Kailasa: ನಿತ್ಯಾನಂದನ ಕೈಲಾಸ ದೇಶದಲ್ಲಿ ಏನೇನಿದೆ, ಕೈಲಾಸ ದೇಶದ ಬಗ್ಗೆ ಕ್ಲಾರಿಟಿ ನೀಡಿದ ರಂಜಿತಾ.
ನಿತ್ಯಾನಂದನದ ಭಕ್ತೆಯಾಗಿರುವ ರಂಜಿತಾ ಕೈಲಾಸ ದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Nithyananda Kailasa: ದೇವಮಾನವ ಎಂದೇ ಕರೆಸಿಕೊಳ್ಳುವ ನಿತ್ಯಾನಂದ (Nithyananda) ಸ್ವಾಮೀಜಿ ಸದ್ಯ ಭಾರತದಲ್ಲಿ ಇಲ್ಲ. ತನ್ನದೇ ಆದ ಕೈಲಾಸ ಹೆಸರಿನ ಪುಟ್ಟ ದ್ವೀಪದಲ್ಲಿ ವಾಸಿಸುತ್ತಿದ್ದಾರೆ. ಅತ್ಯಾಚಾರ ಆರೋಪ ಹೊತ್ತು ಭಾರತದಿಂದ ದೂರವೇ ಉಳಿದು ತನ್ನ ಅಪಾರ ಸಹಚರರ ಜೊತೆಗೆ ಕೈಲಾಸದಲ್ಲಿಯೇ ಇದ್ದಾರೆ.
ನಿತ್ಯಾನಂದನದ ಕೈಲಾಸ ದೇಶ
ನಿತ್ಯಾನಂದ ತನ್ನದೇ ಆದ ನಾಣ್ಯ ನೋಟುಗಳನ್ನು ಟಂಕಿಸಿಕೊಂಡು, ಆಚಾರ ವಿಚಾರದಲ್ಲಿಯೂ ಬದಲಾವಣೆ ಮಾಡಿಕೊಂಡು ಕೈಲಾಸ ಅನ್ನುವ ದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ನಿತ್ಯಾನಂದ ಅವರ ಈ ಕೈಲಾಸ ಇರುವುದು ದಕ್ಷಿಣ ಅಮೆರಿಕಾ ಭಾಗದ ಈಕ್ವೆಡಾರ್ ಬಳಿಯ ದ್ವೀಪದಲ್ಲಿ.
ಆ ದೇಶಕ್ಕೆ ಇನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ನಾಮಕರಣ ಮಾಡಿಕೊಂಡು ತಮ್ಮ ಶಿಷ್ಯಂದಿರ ಜೊತೆಗೆ ವಾಸ ಮಾಡುತ್ತಿದ್ದಾರೆ. ಒಂದು ದೇಶದಲ್ಲಿ ಯಾವುದೆಲ್ಲ ವ್ಯವಸ್ಥೆಗಳು ಇರುತ್ತವೆಯೋ ಅಲ್ಲಿ ಅದನ್ನು ಸೃಷ್ಟಿಮಾಡಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ದೇಶದ ಮುಖ್ಯಸ್ಥ ನಿತ್ಯಾನಂದ ಅವರು ತಮ್ಮ ಶಿಷ್ಯಳಾದ ರಂಜಿತಾ ಅವರನ್ನೇ ದೇಶದ ಪ್ರಧಾನಿಯನ್ನಾಗಿ ಮಾಡಿದ್ದಾರೆ.
ಕೈಲಸ ದೇಶದಲ್ಲಿ ಏನೆಲ್ಲ ವ್ಯವಸ್ಥೆಯಿದೆ ಎಂದು ಹೇಳಿಕೊಂಡ ನಟಿ ರಂಜಿತಾ
ಕೈಲಾಸ ದೇಶದಲ್ಲಿನ ನಿತ್ಯಾನಂದನ ಭಕ್ತೆಯಾಗಿರುವ ರಂಜಿತಾ ಅಲ್ಲಿನ ಆಡಳಿತದ ಮುಖ್ಯ ಹುದ್ದೆಯಲ್ಲಿದ್ದಾರೆ. ಹೀಗಿರುವಾಗ ಆ ದೇಶದ ಬಗ್ಗೆ ಅಲ್ಲಿನ ಸ್ಥಿತಿಗಳ ಬಗ್ಗೆಯೂ ಅವರು ಫ್ಯಾಡ್ ಕಾಸ್ಟ್ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಹಲವು ಮಂದಿ ಕೇಳಿದ ಪ್ರಶ್ನೆಗಳಿಗೆ ರಂಜಿತಾ ಉತ್ತರ ನೀಡಿದ್ದಾರೆ. ಕೈಲಾಸ ದೇಶದಲ್ಲಿ ಹಿಂದೂ ಪಾವಿತ್ರ್ಯೆತೆಯನ್ನು ಕಾಪಾಡಲಾಗುತ್ತಿದೆ. ಕೈಲಾಸದಲ್ಲಿ ಪೂಜೆಗಳು, ಯೋಗ ಮತ್ತು ವೈರಾಗ್ಯ ಸೇರಿದಂತೆ ಎಲ್ಲಾ ಹಿಂದೂ ತತ್ವಗಳನ್ನು ಕಲಿಸಲಾಗುತ್ತಿದೆ.
ಕೈಲಸವು ಯಾವಾಗಲು ಧರ್ಮದ ಪರಂಪರೆಯಾಗಿ ನಿಲ್ಲುತ್ತದೆ. ಧರ್ಮದ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಜಗತ್ತು ಇದೀಗ ಎರಡು ಬದಲಾವಣೆಯನ್ನು ಕಂಡಿದೆ ಹಾಗು ಕಾಣುತ್ತಿದೆ. ಒಂದು AI ತಂತ್ರಜ್ಞಾನ, ಇನ್ನೊಂದು ಕೈಲಾಸದಲ್ಲಿನ ನಿತ್ಯಾನಂದ ಸ್ವಾಮೀಜಿ ಲೀಲೆ ಎನ್ನಲಾಗುತ್ತಿದೆ. ಕೈಲಾಸ ದೇಶ ಜಗತ್ತಿನ ಮೊದಲ ಹಿಂದೂ ರಾಷ್ಟ್ರ.
ಇಂದು ಹಿಂದೂಗಳು ಪ್ರಪಂಚದಾದ್ಯಂತ ವಲಸೆ ಹೋಗುತ್ತಿದ್ದಾರೆ. ಹಿಂದೂಗಳ ಅಗತ್ಯಗಳು ಅವರು ವಾಸಿಸುವ ದೇಶಗಳಲ್ಲಿ ಸಿಗುತ್ತಿಲ್ಲ. ಆದರೆ ಕೈಲಸದಲ್ಲಿ ವಾಸಿಸುವ ಹಿಂದುಗಳಿಗೆ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ನಮ್ಮ ಈ ಕೈಲಾಸ ದೇಶದಲ್ಲಿ ಎಲ್ಲವೂ ಉಚಿತವಾಗಿ ಸಿಗುತ್ತಿದೆ.
ಶಿಕ್ಷಣವನ್ನು ಉಚಿಕ್ತವಾಗಿ ನೀಡುತ್ತಿದ್ದೇವೆ. ನಮ್ಮ ಕೈಲಸದಲ್ಲಿ ಪ್ರಾಣಿ ಹತ್ಯೆ ನಿಷೇಧಿಸಲಾಗಿದೆ. ಅದೇ ರೀತಿ ನಮ್ಮ ಕೈಲಸದ ಆರ್ಥಿಕ ನೀತಿಗಳು ನಿತ್ಯಾನಂದನ ಚಿಂತನೆಗಳಿಂದ ಅಭಿವೃದ್ಧಿಗೊಂಡಿದೆ. ಕಳೆದ 40 ವರ್ಷಗಳಿಂದ ನಿತ್ಯಾನಂದನದ ಸ್ವಾಮೀಜಿಯವರು ಹಿಂದೂ ಧರ್ಮದ ಆಧಾರ ಸ್ತಂಭವಾಗಿ ನಿಂತಿದ್ದಾರೆ. ಅವರದ್ದು ಯಾವತ್ತಿದ್ದರೂ ಧರ್ಮದ ಪರ ನಿಲುವು ಆಗಿದೆ.
ಕಾಶಿ ಮತ್ತು ಮಧುರೈ ಮೀನಾಕ್ಷಿಯಂತಹ ಪವಿತ್ರ ಹಿಂದೂ ದೇವಸ್ಥಾನಗಳ ಸಂರಕ್ಷಣೆಯು ಸ್ವಾಮಿ ನಿತ್ಯಾನಂದ ಸ್ವಾಮೀಜಿಯವರ ಮುಖ್ಯ ದ್ಯೇಯ ಆಗಿದೆ. ಕೈಲಾಸದಲ್ಲಿ ಮಹಿಳೆಯರ ಪ್ರಗತಿಗೆ ಮೊದಲ ಆಧ್ಯತೆ ನೀಡಲಾಗಿದೆ. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಕೈಲಾಸ ದೇಶದಿಂದ ಪ್ರತಿನಿಧಿಗಳಾಗಿ ಕೇವಲ ಮಹಿಳೆಯರನ್ನು ಮಾತ್ರ ಕಳುಹಿಸುತ್ತಿದೆ. ಬೇರೆ ಯಾವ ದೇಶವು ಇದನ್ನು ಮಾಡುವುದಿಲ್ಲ. ಇಲ್ಲಿನ ಮಹಿಳೆಯರಿಗೆ ಶೇಕಡಾ 33 ಮೀಸಲಾತಿಯನ್ನು ನಿತ್ಯಾನಂದ ಘೋಷಿಸಿದ್ದಾರೆ ಎಂದು ರಂಜಿತಾ ಹೇಳಿದ್ದಾರೆ.