Navaratri: ನವರಾತ್ರಿ ಮೊದಲ ದಿನವೇ ಈ ರಾಶಿಗಳಿಂದ ಹೊರಗೆ ಹೊಗಲಿದ್ದಾನೆ ಶನಿ, 4 ರಾಶಿಯವರ ಎಲ್ಲಾ ಕಷ್ಟ ದೂರ.
ನವರಾತ್ರಿಯ ಮೊದಲ ದಿನ ಈ ನಾಲ್ಕು ರಾಶಿ ಅವರ ಕಷ್ಟಗಳಿಗೆ ಸಿಗಲಿದೆ ಮುಕ್ತಿ.
Rashi Bhavishya Frim Navaratri: ಸಾಮಾನ್ಯವಾಗಿ ಎಲ್ಲರೂ ಜ್ಯೋತಿಷ್ಯವನ್ನು ನಂಬುತ್ತಾರೆ. ತಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಯಲು ದೂರದರ್ಶನದಲ್ಲಿ ಅಥವಾ ಪತ್ರಿಕೆಗಳಲ್ಲಿ ನಿತ್ಯ ಭವಿಷ್ಯವನ್ನು ತಿಳಿದುಕೊಳ್ಳುವ ಹವ್ಯಾಸ ಕೆಲವರಲ್ಲಿ ಇರುತ್ತದೆ. ಈ ಬಾರಿ ಅಕ್ಟೋಬರ್ 15 ರಿಂದ ನವರಾತ್ರಿ ಆರಂಭವಾಗುತ್ತದೆ.
ನವರಾತ್ರಿ ಆರಂಭಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 14ರಂದು ಸೂರ್ಯಗ್ರಹಣ ಸಂಭವಿಸಲಿದೆ. ಹಿಂದೂ ಸಂಪ್ರದಾಯದಲ್ಲಿ ಗ್ರಹಣಕ್ಕೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ. ಗ್ರಹಣ ಸಮಯ ಅನ್ನುವುದು ಬಹಳ ಕೆಟ್ಟ ಮತ್ತು ಬಹಳ ಒಳ್ಳೆಯ ಸಮಯ ಆಗಿದೆ. ಸೂರ್ಯಗ್ರಹಣದ ನಂತರದ ಶನಿಯ ಸ್ಥಾನಪಲ್ಲಟವು ಬಹಳ ಮಂಗಳಕರವೆಂದು ಹೇಳಲಾಗುತ್ತದೆ.
ಈ ವರ್ಷದ ನವರಾತ್ರಿಯ ಮೊದಲ ದಿನದಂದು ಶನಿದೇವನು ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ನವರಾತ್ರಿಯ ಮೊದಲ ದಿನದ ಶನಿಯ ಸಂಕ್ರಮಣವು ಈ 4 ರಾಶಿ ಅವರಿಗೆ ತುಂಬಾ ಉತ್ತಮವಾಗಿರುತ್ತದೆ ಹಾಗೆ ಅವರ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಹಾಗಾದರೆ ಆ ನಾಲ್ಕು ರಾಶಿ ಯಾವುದು ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
ಈ ನಾಲ್ಕು ರಾಶಿ ಅವರ ಕಷ್ಟಗಳಿಗೆ ಸಿಗಲಿದೆ ಮುಕ್ತಿ
Aries Horoscope
ಶನಿಯ ಸ್ಥಾನಪಲ್ಲಟದಿಂದ ಮೇಷ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹಾಗೆ ಉದ್ಯೋಗದಲ್ಲಿ ಬರುತ್ತಿದ್ದ ಅಡೆತಡೆ ನಿವಾರಣೆಯಾಗಲಿದೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸಬಹುದಾದಾ ಸಾಧ್ಯತೆ ಇದೆ.
Gemini Horoscope
ಮಿಥುನ ರಾಶಿ ಯವರ ಸಾಂಸಾರಿಕ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಹೂಡಿಕೆಯಿಂದ ಆರ್ಥಿಕ ಲಾಭ ಉಂಟಾಗುತ್ತದೆ. ಹೊಸ ಮನೆ ಖರೀದಿ ಜೊತೆಗೆ ಉದ್ಯೋಗದಲ್ಲಿ ಬಡ್ತಿಗೆ ಅವಕಾಶವಿರುತ್ತದೆ.ಹಾಗೆ ವ್ಯಾಪಾರದಲ್ಲಿ ಪ್ರಗತಿ ಕಾಣಿತ್ತಿರಿ.
Virgo Horoscope
ಕನ್ಯಾ ರಾಶಿ ಅವರಿಗೆ ಆದಾಯದ ಮೂಲಗಳು ಹೆಚ್ಚಾಗುತ್ತವೆ. ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ವಾಹನ ಮತ್ತು ಭೂಮಿ ಖರೀದಿ ಸಾಧ್ಯತೆಯಿದೆ. ಜೊತೆಗೆ ಪೂರ್ವಿಕರ ಆಸ್ತಿ ಸಿಗಲಿದೆ. ಇದರಿಂದ ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಹಣವನ್ನು ಮಿತವಾಗಿ ಖರ್ಚು ಮಾಡಬೇಕಾಗುತ್ತದೆ.
Scorpio Horoscope
ವೃಶ್ಚಿಕ ರಾಶಿ ಅವರ ದಾಂಪತ್ಯ ಜೀವನದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಯಶಸ್ಸಿನ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಹಾಗೆ ಪ್ರಗತಿಯ ಹಾದಿಯು ಸುಲಭವಾಗುತ್ತದೆ. ಕಾನೂನು ವಿಷಯಗಳಲ್ಲಿ ಜಯವಿರುತ್ತದೆ.