Ramya: ಕಾಂಗ್ರೆಸ್ ನ ಐದು ಗ್ಯಾರೆಂಟಿಗಳಿಗೆ ಭರವಸೆ ನೀಡಿದ ರಮ್ಯಾ, ಐದು ಗ್ಯಾರೆಂಟಿ ಬಗ್ಗೆ ರಮ್ಯಾ ಮಾತು.
ಕಾಂಗ್ರೆಸ್ ನೀಡಿದ 5 ಭರವಸೆಗಳ ಬಗ್ಗೆ ಮಾತನಾಡಿದ ನಟಿ ರಮ್ಯಾ , ಗ್ಯಾರೆಂಟಿ ಈಡೇರಿಸುವ ಭರವಸೆ ನೀಡಿದ ರಮ್ಯಾ.
Ramya About Congress Guarantee: ನಿನ್ನೆ ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಕಾಂಗ್ರೆಸ್ ನ ಸರಕಾರ ರಚನೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ಸಿದ್ದರಾಮಯ್ಯ (Siddaramaiah) ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಬಂದಿದ್ದಾರೆ. ನಟಿ ರಮ್ಯಾ (Ramya) ಸಹ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಬಂದು ಐದು ಗ್ಯಾರೆಂಟಿಗಳಿಗೆ ಭರವಸೆಯ ಮಾತನ್ನು ಆಡಿದ್ದಾರೆ.
ಕಾಂಗ್ರೆಸ್ ನ ಐದು ಗ್ಯಾರೆಂಟಿ ಬಗ್ಗೆ ಭರವಸೆ ನೀಡಿದ ನಟಿ ರಮ್ಯಾ
ನಟಿ ರಮ್ಯಾ ಅವರು ಸರ್ಕಾರ ರಚನೆಗೆ ಬಂದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಐದು ಗ್ಯಾರೆಂಟಿಸ್ ಬಗ್ಗೆ ಕೇಳಲಾಗಿದೆ. ನಟಿ ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ಭರವಸೆ ನೀಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಸರ್ಕಾರ ಇರುತ್ತದೆ ಅಂತ ಹೇಳಿದ್ದಾರೆ. ಇನ್ನು ಐದು ಗ್ಯಾರೆಂಟಿಗಳನ್ನು ಅವರು ಫುಲ್ ಫಿಲ್ ಮಾಡುತ್ತಾರೆ ಅಂತ ಜನತೆಗೆ ಭರವಸೆ ಸಹ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದ ಸರ್ಕಾರ
ಈಗಾಗಲೇ ಸರ್ಕಾರ ಐದು ಗ್ಯಾರೆಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನು ಯುವ ನಿಧಿ ಯೋಜನೆ ಹಾಗು ಶಕ್ತಿ ಯೋಜನೆಗಳನ್ನು ಜಾರಿಗೆ ತರಲು ತಾತ್ವಿಕ ಆದೇಶ ಆಗಿದೆ. ಇನ್ನುಳಿದ ಗ್ಯಾರೆಂಟಿಗಳು ಸದ್ಯದಲ್ಲಿ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಸರ್ಕಾರ ತಿಳಿಸಿದೆ.
ಸರ್ಕಾರ ರಚನೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್
ಈ ಬಾರಿ ಚುನಾವಣೆಯಲ್ಲೂ ಶಿವರಾಜ್ ಕುಮಾರ್, ದುನಿಯಾ ವಿಜಯ್, ಸಾಧುಕೋಕಿಲಾ, ನಿಶ್ವಿಕಾ ನಾಯ್ಡು, ರಮ್ಯಾ ಸೇರಿದಂತೆ ಹಲವರು ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಕೆಲವರು ಸಿದ್ದರಾಮಯ್ಯನವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರೆ, ಇನ್ನೂ ಹಲವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಎಲ್ಲ ನಟ ನಟಿಯರು ಸಹ ನಿನ್ನೆ ನಡೆದ ಸರ್ಕಾರ ರಚನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.