Ramya And Dali Dhananjay New Movie: ಬಯೋಪಿಕ್ ಚಿತ್ರದಲ್ಲಿ ಮತ್ತೆ ಜೊತೆಯಾಗಲಿರುವ ಡಾಲಿ ಧನಂಜಯ್- ರಮ್ಯಾ

Ramya And Dali Dhananjay New Movie: ಸ್ಯಾಂಡಲ್ ವುಡ್ ಕ್ವೀನ್ ಮೋಹಕತಾರೆ ರಮ್ಯಾ (Ramya) ಇದೀಗ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ನಟಿ ರಮ್ಯಾ ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ದೂರ ಉಳಿದು ರಾಜಕೀಯಕ್ಕೆ ಸೇರಿದ್ದರು.

ಹಲವು ಸಮಯಗಳ ಕಾಲ ನಟಿ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ಆದರೆ ಇದೀಗ ಉತ್ತರಕಾಂಡ (Uttarakaanda Movie) ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

Dolly Dhananjay-Ramya to reunite in a biopic
Image Source: India Today

ಚಿತ್ರರಂಗಕ್ಕೆ ಮತ್ತೆ ಮರಳಿದ ನಟಿ ರಮ್ಯಾ
ನಟಿ ರಮ್ಯಾ ಸಾಕಷ್ಟು ಸಮಯಗಳ ನಂತರ ಚಿತ್ರರಂಗಕ್ಕೆ ಮರಳಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ್ (Dali Dhananjay) ಅವರ ಜೊತೆ ರಮ್ಯಾ ನಾಯಕಿಯಾಗಿ ಉತ್ತರಕಾಂಡ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ರಮ್ಯಾ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಮೋಹಕತಾರೆ ಹಾಗೂ ನಟ ರಾಕ್ಷಸ ಡಾಲಿ ಧನಂಜಯ್ ಜೋಡಿ ಆಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

Dolly Dhananjay-Ramya to reunite in a biopic
Image Source: India Today

ಬಯೋಪಿಕ್ ಚಿತ್ರದಲ್ಲಿ ಮತ್ತೆ ಜೊತೆಯಾಗಲಿರುವ ಡಾಲಿ- ರಮ್ಯಾ
ಕನ್ನಡದಲ್ಲಿ ಗಣ್ಯರ ಜೀವನಚರಿತ್ರೆ ಆಧರಿಸಿದ ಅನೇಕ ಸಿನಿಮಾಗಳು ತಯಾರಾಗಿವೆ. ಈಗ ಮತ್ತೊಬ್ಬರು ಖ್ಯಾತ ನಮರ ಬಯೋಪಿಕ್ ತಯಾರಾಗುತ್ತಿದ್ದು, ಈ ಚಿತ್ರಕ್ಕೆ ಮತ್ತೆ ಡಾಲಿ ಧನಂಜಯ್ ಹಾಗೂ ರಮ್ಯಾ ಜೋಡಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ ಧನಂಜಯ್ ಖ್ಯಾತ ಹೋರಾಟಗಾರ, ಪ್ರೊಫೆಸರ್ ಎಂ.ಡಿ ನಂಜುಂಡ ಸ್ವಾಮಿ (M.D Nanjunda Swami Biopic) ಅವರ ಬಯೋಪಿಕ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು.

Join Nadunudi News WhatsApp Group

Dolly Dhananjay-Ramya to reunite in a biopic
Image Source: India Today

 

ಚಿತ್ರದಲ್ಲಿ ಧನಂಜಯ್ ಪ್ರೊಫೆಸರ್ ಎಂ.ಡಿ ನಂಜುಂಡ ಸ್ವಾಮಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ, ಹಾಗು ರಮ್ಯಾ ನಂಜುಂಡ ಸ್ವಾಮಿ ಅವರ ಪತ್ನಿ ಪ್ರತಿಮಾ ನಂಜುಂಡ ಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಕನ್ನಡದ ಜೊತೆಗೆ ತೆಲಗು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Dolly Dhananjay-Ramya to reunite in a biopic
Image Source: India Today

Join Nadunudi News WhatsApp Group