Rakshit Shetty New Movie Update: ರಕ್ಷಿತ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ರಕ್ಷಿತ್ ಮುಂದಿನ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್.

Rakshit Shetty New Movie Update: ಸ್ಯಾಂಡಲ್ ವುಡ್ ನ ಸ್ಟಾರ್ ನಟ ರಕ್ಷಿತ್ ಶೆಟ್ಟಿ (Rakshit Shetty) ಇದೀಗ ತಮ್ಮ ಹೊಸ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ರಕ್ಷಿತ್ ನಟನೆಯ ಚಾರ್ಲಿ ಚಿತ್ರ ಬಾರ್ಜರಿ ಯಶಸ್ಸು ಕಂಡಿತ್ತು. ಇದೀಗ ನಟ ರಕ್ಷಿತ್ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ರಕ್ಷಿತ್ ಮುಂದಿನ ಚಿತ್ರದ ಬಗ್ಗೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದೆ.

Rakshit Shetty New Movie Update
Image Source: India Today

ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಸಪ್ತಸಾಗರದಾಚೆ ಎಲ್ಲೋ (Saptha Sagaradache Ello Movie) 
ಕಳೆದ ವರ್ಷ ಜೂನ್ 10 ರಂದು ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777  (Charlie 777) ಚಿತ್ರ ತೆರೆ ಕಂಡಿದ್ದು ಸಾಕಷ್ಟು ಯಶಸ್ಸು ಕಂಡಿದೆ. ಒಂದು ನಾಯಿ ಹಾಗೂ ರಕ್ಷಿತ್ ಅವರ ಬಾಂಧವ್ಯವನ್ನು ಕಂಡ ಸಿನಿಪ್ರಿಯರು ಈ ಚಿತ್ರವಾನ್ನು ಮೆಚ್ಚಿಕೊಂಡಿದ್ದರು.

ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರ ರಕ್ಷಿತ್ ಅವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿದೆ. ಇದೀಗ ರಕ್ಷಿತ್ ಅಭಿಮಾನಿಗಳು ಇವರ ಮುಂದಿನ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದೆ.

Rakshit Shetty New Movie Update
Image Source: India Today

ಪ್ರೀತಿಯ ಹುಡುಕಾಟದಲ್ಲಿ ಸಪ್ತಸಾಗರದಾಚೆ ಎಲ್ಲೋ ಚಿತ್ರ
ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಚಿತ್ರ ಭಾವ ತೀವ್ರತೆಯ ಪ್ರೇಮ ಕಥೆ ಇರುವ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಹುಡುಕಾಟ ಕಾಣಿಸುತ್ತಿದೆ. ಈಗಾಗಲೇ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Rakshit Shetty New Movie Update
Image Source: India Today

ಡಬ್ಬಲ್ ಶೆಡ್ಯೂಲ್ ನಲ್ಲಿ ರಕ್ಷಿತ್ ಶೆಟ್ಟಿ
ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಒಂದು ವಿಶೇಷ ಕಾಲಘಟ್ಟದ ಕಥೆಯನ್ನು ಹೇಳಲಾಗಿದೆ. 2010 ರಿಂದ 2020 ರ ನಡುವಿನ ವರ್ಷದಲ್ಲಿ ನಡೆಯುವ ಕಥೆ ಇದಾಗಿದೆ. ಇನ್ನು ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಡಬ್ಬಲ್ ಶೆಡ್ಯೂಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Join Nadunudi News WhatsApp Group

ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ರಕ್ಷಿತ್ ಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರೆ. ಇನ್ನು ಈ ಚಿತ್ರ ಚಿತ್ರೀಕರಣ ಪೂರ್ತಿಗೊಂಡರೆ ಜುಲೈ ನಲ್ಲಿ ಬಿಡುಗಡೆಗೊಳ್ಳುತ್ತದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

Rakshit Shetty New Movie Update
Image Source: India Today

Join Nadunudi News WhatsApp Group