Ranbir Kapoor About Raha: ಮಗಳ ಬಗ್ಗೆ ಮಾತನಾಡಿದ ರಣಬೀರ್, ಇದು ವಿಶ್ವದ ಅತ್ಯುತ್ತಮ ಭಾವನೆ.

Ranbir Kapoor About Daughter Raha ಬಾಲಿವುಡ್ ನ ಸ್ಟಾರ್ ಜೋಡಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhat) ಇದೀಗ ತಮ್ಮ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿದ್ದಾರೆ.

ಆಲಿಯಾ ಭಟ್ ಹಾಗೂ ರಣಬೀರ್ ದಂಪತಿಗಳಿಗೆ ರಾಹಾ (Raha Kapoor) ಎನ್ನುವ ಮುದ್ದಾದ ಮಗಳಿದ್ದಾಳೆ. ಈವರೆಗೂ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿಲ್ಲ. ಆದರೆ ಮೊದಲ ಬಾರಿಗೆ ರಣಬೀರ್ ಕಪೂರ್ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ.

Actor Rambir Kapoor spoke about his daughter in front of the media
Image credit: instagram

ಮಗಳ ಬಗ್ಗೆ ಮಾತನಾಡಿದ ರಣಬೀರ್ ಕಪೂರ್
ಕಳೆದ ವರ್ಷ ರಣಬೀರ್ ಹಾಗೂ ಆಲಿಯಾ ಭಟ್ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಾಲಿವುಡ್ ನಲ್ಲಿ ಈ ಸ್ಟಾರ್ ಜೋಡಿ ಹೆಚ್ಚು ಫೇಮಸ್ ಆಗಿದ್ದಾರೆ. ಇನ್ನು ಮದುವೆ ಆಗಿ ಒಂದು ವರ್ಷದಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ರಾಹಾ ಕಪೂರ್ ಎನ್ನುವ ಹೆಸರನ್ನು ಕೂಡ ಇಟ್ಟಿದ್ದಾರೆ.

ಈವರೆಗೂ ಕೂಡ ಆಲಿಯಾ ಹಾಗೂ ರಣಬೀರ್ ತಮ್ಮ ಮಗಳ ಮುಖವನ್ನು ಪರಿಚಯಿಸಿಲ್ಲ. ಆದರೆ ಮೊದಲ ಬಾರಿಗೆ ರಣಬೀರ್ ಇದೀಗ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ.

Actor Rambir Kapoor talked about how much he loves his daughter
Image Credit: instagram

ತಂದೆಯಾಗಿರುವ ಖುಷಿಯನ್ನು ಹಂಚಿಕೊಂಡಿರುವ ರಣಬೀರ್ ಕಪೂರ್
“ನಾನು ಮನೆಯಿಂದ ಹೊರ ಬರಲು ಸಹ ಬಯಸುವುದಿಲ್ಲ. ಬೆಳಗ್ಗೆ ನಾನು ವಿಮಾನ ಹತ್ತುವ ಮುನ್ನ 20 ನಿಮಿಷಗಳು ತುಂಬಾ ಖುಷಿ ನೀಡಿತು. ನಾನು ಅವಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನಾನು ಯಾವಾಗಲು ಆಕೆಯ ಫೋಟೋವನ್ನು ನೋಡುತ್ತಿರುತ್ತೇನೆ.

Join Nadunudi News WhatsApp Group

Actor Rambir Kapoor posted that he misses his daughter a lot
Image Credit: instagram

ನಾನು ಮನೆಯಲ್ಲಿದ್ದಾಗ ಯಾವಾಗಲು ಅವಳ ಪಕ್ಕದಲ್ಲೇ ಇರುತ್ತೇನೆ. ಅದು ಒಂದು ಅತರ್ ಮ್ಯಾಜಿಕ್ ಆಗಿದೆ. ಕಳೆದ ಎರಡು ವಾರಗಳಲ್ಲಿ ಅವಳು ನಗಲು ಪ್ರಾರಂಭಿಸಿದ್ದಾಳೆ. ಆ ನಗುವನ್ನು ನೋಡಿದಾಗ ನಮ್ಮ ಹೃದಯ ಬ್ರೇಕ್ ಆಗುತ್ತದೆ. ಇದು ಪ್ರೀತಿಯ ಹೊಸ ತಿಳುವಳಿಕೆಯಂತೆ ಭಾಸವಾಗುತ್ತದೆ.

Actor Rambir Kapoor said that his daughter has started smiling
Image Credit: instagram

ಪ್ರೀತಿಯ ಭಾಷೆಯ ಬಗ್ಗೆ ನೀವು ನನ್ನನು ಕೇಳುತ್ತಿದ್ದೀರಿ, ಆದರೆ ಮಗುವಿಗೆ ಭಾಷೆಯಿಲ್ಲ. ಇದು ನೀವು ವಿವರಿಸಲು ಸಾಧ್ಯವಿಲ್ಲದ ಪ್ರೀತಿ” ಎಂದಿದ್ದಾರೆ.

ಪತ್ರಕರ್ತರ ಬಳಿ ರಣಬೀರ್ ನೀವು ತಂದೆಯಾಗಿದ್ದೀರಾ ಎಂದು ಕೇಳಿದ್ದಾರೆ. ಅವರು ಇಲ್ಲ ಎಂದರು. ಆಗ ‘ನಾನು ನಿಮಗೆ ಹಾರೈಸುತ್ತೇನೆ’, ಏಕೆಂದರೆ ಇದು ವಿಶ್ವದ ಅತ್ಯುತ್ತಮ ಭಾವನೆ ಆಗಿದೆ ಎಂದು ಹೇಳಿದ್ದಾರೆ.

Join Nadunudi News WhatsApp Group