Ads By Google

Rakshit Shetty Kirik Party 2: ಕಿರಿಕ್ ಪಾರ್ಟಿ 2 ಸಿನಿಮಾ ಸದ್ಯಕ್ಕೆ ಇಲ್ಲ ಎಂದ ರಕ್ಷಿತ್ ಶೆಟ್ಟಿ.

Rakshit Shetty said that Kirik Party 2 movie is not available at the moment.

Image Source: India Today

Ads By Google

Actor Rakshith Shetty: ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಕ್ಷಿತ್ ಶೆಟ್ಟಿ (Rakshith Shetty) ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡ ರಕ್ಷಿತ್ ಶೆಟ್ಟಿ ಈಗ ಹಲವಾರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಟ ರಕ್ಷಿತ್ ಶೆಟ್ಟಿ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಈಗ ತಮ್ಮ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ರಕ್ಷಿತ್ ಕಿರಿಕ್ ಪಾರ್ಟಿ 2 (Kirik Party 2)ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 

Image Source: India Today

ಹಲವು ಸಿನಿಮಾದ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ನಟ ರಕ್ಷಿತ್
ನಟ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಗೊಂದಲಕ್ಕೆ ತೆರೆ ಎಳೆದಿದ್ದಾರೆ. 777 ಚಾರ್ಲಿ (777 Charlie) ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೊ ಪೋಸ್ಟರ್ ಮತ್ತು ಹಲವು ವಿಚಾರಕ್ಕೆ ಈ ಸಿನಿಮಾ ಕುತೂಹಲ ಮೂಡಿಸಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಮತ್ತು ನಟನ ಜೋಡಿಯ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಮೂಡಿಸಿದೆ. ಬಹುತೇಕ ಶೂಟಿಂಗ್‌ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ, ಇದೇ ವರ್ಷ ತೆರೆಗೆ ಬರಲಿದೆ. ಇತ್ತ ಇದರ ಜತೆಗೆ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿಯೂ ರಕ್ಷಿತ್‌ ಬಿಜಿಯಾಗಿದ್ದಾರೆ.

Image Source: India Today

ಕಿರಿಕ್ ಪಾರ್ಟಿ 2 ಸಿನಿಮಾ ಸದ್ಯಕ್ಕೆ ಇಲ್ಲ ಎಂದ ರಕ್ಷಿತ್ ಶೆಟ್ಟಿ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮುಗಿದ ಬಳಿಕ ನನ್ನ ಸಿನಿಮಾ ಲೈನ್‌ ಅಪ್‌ ಹೀಗಿರಲಿದೆ, ರಿಚರ್ಡ್‌ ಆಂಟನಿ, ಪುಣ್ಯಕೋಟಿ 1, ಪುಣ್ಯಕೋಟಿ 2 ಮತ್ತು ಮಿಡ್‌ನೈಟ್‌ ಟು ಮೋಕ್ಷ ಈ ನಾಲ್ಕು ಸಿನಿಮಾಗಳಿಗೆ ನಾನು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದೇನೆ. ಸದ್ಯಕ್ಕೆ ಕಿರಿಕ್‌ ಪಾರ್ಟಿ 2 ಇಲ್ಲ. ಆದರೆ, ಆ ಸಿನಿಮಾ ಬಗ್ಗೆ ಬೇರೆಯದೇ ಆಲೋಚನೆ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದೆಲ್ಲ ನಿಜವಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

Imageg Source: Times Of India

 

 

 

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field