Rakhi Sawant About Oscar: ಮುಂದಿನ ಆಸ್ಕರ್ ನನಗೆ ಅಂದ ರಾಖಿ ಸಾವಂತ್, ಆಸ್ಕರ್ ಗೆಲ್ಲುವ ಆಸೆ ವ್ಯಕ್ತಪಡಿಸಿದ ರಾಖಿ ಸಾವಂತ್.
Rakhi Sawant RRR Oscar Award: ಆಸ್ಕರ್ 2023 ರಲ್ಲಿ RRR ಚಿತ್ರ ಆಸ್ಕರ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. RRR ಚಿತ್ರ ತಂಡಕ್ಕೆ ಅನೇಕ ಸ್ಟಾರ್ ನಟ ನಟಿಯರು, ಗಣ್ಯರು ಸೇರಿದಂತೆ ಹಲವರು ಶುಭಾಶಯ ತಿಳಿಸಿದ್ದಾರೆ.
ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಕೂಡ RRR ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಇದೀಗ ನಟಿ ಶುಭಾಶಯ ತಿಳಿಸುವ ವೇಳೆ ಮಾತನಾಡಿರುವ ಮಾತುಗಳು ಇದೀಗ ವೈರಲ್ ಆಗುತ್ತಿದೆ.
ಆರ್ ಆರ್ ಆರ್ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ ನಟಿ ರಾಖಿ ಸಾವಂತ್
ರಾಖಿ ಸಾವಂತ್ ಆರ್ ಆರ್ ಆರ್ ಚಿತ್ರತಂಡಕ್ಕೆ ಶುಭಾಶಯ ತಿಳಿಸಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎಲ್ಲರು ತಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾಟು ನಾಟು ಹಾಡಿನ ಚಿತ್ರವನ್ನು ಶೇರ್ ಮಾಡಿಕೊಂಡೋ, ಅಥವಾ ಅವಾರ್ಡ್ ಪಡೆಯುತ್ತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ನಟಿ ರಾಖಿ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.
ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ರಾಖಿ ಸಾವಂತ್
ಬಾಲಿವುಡ್ ನಟಿ ರಾಖಿ ಸಾವಂತ್ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಟಿ ತಮ್ಮ ಜಿಮ್ ನ ಹೊರಗೆ ಕ್ರಾಪ್ ಟಾಪ್ ಮತ್ತು ಲೆಗ್ಗಿನ್ಸ್ ಧರಿಸಿ ಯುವಕನೊಬ್ಬನ ಜೊತೆ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ರಾಮ್ ಚರಣ್ ಹಾಗೂ ಜೂನಿಯರ್ ಏನ್ ಟಿಆರ್ ಅವರ ಹಾಡಿನ ಹುಕ್ ಸ್ಟೆಪ್ ಅನ್ನು ಮಾಡುವ ಜೊತೆಗೆ ಯುವಕನಿಗೆ ಸ್ಟೆಪ್ ಅನ್ನು ಕಲಿಸಿದ್ದಾರೆ.
ಆಸ್ಕರ್ ಪ್ರಶಸ್ತಿ ಗೆಲ್ಲುವ ಆಸೆಯನ್ನು ಹಂಚಿಕೊಂಡ ನಟಿ
ರಾಖಿ ಸಾವಂತ್ ಪಾಪ್ ಗಳೊಂದಿಗೆ ಸಂವಾದ ನಡೆಸಿದಾಗ RRR ತಂಡದ ವಿಜಯಕ್ಕಾಗಿ ಅಭಿನಂದಿಸಿದರು. ಹಾಗೆಯೆ ಮುಂದೊಂದು ದಿನ ಆಸ್ಕರ್ ಪ್ರಶಸ್ತಿ ಗೆಲ್ಲುವ ಆಸೆಯನ್ನು ನಟಿ ಹಂಚಿಕೊಂಡಿದ್ದಾರೆ. ಹಾಗೆಯೆ ಆಸ್ಕರ್ ನಲ್ಲಿ ದೀಪಿಕಾ ಪಡುಕೋಣೆ ಅವರ ನಿರೂಪಣೆಯನ್ನು ಕೂಡ ಹೊಗಳಿದ್ದಾರೆ. 2023 ರ ಆಸ್ಕರ್ ನಲ್ಲಿ ಪ್ರಶಸ್ತಿಗಳನ್ನು ನೀಡಿದ ಏಕೈಕ ಬಾಲಿವುಡ್ ನಟಿ ದೀಪಿಕಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.