Ram Mandir: ರಾಮ ಮಂದಿರಕ್ಕಾಗಿ 30 ವರ್ಷದಿಂದ ಮೌನವೃತ ಮಾಡುತ್ತಿರುವ ಈ ಮಹಿಳೆ…? ಈಕೆ ನಿಜಕ್ಕೂ ಗ್ರೇಟ್
ರಾಮ ಮಂದಿರಕ್ಕಾಗಿ 30 ವರ್ಷಗಳಿಂದ ಮೌನ ವೃತ ಮಾಡುತ್ತಿರುವ ಈ ಮಹಿಳೆ ಯಾರು...?
Saraswati Devi Mouna Vrat: ಜನವರಿ 22 ,2024 ದೇಶದಲ್ಲಿ ಬಹಳ ಪ್ರಮುಖವಾದ ದಿನವಾಗಿದೆ, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾ ಕಾರ್ಯಕ್ರಮ ಜರುಗಲಿದೆ. ಈ ಶುಭ ಕಾರ್ಯಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ, ಅಯೋಧ್ಯೆ ಈಗ ಸಂಭ್ರಮಕ್ಕೆ ಸಕಲ ಸಿದ್ಧತೆಯೊಂದಿಗೆ ಸಜ್ಜಾಗುತ್ತಿದೆ.
ಅಯೋಧ್ಯೆಯ ರಾಮನ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ ಆದರೆ ಇತೀಚಿಗೆ ಇನ್ನೊಂದು ದೊಡ್ಡ ಮಾಹಿತಿ ಹೊರಬಿದ್ದಿದ್ದು, ಜಾರ್ಖಂಡ್‌ನ ಧನಾಬಾದ್ ನ 85 ವರ್ಷದ ಸರಸ್ವತಿ ದೇವಿಗೆ ಶ್ರೀರಾಮನ ಮೇಲೆ ಅಪಾರ ಭಕ್ತಿ, 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು. ಅಲ್ಲಿ ಮತ್ತೆ ರಾಮಮಂದಿರ ನಿರ್ಮಾಣ ಆಗುವವರೆಗೂ ಮೌನವೃತ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರಂತೆ ಈ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.
1992 ರಿಂದ ಮೌನದಿಂದಿರುವ ಸರಸ್ವತಿ ದೇವಿ
ಸರಸ್ವತಿ ದೇವಿ ಅವರ ಮೌನ ವೃತ್ತದ ಬಗ್ಗೆ ಅವರ ಮಗ ಹರಿರಾಮ್ ಅಗರ್ವಾಲ್ ಈ ರೀತಿಯಾಗಿ ಹೇಳಿದ್ದಾರೆ, ಸರಸ್ವತಿ ದೇವಿ ಅವರು ಮೇ 1992 ರಲ್ಲಿ ಅಯೋಧ್ಯೆಗೆ ತೆರಳಿದ್ದರು. ಅಲ್ಲಿ ರಾಮ ಜನ್ಮಭೂಮಿ ಟ್ರಸ್ಟ್ ನ ಮುಖ್ಯಸ್ಥರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರನ್ನು ಭೇಟಿಯಾದ ನಂತರ ತಮ್ಮ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದರು. ಅವರ ಆದೇಶದಂತೆ ಚಿತ್ರಕೂಟಕ್ಕೆ ತೆರಳಿ ಏಳೂವರೆ ತಿಂಗಳುಗಳ ಕಾಲ ಕಲ್ಪವಸದಲ್ಲಿ ನೆಲೆಸಿದ್ದರು. ಅವರು ದಿನಕ್ಕೆ ಒಂದು ಲೋಟ ಹಾಲು ಮಾತ್ರ ಸೇವಿಸುತ್ತಾರೆ.
ಪ್ರತಿದಿನ ಕಮ್ತಾನಾಥ ಪರ್ವತದ ಸುತ್ತಲಿನ 14 ಕಿಲೋಮೀಟರ್ ಮಾರ್ಗದಲ್ಲಿ ಪ್ರದಕ್ಷಿಣೆ ಮಾಡುತ್ತಾರೆ. ಇದನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದರು. ಡಿಸೆಂಬರ್ 6, 1992 ರಂದು, ಅವರು ಸ್ವಾಮಿ ನೃತ್ಯ ಗೋಪಾಲ್ ದಾಸ್ ಅವರನ್ನುಮತ್ತೆ ಭೇಟಿಯಾದರು. ನಂತರ ಅವರು ಮೌನ ವ್ರತವನ್ನು ಆಚರಿಸಲು ಪ್ರೇರೇಪಿಸಿದರು. ರಾಮ ಮಂದಿರವನ್ನು ಪ್ರತಿಷ್ಠಾಪಿಸಿದ ದಿನದಂದು ಮಾತ್ರ ಮೌನವನ್ನು ಮುರಿಯುವುದಾಗಿ ಅವರು ವಾಗ್ದಾನ ಮಾಡಿದರು ಎಂದು ವಿವರಿಸಿದ್ದಾರೆ.
ಕಲಿಯುಗದಲ್ಲಿ ಸರಸ್ವತಿ ದೇವಿಯಂತಹ ಭಕ್ತೆ ಇರಲು ಸಾಧ್ಯವಿಲ್ಲ
ಸರಸ್ವತಿ ದೇವಿ ಅವರು ಸುಮಾರು 30 ವರ್ಷಗಳಿಂದ ಮೌನವಾಗಿಯೇ ಇದ್ದಾರೆ. ಭಕ್ತರು ಯುಗಯುಗಾಂತರಗಳಿಂದ ರಾಮನನ್ನು ಪೂಜಿಸುತ್ತಿದ್ದಾರೆ, ಆದರೆ ಕಲಿಯುಗದಲ್ಲಿ ಸರಸ್ವತಿ ದೇವಿಯ ಭಕ್ತಿಯನ್ನು ಇಡೀ ದೇಶಾದ್ಯಂತ ಚರ್ಚಿಸಲಾಗುತ್ತಿದೆ. ಸರಸ್ವತಿ ದೇವಿ ಅವರು ಮನೆಗಿಂತ ಹೆಚ್ಚು ತೀರ್ಥಕ್ಷೇತ್ರಗಳಲ್ಲಿ ವಾಸಿಸುತ್ತಾರೆ. ಈ ಸಂದರ್ಭಗಳಲ್ಲೂ ಅವರು ಯಾವಾಗಲೂ ಮೌನವಾಗಿರುತ್ತಾರೆ. ಕುಟುಂಬದ ಸದಸ್ಯರಿಗೆ ಏನಾದರೂ ಹೇಳಲು ಇದ್ದರೆ, ಅವರು ಪೇಪರ್ನಲ್ಲಿ ಲಿಖಿತವಾಗಿ ಎಲ್ಲರಿಗೂ ತಿಳಿಸುತ್ತಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಈ ಭಕ್ತೆಯ ಭಕ್ತಿಗೆ ಯಾರು ಸರಿಸಾಟಿಯಿಲ್ಲ ಎನ್ನಬಹುದು.