ಕೂಡ ಐಡಿಯಾ ಇರಲಿಲ್ಲ.

ನಮ್ಮನ್ನ ನೋಡಿ ಅಭಿಮಾನಿಗಳು ಮದುವೆ ಆದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಅವರಿಗೆ ಹಾಗೆ ಅನಿಸುವುದು ಸಹಜ ಆದರೆ ನಮಗೆ ಆ ಭಾವನೆ ಇಲ್ಲ. ನಮ್ಮ ಟ್ರೋಲ್ ಗಳನ್ನೂ ನೋಡಿ ನಕ್ಕಿದ್ದೇವೆ. ಆದರೆ ಅಂತಹದ್ದೇನು ಇಲ್ಲ. ನನ್ನ ಸಂಪೂರ್ಣ ಗಮನ ಕೆಲಸದ ಮೇಲಿದೆ ಎಂದು ರಾಕೇಶ್ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗಲಿದ್ದಾರೆ ಜೋಶ್ ನಟ
ರಾಕೇಶ್ ಅಡಿಗ ಅವರು ಇದೀಗ ಲೈಪ್ ಆಫ್ ಕಾಕ್ರೋಚ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗುತ್ತಿದ್ದರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ.

ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ತೆಗೆದುಕೊಂಡಿದ್ದಾರೆ. ಸದ್ಯ ಲೈಪ್ ಆಫ್ ಕಾಕ್ರೋಚ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in