Rakhi Sawant 1st Husband: ರಾಖಿ ಸಾವಂತ್ ಮೊದಲ ಗಂಡನಿಗೂ ಹೀಗೆ ಮಾಡಿದ್ದರು, ಆರೋಪ ಮಾಡಿದ ಆದಿಲ್ ಖಾನ್ ಪರ ವಕೀಲ.

Rakhi Sawant First Husband: ಬಾಲಿವುಡ್ (Bollywood) ಖ್ಯಾತ ನಟಿ ರಾಖಿ ಸಾವಂತ್ (Rakhi Sawant) ಮದುವೆ ವಿಚಾರ ಹಲವು ದಿನಗಳಿಂದ ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡುತ್ತಾ ಇದೆ. ನಟಿ ರಾಖಿ ಸಾವಂತ್ ತನ್ನ ಪತಿ ಆದಿಲ್ ಮೇಲೆ ಆರೋಪ ಮಾಡಿ ಆರೆಸ್ಟ್ ಮಾಡಿಸಿದ್ದರು.

ಅಲ್ಲದೆ ಹೊಸ ಹೊಸ ಆರೋಪಗಳನ್ನು ಆದಿಲ್ ಮೇಲೆ ಮಾಡುತ್ತಲೇ ಇದ್ದಿದ್ದರು. ಮದುವೆಯ ನಂತರ ನಟಿ ರಾಖಿ ಸಾವಂತ್ ತನ್ನ ಪತಿಯ ಮೇಲೆ ಆರೋಪ ಮಾಡಲು ಶುರು ಮಾಡಿದರು.

Adil Khan is the lawyer who accused Rakhi Sawant
Image Credit: siasat

ಆದಿಲ್ ಅವರನ್ನು ಅರೆಸ್ಟ್ ಮಾಡಿಸಿದ ನಟಿ ರಾಖಿ ಸಾವಂತ್
ಆದಿಲ್ ಬಿಗ್ ಬಾಸ್ ಮನೆಯಲ್ಲಿ ಇರುವಾಗ ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿರುವುದಾಗಿ ತಿಳಿಸಿ ಆ ಯುವತಿಯ ಹೆಸರನ್ನು ಸಹ ಬಹಿರಂಗ ಮಾಡಿದರು. ನಂತರ ಇಲ್ಲಿಗೆ ಮುಗಿಯಲಿಲ್ಲ, ಆದಿಲ್ ಖಾನ್ ವಿವಾಹೇತರ ಸಂಬಂಧ ಹೊಂದಿದ್ದಾರೆ.

ನನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ನನ್ನ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು, ಕೌಟುಂಬಿಕ ಹಿಂಸಾಚಾರಣ ಮಾಡಿದ್ದಾನೆ ಎಂದು ಆದಿಲ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿ ಆದಿಲ್ ಅನ್ನು ಅರೆಸ್ಟ್ ಮಾಡಿಸಿದರು.

Lawyer Neeraj Gupta has accused Rakhi Sawam of getting a divorce by doing the same to her first husband
Image Credit: siasat

ರಾಖಿ ಸಾವಂತ್ ಮೇಲೆ ಆರೋಪ ಮಾಡಿದ ವಕೀಲ ನೀರಜ್ ಗುಪ್ತಾ
ರಾಖಿ ಸಾವಂತ್ ಆರೋಪ ಮಾಡಿದ ಹಿನ್ನಲೆಯಲ್ಲಿ ಆದಿಲ್ ಖಾನ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಆದಿಲ್ ಅವರನ್ನು ಕಳೆದ ವಾರ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು. ಈಗ ಈ ಕುರಿತು ಆದಿಲ್ ಖಾನ್ ವಕೀಲ ನೀರಜ್ ಗುಪ್ತಾ ಮಾತನಾಡಿದ್ದಾರೆ.

Join Nadunudi News WhatsApp Group

Lawyer Neeraj Gupta talks about how Rakhi Sawant got divorced from her first husband
Image Credit: dnpindia

ರಾಖಿ ಸಾವಂತ್ ಮಾಡಿದ ಆರೋಪಗಳನ್ನು ನಿರಾಕರಿಸಿದ್ದಾರೆ. ಅಲ್ಲದೆ ರಾಖಿ ಸಾವಂತ್ ಮೇಲೆ ಗಂಭೀರ ಆರೋಪ ಮಾಡಿದ ಅವರು ಈ ಹಿಂದೆ ಮೊದಲ ಪತಿ ರಿತೇಶ್ ನಿಂದ ಹಣ ಪೀಕಲು ಇದೆ ಅಂತ ಇದೆ ರೀತಿ ಮಾಡಿದ್ದರು.

ರಾಖಿ ಸಾವಂತ್ ಹೀಗೆ ಮಾಡುವುದು ಮೊದಲಿಂದ ತಿಳಿದು ಬಂದಿದೆ. ಈಗ ಹಣಕ್ಕಾಗಿ ಆಡ್ಲ ಖಾನ್ ಅವರಿಗೆ ಇದೆ ರೀತಿ ಮಾಡಿದ್ದಾರೆ ಎಂದು ವಕೀಲರು ಆರೋಪ ಮಾಡಿದ್ದಾರೆ.

Join Nadunudi News WhatsApp Group