Rakhi Sawant Acting Academy: ನಟನಾ ಸಂಸ್ಥೆಯನ್ನು ಪ್ರಾರಂಭಿಸಿದ ನಟಿ ರಾಖಿ ಸಾವಂತ್, ಅಪಹಾಸ್ಯ ಮಾಡಿದ ನೆಟ್ಟಿಗರು.

Actress Rakhi Sawant Started Acting Academy: ನಟಿ ರಾಖಿ ಸಾವಂತ್ (Rakhi Sawant) ಮತ್ತು ಆದಿಲ್ ಖಾನ್ (Adil Khan) ಮದುವೆ ವಿಚಾರಗಳು ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ರಾಖಿ ಸಾವಂತ್ ಪತಿ ಆದಿಲ್ ಮೇಲೆ ಗಂಭೀರ ಆರೋಪಗಳನ್ನು ಮಾಡಿ ಅರೆಸ್ಟ್ ಮಾಡಿಸಿದ್ದಾರೆ.

ಬಾಲಿವುಡ್ ನಟಿ ರಾಖಿ ಸಾವಂತ್ ಅವರು ಹೆಚ್ಚು ಸಿನಿಮಾಗಿಂತ ವಿವಾದಗಳಲ್ಲಿಯೇ ಸುದ್ದಿಯಲ್ಲಿದ್ದಾರೆ ಎನ್ನಬಹುದು. ಇದೀಗ ನಟಿ ರಾಖಿ ಸಾವಂತ್ ಹೊಸ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ರಾಖಿ ಸಾವಂತ್ ಈ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

Actress Rakhi Sawant Started Acting Academy
Image Source: Bolly

ನಟನಾ ಸಂಸ್ಥೆಯನ್ನು ಪ್ರಾರಂಭಿಸಲು ಹೋರಟ ನಟಿ ರಾಖಿ ಸಾವಂತ್
ಸಾಕಷ್ಟು ಕಾಂಟ್ರೋವರ್ಸಿ ನಂತರ ತನ್ನ ಪತಿ ಆದಿಲ್ ದುರಾನಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿರುವ ಬಿಟೌನ್‌ ಮಾದಕ ಚೆಲುವೆ ನಟಿ ರಾಖಿ ಸಾವಂತ್ ದುಬೈನಲ್ಲಿ ತನ್ನ ನಟನಾ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ರಾಖಿ ಯಾವಾಗಲೂ ಪಾಪರಾಜಿಗಳನ್ನು ತನ್ನ ಕಡೆಗೆ ಆಕರ್ಷಿಸುವ ಕೆಲಸ ಮಾಡುತ್ತಿರುತ್ತಾಳೆ. ಇದೀಗ ರಾಖಿ ದುಬೈನಲ್ಲಿ ತನ್ನ ಹೊಸ ಉದ್ಯಮ ಪ್ರಾರಂಭಿಸಿದ್ದಾಳೆ.

Actress Rakhi Sawant Started Acting Academy
Image Source: India Today

ತಮ್ಮ ಸಂಸ್ಥೆಯ ಬಗ್ಗೆ ಮಾತನಾಡಿದ ನಟಿ ರಾಖಿ ಸಾವಂತ್
ರಾಖಿ ಸಾವಂತ್ ನಾವು ದುಬೈ ಮತ್ತು ಮುಂಬೈನಲ್ಲಿ ರಾಖಿ ಸಾವಂತ್ ಅಕಾಡೆಮಿಯನ್ನು ತೆರೆಯುತ್ತಿದ್ದೇವೆ. ನಟನೆ, ನೃತ್ಯ, ಯೋಗ, ಜುಂಬಾ, ಹಾಡುಗಾರಿಕೆ, ಆಕ್ಷನ್, ಸಿನಿಮಾಟೋಗ್ರಫಿ ಮತ್ತು ಮಾರ್ಷಲ್ ಆರ್ಟ್‌ ಗಳಲ್ಲಿ ಡಿಪ್ಲೊಮಾ ಕಲಿಯಬಹುದು.

Join Nadunudi News WhatsApp Group

ಅಲ್ಲದೆ ನಾವು ವೆಬ್ ಸರಣಿಯೊಂದನ್ನು ಪ್ರಾರಂಭಿಸುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳಿಗೆ ಕೆಲಸದ ಅವಕಾಶಗಳು ಸಿಗುತ್ತವೆ ಎಂದು ನಾನು ಖಾತರಿಪಡಿಸುತ್ತೇನೆ ಎಂದು ಹೇಳಿದ್ದಾರೆ.

Actress Rakhi Sawant Started Acting Academy
Image Source: India Today

ರಾಖಿ ಸಾವಂತ್ ವೃತ್ತಿಗೆ ಅಪಹಾಸ್ಯ ಮಾಡಿದ ನೆಟ್ಟಿಗರು
ಕೆಲವರು ರಾಖಿ ಸಾವಂತ್ ಅವರ ವೃತ್ತಿಜೀವನವನ್ನು ಅಪಹಾಸ್ಯ ಮಾಡಿದ್ದಾರೆ. ನಟನಾ ಅಕಾಡೆಮಿ ಅಥವಾ ಅತಿ ನಟನಾ ಅಕಾಡೆಮಿ ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ತನಗೆ ಗೊತ್ತಿಲ್ಲ ಇನ್ನೂ ಬೇರೆಯವರಿಗೆ ಏನ್‌ ಕಲಿಸುತ್ತಾಳೆ ಗುರು, ಎನ್ನೂ ಏನೇನ್‌ ನೋಡ್ಬೇಕೋ ಈ ಕಣ್ಣಿಂದ ಅಂತ ಕಮೆಂಟ್‌ ಮಾಡುತ್ತಿದ್ದಾರೆ.

Actress Rakhi Sawant Started Acting Academy
Image Source: Times Of India

Join Nadunudi News WhatsApp Group