Ads By Google

Ram Mandir: ಅಯೋಧ್ಯಾ ರಾಮನ ದರ್ಶನ ಮಾಡುವವರೇ ಗಮನಿಸಿ, ಇಲ್ಲಿದೆ ನೋಡಿ ರಾಮನ ದರ್ಶನದ ಟೈಮಿಂಗ್.

Ram Mandir Darshan Timings

Image Source: India Today

Ads By Google

Ram Mandir Darshan Timings : ಅಯೋಧ್ಯ ಶ್ರೀರಾಮನ ದರ್ಶನ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ರಾಮಜನ್ಮ ಭೂಮಿ ಟ್ರಸ್ಟ್ ಜನವರಿ 23 ರಿಂದ ರಾಮ ಮಂದಿರ ದರ್ಶನ ಭಾಗ್ಯವನ್ನು ಸಾರ್ವಜನಿಕರಿಗೆ ನೀಡಿದೆ.

ಬೆಳಿಗ್ಗೆಯಿಂದಲೇ ಅಯೋದ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀ ರಾಮಲಲ್ಲಾ ದರ್ಶನವನ್ನು ಪಡೆದಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಗರಿಷ್ಟ ಭಕ್ತರು ದರ್ಶನ ಪಡೆದು ಅಯೋದ್ಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ ಎನ್ನಬಹುದು.

Image Credit: Biharhelp

ಅಯೋಧ್ಯಾ ರಾಮನ ದರ್ಶನ ಮಾಡುವವರೇ ಗಮನಿಸಿ
ಅಯೋಧ್ಯ ಶ್ರೀ ರಾಮನ ದರ್ಶದನ ಪಡೆಯಲು ಸಾರ್ವಜನಿಕರಿಗೆ ಜನವರಿ 23 ರಿಂದ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಭವ್ಯವಾದ ದೇವಾಲಯದ ‘ದರ್ಶನ’ ಅವಧಿಯಲ್ಲಿ ಭಗವಾನ್ ರಾಮ್ ಲಲ್ಲಾನ ದರ್ಶನಕ್ಕಾಗಿ ಸಾವಿರಾರು ಭಕ್ತರು “ಆರತಿ” ಗಾಗಿ ಉಚಿತ ಪಾಸ್‌ ಗಳು ಆಫ್‌ ಲೈನ್ ಮತ್ತು ಆನ್‌ ಲೈನ್‌ ನಲ್ಲಿ ಲಭ್ಯವಿದೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ ಸೈಟ್‌ ನ ಪ್ರಕಾರ, ಶ್ರೀರಾಮ ಜನ್ಮ ಭೂಮಿಯಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಮಾನ್ಯ ಸರ್ಕಾರಿ ಗುರುತಿನ ಪುರಾವೆಯನ್ನು ಹಾಜರುಪಡಿಸುವ ಮೂಲಕ ಆಫ್‌ ಲೈನ್ ಪಾಸ್‌ ಗಳನ್ನು ಪಡೆಯಬಹುದು. ಇನ್ನು . ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರಾಮನ ದರ್ಶನದ ಟೈಮಿಂಗ್ ಅನ್ನು ನಿಗದಿಪಡಿಸಿದೆ. ಈ ನೀವು ಲೇಖನದಲ್ಲಿ ಶ್ರೀರಾಮನ ದರ್ಶನ ಭಾಗ್ಯದ ಟೈಮಿಂಗ್ ಅನ್ನು ತಿಳಿದುಕೊಳ್ಳಬಹುದು.

Image Credit: Jagran

ಇಲ್ಲಿದೆ ನೋಡಿ ರಾಮನ ದರ್ಶನದ ಟೈಮಿಂಗ್
ದರ್ಶನದ ಸಮಯ
7:00 AM ನಿಂದ 11:30 AM
2:00 PM ರಿಂದ 7:00 PM

ರಾಮಮಂದಿರ ಆರತಿ ಸಮಯ
ಜಾಗರಣ ಅಥವಾ ಶೃಂಗಾರ್ ಆರತಿ: ಬೆಳಿಗ್ಗೆ 6:30

ಸಂಧ್ಯಾ ಆರತಿ: ರಾತ್ರಿ 7:30

Image Credit: India TV News

ಆನ್ಲೈನ್ ನಲ್ಲಿ ಆರತಿ, ದರ್ಶನಕ್ಕಾಗಿ ಬುಕ್ ಮಾಡುವುದು ಹೇಗೆ..?
•ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್‌ ಸೈಟ್‌ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

•ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ ಮತ್ತು ಬಳಕೆದಾರರು ನೋಂದಣಿಗಾಗಿ OTP ಅನ್ನು ಸ್ವೀಕರಿಸುತ್ತಾರೆ.

•’My profile’ ಗೆ ಹೋಗಿ ಮತ್ತು ಆರತಿ ಅಥವಾ ದರ್ಶನಕ್ಕಾಗಿ ಬಯಸಿದ ಸ್ಲಾಟ್ ಅನ್ನು ಬುಕ್ ಮಾಡಿ.

•ರುಜುವಾತುಗಳನ್ನು ಮತ್ತು ಬುಕ್ ಪಾಸ್ ಅನ್ನು ಒದಗಿಸಿ.

•ಆವರಣವನ್ನು ಪ್ರವೇಶಿಸುವ ಮೊದಲು ದೇವಸ್ಥಾನದ ಕೌಂಟರ್‌ ನಿಂದ ಪಾಸ್ ಪಡೆಯಬಹುದು.

•ಪ್ರವೇಶ ಪಾಸ್‌ ನಲ್ಲಿ ನಮೂದಿಸಲಾದ ಕ್ಯೂಆರ್ ಕೋಡ್‌ ಗಳನ್ನು ಸ್ಕ್ಯಾನ್ ಮಾಡಿದ ನಂತರ ಭಕ್ತರಿಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in