Ads By Google

ಅಂದು ಸಾಮಾನ್ಯ ನಟನಾಗಿದ್ದ ರಾಮ್ ಕುಮಾರ್ ಅಣ್ಣಾವ್ರ ಮನೆ ಅಳಿಯ ಆಗಿದ್ದು ಹೇಗೆ ಗೊತ್ತಾ, ನೋಡಿ ಸತ್ಯ ಇಲ್ಲಿದೆ

ram kumar act
Ads By Google

ರಾಮಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಇವರು ಪ್ರಖ್ಯಾತ ನಿರ್ಮಾಪಕ ಮತ್ತು ನಟ ಶೃಂಗಾರ ನಾಗಾರಾಜ್ ರವರ ಮಗ.1990 ರಲ್ಲಿ ತೆರೆಕಂಡ `ಆವೇಶ’ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕೆಲವು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಇವರು 1993 ತೆರೆಕಂಡ `ಗೆಜ್ಜೆನಾದ’ ಚಿತ್ರದಿಂದ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸತೊಡಗಿದರು.

ಹಲವು ವರ್ಷಗಳ ನಟನೆಯ ನಂತರ ಇವರು 2006 ರಲ್ಲಿ `ಪಾಂಡವರು’ ಚಿತ್ರವನ್ನು ನಿರ್ಮಿಸಿದರು. ಇವರು ಕನ್ನಡ ಚಿತ್ರರಂಗದ ವರನಟ ಡಾ.ರಾಜಕುಮಾರ್ ರವರ ಪುತ್ರಿ ಪೂರ್ಣಿಮಾರವರನ್ನು ಮದುವೆಯಾಗಿದ್ದಾರೆ. ಇನ್ನು ರಾಜ್ ಕುಟುಂಬದ ಅಳಿಯನಾಗಿರುವ ನಟ ರಾಮ್ ಕುಮಾರ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಯಶಸ್ಸು ಕಂಡವರು. ಇಷ್ಟೊಂದು ಸಾಮಾನ್ಯ ನಟ ಅನ್ನವರ ಮನೆಯ ಅಳಿಯ ಆಗಿದ್ದೆಗೆ ಅವರ ಮದುವೆ ವಿಚಾರ ಬೆಳಕಿಗೆ ಬಂದಾಗ ನಿಜಕ್ಕೂ ಏನಾಗಿತ್ತು ಎಲ್ಲವನ್ನು ನೋಡಿ ಈ ವರದಿಯಲ್ಲಿ.


ಹಲವಾರು ಸಂದರ್ಶನಗಳಲ್ಲಿ ಸ್ವತಃ ತಮ್ಮ ಮದುವೆಗೆ ತಾಯಿಯ ವಿರೋಧವಿತ್ತು ಎಂದು ಹಲವಾರು ಸಂದರ್ಶನದಲ್ಲಿ ಸ್ವತಃ ಪೂರ್ಣಿಮಾ ಅವರೇ ಹೇಳಿಕೊಂಡಿದ್ದು ರಾಮ್ ಕುಮಾರ್ ರವರ ಜೊತೆ ಪ್ರೇಮದಲ್ಲಿ ಬಿದ್ದಾಗ ಮೊದಲು ಹೇಳಿಕೊಂಡಿದ್ದು ಪಾರ್ವತಮ್ಮ ರಾಜ್ ರವರು ಬಳಿಯೇ. ಹೌದು ಈ ವಿಚಾರ ತಿಳಿಯುತ್ತಿದ್ದಂತೆ ಪಾರ್ವತಮ್ಮ ನವರು ನಿನ್ನ ತಂದೆಗೆ ಈ ವಿಚಾರವನ್ನು ಯಾವುದೇ ಕಾರಣಕ್ಕೂ ಕೂಡ ಹೇಳಬೇಡ ಎಂದು ಸೂಚಿಸಿದ್ದು ಯಾಕೆಂದರೆ ಪೂರ್ಣಿಮಾ ರವರು ಹೇಳಿದ ತಕ್ಷಣ ಅವರು ಒಪ್ಪಿ ಬಿಡುತ್ತಾರೆ ಎಂಬ ಕಾರಣಕ್ಕಾಗಿಯಂತೆ.

ಹೌದು ಪಾರ್ವತಮ್ಮ ರಾಜ್ ಕುಮಾರ್ ರವರಿಗೆ ರಾಮ್ ಕುಮಾರ್ ರವರನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದು ಬಿಲ್ ಕುಲ್ ಇಷ್ಟವಿರಲಿಲ್ಲವಂತೆ. ಯಾಕೆಂದರೆ ಅವರ ಸುತ್ತಮುತ್ತ ಇದ್ದವರು ಚಿತ್ರರಂಗಕ್ಕೆ ಸೇರಿದವರನ್ನು ಮನೆಗೆ ಅಳಿಯನಾಗಿ ತರುವುದು ಬೇಡ ಎಂದು ಯಾವಾಗಲೂ ಹೇಳುತ್ತಿದ್ದು ಅದರಂತೆಯೇ ದೊಡ್ಡ ಮಗಳು ಲಕ್ಷ್ಮಿಯವರನ್ನು ತಮ್ಮ ಸಹೋದರನಿಗೆ ಕೊಟ್ಟು ಮದುವೆ ಮಾಡಿದ್ದು ಅವರ ಸಂಸಾರ ಬಹಳ ಚೆನ್ನಾಗಿದ್ದ ಕಾರಣ ಎರಡನೇ ಮಗಳಾದ ಪೂರ್ಣಿಮಾ ಅವರನ್ನು ಕೂಡ ಸಿನಿಮಾ ಕ್ಷೇತ್ರಕ್ಕೆ ಸೇರಿದವರಲ್ಲವರಿಗೆ ವಿವಾಹ ಮಾಡಬೇಕು ಎಂಬ ಆಲೋಚನೆ ಮಾಡಿದ್ದರು.

ಇದೆಲ್ಲದಕ್ಕಿಂತ ಹೆಚ್ಚಾಗಿ ಡಾಕ್ಟರ್ ರಾಜ್ ಕುಮಾರ್ ರವರಿಗೆ ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕು ಎಂಬ ಮಹದಾಸೆ ಇರುತ್ತದೆ. ಆದರೆ ಶಿವಣ್ಣನವರು ಬಹುಬೇಗನೇ ಚಿತ್ರರಂಗಕ್ಕೆ ಬಂದಿದ್ದು ಅವರಿಂದ ಸಾಧ್ಯವಾಗಲಿಲ್ಲ. ಇನ್ನು ರಾಘಣ್ಣ ಅವರಿಂದ ಮಾಡಿಸೋಣ ಎಂದರೇ ಅವರು ಕೂಡ ಅರ್ಧದಲ್ಲೇ ವಿದ್ಯಾಭ್ಯಾಸವನ್ನು ಬಿಡುತ್ತಾರೆ. ಇತ್ತ ಪುನೀತ್ ಬಾಲನಟನಾಗಿ ಚಿತ್ರರಂಗಕ್ಕೆ ಅದಾಗಲೇ ಪಾದಾರ್ಪಣೆ ಮಾಡಿರುತ್ತಾರೆ.

ಆದ ಕಾರಣದಿಂದ ತಮ್ಮ ಮನೆಗೆ ಅಳಿಯನಾಗಿ ಬರುವವರಾದರೂ ವೈದ್ಯರಾಗಿರ ಬೇಕು ಎಂಬುದು ರಾಜಣ್ಣನವರ ಮಹಾದಾಸೆಯಾಗಿತ್ತು. ಹೌದು ಈ ಕಾರಣದಿಂದಾಗಿ ಪಾರ್ವತಮ್ಮನವರು ಯಾವುದೇ ಕಾರಣಕ್ಕೂ ನಿನ್ನ ತಂದೆಯ ಬಳಿ ಹೇಳಬೇಡ ಎಂದಿದ್ದರಂತೆ. ಯಾಕೆಂದರೆ ಅವರುಹೇಳಿದ ತಕ್ಷಣ ಅವರು ಒಪ್ಪಿಕೊಂಡು ಬಿಡುತ್ತಾರೆ ಅವರು ಮಕ್ಕಳ ಆಸೆಗೆ ಆಕ್ಷೇಪಣೆ ಮಾಡುವುದಿಲ್ಲವೆಂದು ಅವರಿಗೆ ಗೊತ್ತಿತ್ತು.

ಈ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ಪೂರ್ಣಿಮಾ ರವರು ತದನಂತರ ರಾಮ್ ಕುಮಾರ್ ರವರನ್ನು ಕರೆದುಕೊಂಡು ಹೋಗಿ ಯಾರಿಗೂ ಹೇಳದೆ ಮದುವೆಯಾಗಿಯೇ ಬಿಡುತ್ತಾರೆ. ಅಷ್ಟರಲ್ಲಾಗಲೇ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಈ ಕಾರಣದಿಂದಾಗಿ ದೊಡ್ಮನೆಯವರು ವಿವಾದ ಸೃಷ್ಟಿ ಮಾಡಬಾರದು ಎಂದು ಗೌಪ್ಯವಾಗಿರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಇನ್ನು ಮಗಳು ಹೀಗೆ ಮಾಡಿಬಿಟ್ಟರಲ್ಲ ಎಂದು ರಾಜ್ ಕುಮಾರ್ ರವರು ಬೇಸರ ಮಾಡಿಕೊಂಡರೆ ಇತ್ತ ಪಾರ್ವತಮ್ಮನವರಿಗೆ ತಮ್ಮ ಮಗಳ ಮೇಲೆಯೇ ದೊಡ್ಡಮಟ್ಟದಲ್ಲಿಯೇ ಕೋಪ ಮುನಿಸು ಎಲ್ಲವೂ ಹೆಚ್ಚಾಗಿರುತ್ತದೆ.

ಈ ಕಾರಣದಿಂದಾಗಿಯೇ ಬರೋಬ್ಬರಿ ಎರಡು ವರುಷಗಳ ಕಾಲ ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರು ತಮ್ಮ ತಂದೆ ತಾಯಿ ನಿವಾಸಕ್ಕೆ ಬರಲೇ ಇಲ್ಲ. ಅತ್ತ ಪಾರ್ವತಮ್ಮ ರಾಜ್ ಕುಮಾರ್ ದಂಪತಿಗಳು ಕೂಡ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರನ್ನು ಕೂಡ ನೋಡಲು ಹೋಗಲೇಯಿಲ್ಲ.

ಆದರೆ ಮಕ್ಕಳಾದ ಬಳಿಕ ತಡೆಯಲಾರದೆ ರಾಜಂ ದಂಪತಿಗಳು ಹೋಗಿ ತಮ್ಮ ಮಗಳು ಅಳಿಯ ಹಾಗೂ ಮೊಮ್ಮಕ್ಕಳನ್ನು ನೋಡಿ ಸಂತಸ ಪಟ್ಟಿದ್ದು ಎಲ್ಲಾ ಮನಸ್ತಾಪಗಳನ್ನು ಸರಿಮಾಡಿಕೊಂಡು ಮೊದಲಿನಂತೆ ಆಗುತ್ತಾರೆ. ಆದರೆ ಇಲ್ಲಿಯೂ ಕೂಡ ಮೊದಲ ಮಗುವಾದಾಗ ಪಾರ್ವತಮ್ಮ ಹಾಗೂ ರಾಜ್ ಕುಮಾರ್ ರವರು ಮಗುವನ್ನು ನೋಡಲು ಹೋಗಿರಲಿಲ್ಲ. ಶಿವಣ್ಣ ಮಾತ್ರ ಹೋಗಿದ್ದರಂತೆ.

ಈ ವಿಚಾರ ಪೂರ್ಣಿಮಾ ದಂಪತಿಗೆ ಬಹಳ ಬೇಸರವಿತ್ತು. ಸದ್ಯ ಇದೀಗ ಎಲ್ಲಾ ಮನಸ್ತಾಪಗಳು ದೂರಾಗಿ ದೊಡ್ಮನೆ ಕುಟುಂಬ ಒಂದಾಗಿ ನೆಮ್ಮದಿಯಾಗಿದ್ದು ರಾಮ್ ಕುಮಾರ್ ರವರು ಕೂಡ ಯಾವುದೇ ರೀತಿಯ ಕಾಂಟ್ರವರ್ಸಿಗಳಲ್ಲಿ ಸಿಲುಕಿಕೊಳ್ಳದೆ ದೊಡ್ಮನೆಗೆ ತಕ್ಕ ಅಳಿಯನಾಗಿ ರಾಜ್ ರವರಿಗೆ ಗೌರವ ತರುವಂತಹ ಕೆಸಲ ಮಾಡುತ್ತಾ ಬಂದಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field