Ads By Google

Rakshit And Rashmika: ಮತ್ತೆ ಒಂದಾಗುತ್ತಾರಾ ರಶ್ಮಿಕಾ ಮತ್ತು ರಕ್ಷಿತ್, ರಶ್ಮಿಕಾ ಬಗ್ಗೆ ಮನಬಿಚ್ಚಿ ಮಾತನಾಡಿದ ರಕ್ಷಿತ್.

Rakshit And Rashmika

Image Source: India Today

Ads By Google

Rakshit Shetty about Rashmika Mandanna: ನಟಿ Rashmika Mandanna ಹಾಗು Rakshit Shetty ಅವರ ನಿಶ್ಚಿತಾರ್ಥದ ವಿಚಾರ, ಪ್ರೀತಿಯ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. ಈ ಹಿಂದೆ ಚಂದನವನದಲ್ಲಿ ರಶ್ಮಿಕಾ ಮಂದಣ್ಣ ಹಾಗು ನಟ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹಾಗು ಲವ್ ಬ್ರೇಕಪ್ ಆದ ವಿಚಾರ ಭಾರಿ ಚರ್ಚೆ ಉಂಟುಮಾಡಿತ್ತು.

ಸ್ಯಾಂಡಲ್ ವುಡ್ ನಲ್ಲಿ ಆಗಾಗ ಸುದ್ದಿಯಾಗುವ ಲವ್ ಸ್ಟೋರಿ ಎಂದರೆ ಅದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಲವ್ ಸ್ಟೋರಿ ಎನ್ನಬಹುದು. ಇದೀಗ ಹಲವು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾತನಾಡಿದ್ದಾರೆ. ರಕ್ಷಿತ್ ಅವರ ಈ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ ಎನ್ನಬಹುದು.

Image Credit: Mensxp

ವರ್ಷಗಳ ಬಳಿಕ ಮಾಜಿ ಪ್ರೇಯಸಿಯ ಬಗ್ಗೆ ಹೇಳಿಕೆ ನೀಡಿದ ರಕ್ಷಿತ್
ಇನ್ನು 2017 ರಲ್ಲಿಸಂದಲ್ ವುಡ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಬಾರಿ ಹೈಲೈಟ್ ಆಗಿತ್ತು. ಆದರೆ ನಿಶ್ಚಿತಾರ್ಥವಾದ ಕೆಲವೇ ದಿನಗಳಲ್ಲಿ ಇಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಈ ವೇಳೆ ಸ್ಯಾಂಡಲ್ ವುಡ್ ನಲ್ಲಿ ಈ ಜೋಡಿ ಹಾಟ್ ಟೋಪಿಕ್ ಆಗಿದ್ದರು. ಇದಾದ ಬಳಿಕ ರಶ್ಮಿಕಾ ಮಂದಣ್ಣ ಕನ್ನಡ ಇಂಡಸ್ಟ್ರಿ ಇಂದ ದೂರ ಉಳಿದಿದ್ದಾರೆ ಎನ್ನಬಹುದು.

ಇನ್ನು 2021 ರಲ್ಲಿ ಪೊಗರು ಚಿತ್ರದಲ್ಲಿ ನಟಿಸಿದ ಬಳಿಕ ರಶ್ಮಿಕಾ ಕನ್ನಡ ಯಾವುದೇ ಚಿತ್ರಗಳಲ್ಲೂ ನಟಿಸಿಲ್ಲ. ಒಂದು ರೀತಿ ರಶ್ಮಿಕಾ ಕನ್ನಡಿಗರಿಂದ ದೂರ ಉಳಿದಿದ್ದಾರೆ. ಪರ ಭಾಷಾ ಚಿತ್ರಗಳಲ್ಲಿ ನಟಿ ಸದ್ಯ ಬ್ಯುಸಿ ಆಗಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಸದ್ಯ ರಕ್ಷಿತ್ ಹಾಗೂ ರಶ್ಮಿಕಾ ಬ್ರೇಕ್ ಅಪ್ ಸುದ್ದಿ ಹಳೆಯದಾಗುತ್ತಿದ್ದಂತೆ ಇದೀಗ ಮತ್ತೆ ಈ ಸ್ಟೋರಿ ಹೊಸ ತಿರುವು ಪಡೆದಿದೆ. ವರ್ಷಗಳ ಬಳಿಕ ಮಾಜಿ ಪ್ರೇಯಸಿಯ ಬಗ್ಗೆ ಸಿಂಪಲ್ ಸ್ಟಾರ್ ಮಾತನಾಡಿದ್ದಾರೆ.

Image Credit: Pinkvilla

ಇನ್ನು ಕೂಡ ಕಾಂಟ್ಯಾಕ್ಟ್ ನಲ್ಲಿದ್ದಾರೆ ರಶ್ಮಿಕಾ ಹಾಗೂ ರಕ್ಷಿತ್
ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಯಶಸ್ಸಿನ ಸಂಭ್ರದಲ್ಲಿರುವ ರಕ್ಷಿತಾ ಶೆಟ್ಟಿ ಸದ್ಯ ಸಂದರ್ಶನ ಒಂದರಲ್ಲಿ ತನ್ನ ಹಳೆಯ ಪ್ರೇಯಸಿ ರಶ್ಮಿಕಾ ಬಗ್ಗೆ ಮತನಾಡಿದ್ದಾರೆ. ಈ ವೇಳೆ ನಿರೂಪಕರು ರಶ್ಮಿಕಾ ಅವರು ನಿಮ್ಮ ಕಾಂಟ್ಯಾಕ್ಟ್ ನಲ್ಲಿದ್ದಾರಾ..? ಎಂದು ಕೇಳಿದ ಪ್ರಶ್ನೆಗೆ ರಕ್ಷಿತಾ ಉತ್ತರ ನೀಡಿದ್ದಾರೆ.

“ರಶ್ಮಿಕಾ ನಾನು ಇನ್ನು ಸಂಪರ್ಕದಲ್ಲಿದ್ದೇವೆ. ಆಕೆ ಸಿನಿಮಾ ಜಗತ್ತಿನಲ್ಲಿ ದೊಡ್ಡ ಕನಸನ್ನು ಹೊಂದಿದ್ದಳು. ಅದಕ್ಕೆ ತಕ್ಕಂತೆ ಆ ಕನಸಿನತ್ತ ಸಾಗುತ್ತಿದ್ದಾಳೆ. ತಾನು ಅಂದುಕೊಂಡ ಕೆಲವನ್ನು ಸಾಧಿಸುವ ಇಚ್ಛಾಶಕ್ತಿ ಅವಳಲ್ಲಿದೆ. ಆಕೆಯ ಸಾಧನೆಗಾಗಿ ನಾವು ಅವಳ ಬೆನ್ನು ತಟ್ಟಬೇಕು” ಎಂದಿದ್ದಾರೆ. ಇನ್ನು ಕಿರಿಕ್ ಪಾರ್ಟಿಯ ಈ ಜೋಡಿ ಇನ್ನು ಸಂಪರ್ಕದಲ್ಲಿರುವ ವಿಷಯ ಕೇಳಿ ಮತ್ತೆ ಒಂದಾಗುತ್ತಾರಾ..? ಎನ್ನುವ ಪ್ರಶ್ನೆ ಸದ್ಯ ಎಲ್ಲರಲ್ಲೂ ಮೂಡಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.