Dhananjay: ಸಿಹಿಸುದ್ದಿ ತಿಳಿಸಿದ ರಮ್ಯಾ ಹಾಗೂ ಡಾಲಿ ಧನಂಜಯ್
Ramya and Dolly Dhananjay Shared The Good News: ಸ್ಯಾಂಡಲ್ ವುಡ್(Sandalwood) ಕ್ವೀನ್(Queen) ರಮ್ಯಾ ನಾಗರಹಾವು(Nagarahavu) ಚಿತ್ರದ ಬಳಿಕ ನಟನೆಯಿಂದ ದೂರ ಸರಿದಿದ್ದು ಹೀಗೆ ಐದಾರು ವರ್ಷಗಳ ಕಾಲ ಸಿನಿ ರಂಗದಿಂದೂರ ಉಳಿದಿದ್ದ ನಟಿ ರಮ್ಯಾ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅವರ ಅಭಿಮಾನಿಗಳು ಕಾದು ಕುಳಿತ್ತಿದ್ದರು.
ಆ ಪ್ರಶ್ನೆಗೆ ಉತ್ತರ ನೀಡಿದ ರಮ್ಯಾ ಇತ್ತೀಚಿಗಷ್ಟೆ ಆ್ಯಪಲ್ ಬಾಕ್ಸ್(Apple Box) ಎಂಬ ತಮ್ಮ ಒಡೆತನದ ಪ್ರೊಡಕ್ಷನ್(Production) ಕಂಪನಿಯನ್ನು ಕೂಡ ಘೋಷಣೆ ಮಾಡಿ ಅದರಡಿಯಲ್ಲಿ ನಿರ್ಮಾಣವಾಗಲಿರುವ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಲ್ಲಿ ತಾವೇ ನಟಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುವುದಾಗಿ ಬಹಿರಂಗಪಡಿಸಿದ್ದು ಆದರೆ ಈ ಚಿತ್ರದಿಂದ ರಮ್ಯಾ ಹೊರ ನಡೆದಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿತ್ತು.
ಇನ್ನು ನಟಿ ರಮ್ಯಾ ಜಾಗಕ್ಕೆ ಯುವನಟಿಯೊಬ್ಬರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿದ್ದು ಹೀಗಾಗಿ ರಮ್ಯಾ ಸ್ವಾತಿಮುತ್ತಿನ ಮಳೆಹನಿಯೇ ಚಿತ್ರದ ಮೂಲಕ ಚಂದನವನಕ್ಕೆ ಮರು ಪ್ರವೇಶ ಮಾಡಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆ ಉಂಟಾಗಿತ್ತು.
ಹೌದು ಆದರೀಗ ಮೋಹಕ ತಾರೆ ರಮ್ಯಾ ಡಾಲಿ ಧನಂಜಯ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿರುವ ಸುದ್ದಿ ಹೊರಬಿದ್ದಿದ್ದು ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಹೌದಯ ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟ ಡಾಲಿ ಧನಂಜಯ್ ಜತೆ ರಮ್ಯಾ ಜೋಡಿಯಾಗಿ ಹೇಗೆ ಕಾಣಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರಿಯರಲ್ಲಿ ಹೆಚ್ಚಾಗಿದ್ದು ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ಉತ್ತರಕಾಂಡ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ನಡೆಸಿದ್ದಾರೆ ರಮ್ಯಾ.
ನಟ ಧನಂಜಯ್ ಅಭಿನಯದ ಉತ್ತರಕಾಂಡ ಎಂಬ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ನಟಿಯಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಹೌದು ಕೆಲ ದಿನಗಳ ಹಿಂದಷ್ಟೆ ಈ ಸಿನಿಮಾದಲ್ಲಿ ನಟಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು ಆದರೆ ಎಲ್ಲಿಯೂ ಈ ಕುರಿತಾಗಿ ಅಧಿಕೃತ ಘೋಷಣೆ ಆಗಿರಲಿಲ್ಲ.
ಆದರೆ ಇಂದು ( ನವೆಂಬರ್ 6 ) ನಡೆದ ಚಿತ್ರದ ಮುಹೂರ್ತ ಸಮಾರಂಭದ ಮೂಲಕ ರಮ್ಯಾನೇ ಈ ಚಿತ್ರದ ನಾಯಕಿ ಎಂಬುದು ರಿವೀಲ್ ಆಗಿದ್ದು ನಟಿ ರಮ್ಯಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಫೋಟೋಗಳು ವೈರಲ್ ಆಗಿವೆ. ಚಿತ್ರದ ಪೋಸ್ಟರ್‌ನಲ್ಲೂ ಕೂಡ ಧನಂಜಯ್ ಹಾಗೂ ರಮ್ಯಾ ಇಬ್ಬರ ಹೆಸರಿದ್ದು ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ನಿರ್ದೇಶನವಿದ್ದು ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಲಿದ್ದಾರೆ.
ರತ್ನನ್ ಪ್ರಪಂಚ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ಹೌದು ನನಗೆ ಅತ್ಯಂತ ಆಪ್ತವಾದ ಸಿನಿಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ತಂಡದ ಜೊತೆ ಕೈ ಜೋಡಿಸಲು ಖುಷಿಯಾಗುತ್ತಿದ್ದು ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರೂ ನನ್ನ ಮೇಲೆ ತೋರುತ್ತಿರುವ ಅಭಿಮಾನ ಒಳ್ಳೆಯ ಜಾಗದಲ್ಲಿರುವೆ ಎಂಬ ಭಾವನೆ ನೀಡುತ್ತಿದೆ ಎಂದು ರಮ್ಯಾ ಹೇಳಿದ್ದಾರೆ.
ಇನ್ನು ಈ ಚಿತ್ರ ಮನುಷ್ಯನ ವಿಲಕ್ಷಣ ಮನಸ್ಸಿನ ಹೋರಾಟವನ್ನ ಬಿಂಬಿಸಲಿದ್ದು ಸರಿ ತಪ್ಪುಗಳ ಸಿದ್ದಾಂತ ಅಹಂಕಾರಗಳ ಗುದ್ದಾಟ. ಉತ್ತರಕರ್ನಾಟಕದ ಅದ್ಬುತ ಬದುಕಿನ ನಡುವೆ ನಡೆಯುವ ಕಥೆ ಹೇಳುತ್ತಿರುವುದು ನನಗೆ ದೊಡ್ಡ ಸವಾಲು ಹಾಗೂ ಜವಾಬ್ದಾರಿ ಎಂದು ನಿರ್ದೇಶಕ ರೋಹಿತ್ ಪದಕಿ ಹೇಳಿದ್ದಾರೆ. ಚಿತ್ರ ಸಂಪೂರ್ಣ ಉತ್ತರಕರ್ನಾಟಕದ ಸೊಗಡಲ್ಲಿ ಭಾಷೆಯಲ್ಲಿ ಇರುತ್ತದೆ ಹಾಗೂ ಅಲ್ಲಿಯೇ ಚಿತ್ರೀಕರಣವಾಗಲಿದೆ ಎನ್ನಲಾಗಿದೆ.