Ranveer and Deepika Divorce: ದೀಪಿಕಾ ಪಡುಕೋಣೆಗೆ ಡಿವೋರ್ಸ್ ಕೊಡುವ ಬಗ್ಗೆ ಮಾತಾಡಿದ ರಣವೀರ್, ಎಲ್ಲವೂ ಇತ್ಯರ್ಥ

Ranveer and Deepika Divorce Rumours: ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ರವರು ಬಿ-ಟೌನ್‌ನ ಅತ್ಯುತ್ತಮ ಜೋಡಿಗಳಲ್ಲಿ ಒಬ್ಬರು. ಇನ್ನು ಇಬ್ಬರ ನಡುವೆ ಉತ್ತಮ ಬಾಂಧವ್ಯವಿದ್ದು ಆದರೆ ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಅವರ ವಿಚ್ಛೇದನದ ಸುದ್ದಿ ಹೆಚ್ಚು ವೈರಲ್ ಆಗಿತ್ತು.

ಬಾಲಿವುಡ್‌ ನ ಕ್ಯೂಟ್‌ ಕಪಲ್‌(Bollywood Cute Couple)  ರಣವೀರ್‌ ಹಾಗೂ ದೀಪಿಕಾ ಜೋಡಿ ಮಧ್ಯೆ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿತ್ತು.

ಕಳೆದ ಕೆಲವು ವಾರಗಳಿಂದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬೇರ್ಪಡುವ ಬಗ್ಗೆ ವದಂತಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಆದರೆ ಇದೀಗ ರಣವೀರ್‌ ವದಂತಿಗಳಿಗೆ ತಣ್ಣೀರೆರೆಚಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬೇರ್ಪಡುವ ಬಗ್ಗೆ ವದಂತಿ

ಹೌದು ದೀಪಿಕಾ ಪೋಸ್ಟರ್‌ಗೆ ರಣ್‌ವೀರ್ ಸಿಂಗ್ ಪ್ಲೇನ್ ಕಿಸ್ ಕೊಟ್ಟಿದ್ದು ಬಿಟೌನ್‌ನ ಸ್ಟಾರ್ ದಂಪತಿ ದೀಪಿಕಾ ಹಾಗೂ ರಣ್‌ವೀರ್ ಸದಾ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ.

Join Nadunudi News WhatsApp Group

ಇನ್ನು ಇತ್ತೀಚೆಗಷ್ಟೇ ಇವರಿಬ್ಬರ ಡಿವೋರ್ಸ್ ಸಮಾಚಾರ ಮುಂಬೈ ಗಲ್ಲಿಯಲ್ಲಿ ಮಾತ್ರವಲ್ಲ ಸಿನಿಮಾ ನಗರಿಯೇ ಶೇಕ್ ಆಗಿತ್ತು.

ಇನ್ನು ಈ ವಿಷಯ ನಿಜಾನಾ ಸುಳ್ಳಾ ಅಂತಾ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿತ್ತು. ಈಗ ಎಲ್ಲಾ ವದಂತಿಗೂ ರಣ್‌ವೀರ್ ಸಿಂಗ್ ಬ್ರೇಕ್ ಹಾಕಿದ್ದಾರೆ.

ಹೌದು ಇತ್ತೀಚೆಗಷ್ಟೇ ರಣ್‌ವೀರ್ ದೆಹಲಿಗೆ ಆಗಮಿಸಿದ್ದು ಈ ವೇಳೆ ಪತ್ನಿ ಪೋಸ್ಟರ್ ನೋಡಿ ಪ್ಲೇನ್ ಕಿಸ್ ಕೊಟ್ಟಿದ್ದಾರೆ. ನನ್ನವಳು ಎಂದು ಆಯಕ್ಷನ್ ಮಾಡಿದ್ದು ರಿಯಾಕ್ಟ್ ಮಾಡಿದ್ದಾರೆ.

Ranveer and Deepika Divorce Rumours

ಪೋಸ್ಟರ್ ನೋಡಿ ಪ್ಲೇನ್ ಕಿಸ್

ನಿಮ್ಮನ್ನ ಇಡೀ ಜಗತ್ತಿನಂತೆ ನೋಡುವವರನ್ನು ಹುಡುಕಿ ಎಂದು ದೀಪಿಕಾ ಕೂಡ ರಣ್‌ವೀರ್ ಫೋಟೋವನ್ನ ರೀ ಪೋಸ್ಟ್ ಮಾಡಿದ್ದಾರೆ. ಹೌದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಒಟ್ಟಿನಲ್ಲಿ ದೀಪಿಕಾ ಮತ್ತು ರಣ್‌ವೀರ್ ಬೇರೆ ಆಗುತ್ತಿಲ್ಲ. ಇದು ಗಾಸಿಪ್ ಅಷ್ಟೇ ಅಂತಾ ಕೇಳಿದ ಅಭಿಮಾನಿಗಳು ಇದೀಗ ಖುಷಿಯಾಗಿದ್ದಾರೆ. ನೆಚ್ಚಿನನ ಜೋಡಿ ಯಾವಾಗಲೂ ಹೀಗೆ ಇರಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.

ಇನ್ನು ಅಕ್ಟೋಬರ್ 3 ರಂದೇ ರಣವೀರ್ ಸಿಂಗ್‌ ತನ್ನ ನಟಿ-ಪತ್ನಿ ದೀಪಿಕಾ ಅವರನ್ನು ನನ್ನ ರಾಣಿ ಎಂದು ಕರೆಯುವ ಮೂಲಕ ವಿಚ್ಚೇದನದ ಎಲ್ಲ ಸುಳ್ಳು ಸುದ್ದಿಗಳನ್ನು ಮುಚ್ಚಿ ಹಾಕಿದ್ದರು.

ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ದೀಪಿಕಾ

Cartier ಎಂಬ ಆಭರಣ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ದೀಪಿಕಾ ಆಯ್ಕೆಯಾಗಿದ್ದು ಭಾರತೀಯ ನಟಿ ದೀಪಿಕಾಪಡುಕೋಣೆ ಅವರನ್ನು ತನ್ನ ಹೊಸ ರಾಯಭಾರಿಯಾಗಿ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ ಎಂದು ಕಂಪನಿಯವರು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ರಣವೀರ್ ಸಿಂಗ್ ಪ್ರತಿಕ್ರಿಯಿಸಿದ್ದು ನನ್ನ ರಾಣಿ ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದರು. ಈ ಮೂಲಕವಾಗಿ ವಿಚ್ಛೇದನದ ವದಂತಿಗೆ ತೆರೆ ಎಳೆದಿದ್ದರು.

Ranveer and Deepika Divorce Rumours
Image Credit: Times Of India

ಇನ್ನು ಉಮರ್‌ ಸಂಧು ಎಂಬ ಸಿನಿಮಾ ವಿಮರ್ಶಕರೊಬ್ಬರು ದೀಪಿಕಾ ಮತ್ತು ರಣವೀರ್‌ ಸಿಂಗ್‌ ನಡುವೆ ಏನೋ ಸರಿ ಇಲ್ಲ ಎಂದು ಟ್ವೀಟ್‌ ಮಾಡಿದ್ದು ಆದರೆ ಇವರ ಟ್ವೀಟ್‌ಗೆ ಈ ಜೋಡಿ ಉತ್ತರಿಸಲು ಹೋಗಿರಲಿಲ್ಲ.

ಅದರ ಬದಲಿಗೆ ಅಭಿಮಾನಿಗಳು ಸಂಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಟ್ವೀಟ್‌ ಕೇವಲ ವದಂತಿ ಮಾತ್ರ ಎಂದು ರಣವೀರ್‌ ಟ್ವೀಟ್‌ ಮಾಡಿದ್ದರು.

ದೀಪಿಕಾ ಬಗ್ಗೆ  ರಣವೀರ್‌ ಪೋಸ್ಟ್‌

ಆದರೆ ಈಗ ಮತ್ತೆ ದೀಪಿಕಾ ಬಗ್ಗೆ ಪೋಸ್ಟ್‌ ಮಾಡುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ ಎಂದು ಹೇಳಬಹುದು.

ಸುಮಾರು 5 ವರ್ಷ ಪ್ರೀತಿಸಿ 2018 ರಲ್ಲಿ ಮದುವೆಯಾದ ಈ ಜೋಡಿಯನ್ನು ಎಲ್ಲರೂ ಮೆಚ್ಚಿದ್ದರು. ಆದರೆ ವೈರಲ್‌ ಆದ ಆ ಒಂದು ಟ್ವೀಟ್‌ ಈ ಸ್ಟಾರ್‌ ಕಪಲ್‌ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು.

Ranveer and Deepika Divorce Rumours
Image Credit: Times Of India

ವೈರಲ್‌ ಟ್ವೀಟ್‌ ನೋಡಿ ದೀಪಿಕಾ ಮತ್ತು ರಣವೀರ್‌ ಬೇರೆ ಬೇರೆ ಆಗಿ ಬಿಡ್ತಾರಾ ಎಂದು ಎಲ್ಲರೂ ಚಿಂತಿಸುತ್ತಿದ್ದು ಆದರೆ ವೈರಲ್‌ ಆದ ಟ್ವೀಟ್‌ಗೆ ಖುದ್ದು ರಣವೀರ್‌ ಸಿಂಗ್‌ ಅವರೇ ಪ್ರತಿಕ್ರಿಯೆ ನೀಡಿ ಅಭಿಮಾನಿಗಳ ಪ್ರಶ್ನೆಗೆ ಪರೋಕ್ಷವಾಗಿ ಉತ್ತರಿಸಿದರು.

Join Nadunudi News WhatsApp Group