Rashmika Mandanna Gossips: ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿಗೆ ನಿಜವಾಗಲಿ ಎಂದು ಹಾರೈಸಿಕೊಂಡ ರಶ್ಮಿಕಾ.

Actress Rashmika Mandanna Social Media Gossips: ಕನ್ನಡ ಚಿತ್ರರಂಗದ ಮೂಲಕ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಭಾಷಾ ನಟಿ. ರಶ್ಮಿಕಾ ಮಂದಣ್ಣ ಯಾವಾಗಲು ನೆಟ್ಟಿಗರ ಟ್ರೊಲ್ ಗೆ ಒಳಗಾಗುತ್ತಾರೆ.

ಕನ್ನಡ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾದ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದ ಮೇಲೆ ಅಭಿಮಾನ ಇಲ್ಲ ಎನ್ನುವುದೇ ಕನ್ನಡಿಗರ ಕೋಪ. ಈ ಕಾರಣದಿಂದ ನಟಿ ರಶ್ಮಿಕಾ ಮಂದಣ್ಣ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Rashmika wished that the news spreading about her would be true.
Image Credit: instagram

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna)
ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಡಿತ್ತು. ಇದೀಗ ಈ ವಿಚಾರದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾಹಿತಿ ನೀಡಿದ್ದಾರೆ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ರಶ್ಮಿಕಾ ಕುರಿತು ಸುದ್ದಿ ಹರಿದಾಡುತ್ತಿದೆ.

ಹೈದರಾಬಾದ್, ಗೋವಾ ಕೂರ್ಗ್, ಮುಂಬೈ ಹಾಗು ಬೆಂಗಳೂರು ನಗರಗಳಲ್ಲಿ ರಶ್ಮಿಕಾ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದೀಗ ನಟಿ ಟ್ವಿಟ್ಟರ್ ನಲ್ಲಿಯೇ ಇದಕ್ಕೆ ಉತ್ತರ ನೀಡಿದ್ದಾರೆ.

Join Nadunudi News WhatsApp Group

Rashmika Mandanna said that all the news about her should be true
Image Credit: instagram

ಕಮೆಂಟ್ ಗಳಿಗೆ ಸರಿಯಾದ ಉತ್ತರ ನೀಡಿದ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಇಷ್ಟೆಲ್ಲ ಆಸ್ತಿ ಹೊಂದಿದ್ದಾರೆ ಎಂದು ತಿಳಿದ ನೆಟ್ಟಿಗರು ನಾನಾ ರೀತಿ ಕಮೆಂಟ್ ಮಾಡಿದ್ದಾರೆ.

ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತೀರಿ, ಇದು ನೀವೇ ಖರೀದಿಸಿದ್ದಾ, ಗಿಫ್ಟ್ ಬಂದಿದ್ದ, ಫ್ಲಾಟ್ ಬೆಲೆ ಎಷ್ಟು, ಇಷ್ಟೇನಾ ಇನ್ನು ಬೇರೆ ಕಡೆ ಆಸ್ತಿ ಇದೆಯಾ ಎಂದೆಲ್ಲಾ ಕೇಳುತ್ತಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಈ ಸುದ್ದಿಯನ್ನು ನಿರಾಕರಿಸಿದ್ದಾರೆ.

Rashmika Mandanna greets those spreading gossip
Image Credit: instagram

ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಸದ್ದಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ ಇದು ನಿಜವಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Join Nadunudi News WhatsApp Group