ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಶ್ಮಿ ಪ್ರಭಾಕರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಧಾರಾವಾಹಿಯಲ್ಲಿ ತಮ್ಮ ಅಮೋಘವಾದ ನಟನೆಯನ್ನ ಮೂಲಕ ಮನೆಮಾತಾದ ನಟಿಯರಲ್ಲಿ ನಟಿ ರಶ್ಮಿ ಪ್ರಭಾಕರ್ ಕೂಡ ಒಬ್ಬರು ಎಂದು ಹೇಳಬಹುದು. ಆರಂಭದಲ್ಲಿ ಧಾರಾವಾಹಿಯ ಮೂಲಕ ತೆರೆಯ ಮೇಲೆ ಬಂದ ರಶ್ಮಿ ಪ್ರಭಾಕರ್ ಅವರು ಈಗ ಕೆಲವು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಸಕತ್ ಸುದ್ದಿಯಲ್ಲಿ ಇದ್ದಾರೆ ಎಂದು ಹೇಳಬಹುದು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನ ಹೊಂದಿರುವ ನಟಿ ರಶ್ಮಿ ಪ್ರಭಾಕರ್ ಆಗಾಗ ತಮ್ಮ ಫೋಟೋ ಶೇರ್ ಮಾಡುವ ಮೂಲಕ ಸದಾ ಅಭಿಮಾನಿಗಳ ಜೊತೆಗೆ ಇರುತ್ತಿದ್ದರು.
ಇನ್ನು ಈಗ ರಶ್ಮಿ ಪ್ರಭಾಕರ್ ಅವರು ಮದುವೆಯನ್ನ ಮಾಡಿಕೊಳ್ಳಲು ನಿರ್ಧಾರವನ್ನ ಮಾಡಿಕೊಂಡಿದ್ದು ನಿಶ್ಚಿತಾರ್ಥವನ್ನ ಕೂಡ ಮಾಡಿಕೊಂಡಿದ್ದಾರೆ. ಇನ್ನು ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿ ಪ್ರಭಾಕರ್ ಹಂಚಿಕೊಂಡಿದ್ದು ಅಭಿಮಾನಿಗಳು ಶುಭಾಶಯವನ್ನ ಕೂಡ ಹೇಳುತ್ತಿದ್ದಾರೆ. ಇನ್ನು ಅಭಿಮಾನಿಗಳು ಈ ಫೋಟೋ ನೋಡಿ ಹುಡುಗ ಯಾರು ಅನ್ನುವ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಹಾಗಾದರೆ ನಟಿ ರಶ್ಮಿ ಪ್ರಭಾಕರ್ ಮದುವೆಯಾಗುತ್ತಿರುವ ಹುಡುಗ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಅಭಿಮಾನಿಯಾಗಿದ್ದರೆ ಶುಭಾಶಯ ಹೇಳಿ. ಹೌದು ನಿಖಿಲ್ ಜೊತೆ ರಶ್ಮಿ ಪ್ರಭಾಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕೆಲವು ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವು ಭರವಸೆಗಳು ಎಂದಿಗೂ ಮುರಿಯುವುದಿಲ್ಲ. ನನ್ನ ಜೀವನದ ರಾಜಕುಮಾರ ಎಂದು ಬರೆದುಕೊಂಡು ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರವನ್ನು ಅನೇಕರು ಇನ್ನೂ ಮರೆತಿಲ್ಲ. ನಟನೇ ಮೂಲಕವಾಗಿ ಸುದ್ದಿಯಾಗುತ್ತಿದ್ದ ರಶ್ಮಿ ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ನಟಿ ರಶ್ಮಿ ಪ್ರಭಾಕರ್ ಅವರು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಧಾರಾವಾಹಿ ಜಗತ್ತಿಗೆ ಕಾಲಿಟ್ಟು ಬಹಳ ಒಳ್ಳೆಯ ಯಶಸ್ಸನ್ನ ಸಾಧಿಸಿದರು ಎಂದು ಹೇಳಬಹುದು. ಇನ್ನು ನಿಖಿಲ್ ಯಾರು ಮತ್ತು ಅವರು ಏನು ಮಾಡುತ್ತಿದ್ದಾರೆ, ಇವರಿಬ್ಬರ ನಡುವೆ ಪರಿಚಯ ಹೇಗಾಯಿತು ಅನ್ನುವ ಪ್ರಶ್ನೆಗೆ ಇನ್ನು ಕೂಡ ಉತ್ತರ ಸ್ಪಷ್ಟವಾಗಿ ಸಿಕ್ಕಿಲ್ಲ ಎಂದು ಹೇಳಬಹುದು. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಇನ್ನೇನು ಕೆಲವೇ ದಿನಗಳಲ್ಲಿ ನಟಿ ರಶ್ಮಿ ಪ್ರಭಾಕರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಇಬ್ಬರ ಜೋಡಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.