Rashmika Wedding: ಮದುವೆಯಾಗುವ ಹುಡುಗನನ್ನ ಪರಿಚಯಿಸಿದ ರಶ್ಮಿಕಾ ಮಂದಣ್ಣ, ಹುಡುಗನನ್ನು ಕಂಡು ಜನರು ಆಶ್ಚರ್ಯ.
ನಟಿ ರಶ್ಮಿಕಾ ಮಂದಣ್ಣ ತಾನು ಮದುವೆಯಾಗುವ ಹುಡುಗ ಯಾರು ಎಂದು ತಿಳಿಸಿದ್ದಾರೆ.
Rashmika Mandanna About Husband: ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಈಗ ದೇಶದ ಟಾಪ್ ನಟಿ ಅನ್ನುವ ಹೆಗ್ಗಳಿಕೆಯನ್ನ ಕೂಡ ಪಡೆದುಕೊಂಡಿದ್ದಾರೆ. ಸದ್ಯ ಹಲವು ಚಿತ್ರಗಳ ಶೂಟಿಂಗ್ ಬಹಳ ಬ್ಯುಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ ಹಲವು ವಿಷಯಗಳ ಕಾರಣ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಲ್ಲಿ ಇದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಆರಂಭದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ನಿಶ್ಚಿತಾರ್ಥವನ್ನ ಮಾಡಿಕೊಂಡು ನಂತರ ಬ್ರೇಕ್ ಅಪ್ ಮಾಡಿಕೊಂಡರು. ಇದಾದ ನಂತರ ಹಲವು ವಿವಾದಗಳಿಗೆ ಗುರಿಯಾದ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡಿಗರ ಕೋಪಕ್ಕೆ ಕಾರಣವಾದರು.
ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ
ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಪುಷ್ಪ 2 ಚಿತ್ರದ ಕೆಲಸಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಚಿತ್ರ ಬಿಡುಗಡೆಯ ಹಂತದಲ್ಲಿ ಚಿತ್ರದ ಪ್ರೊಮೋಷನ್ ಸೇರಿದಂತೆ ಹಲವು ಕೆಲಸಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಬ್ಯುಸಿ ಆಗಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಅವರು ಸಂದರ್ಶನದಲ್ಲಿ ತಾನು ಮದುವೆಯಾಗುವ ಹುಡುಗ ಯಾರು ಅನ್ನುವುದರ ಬಗ್ಗೆ ಮಾತನಾಡಿದ್ದು ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರ ಮಾತಿಗೆ ಜನರು ಟ್ರೊಲ್ ಮಾಡಲು ಕೂಡ ಆರಂಭ ಮಾಡಿದ್ದಾರೆ.
ಮದುವೆಯಾಗುವ ಹುಡುಗನನ್ನ ಪರಿಚಯಿಸಿದ ನಟಿ ರಶ್ಮಿಕಾ ಮಂದಣ್ಣ
ಹೌದು ಸಂದರ್ಶನದಲ್ಲಿ ಮದುವೆಯ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ನನಗೆ ಈಗಾಗಲೇ ಮದುವೆ ಆಗಿದೆ ಎಂದು ಹೇಳುವುದರ ಮೂಲಕ ಜನರಿಗೆ ಆಶ್ಚರ್ಯ ಉಂಟಾಗುವಂತೆ ಮಾಡಿದರು. ಬಾಲಿವುಡ್ ಚಿತ್ರದ ಪ್ರೊಮೋಷನ್ ಸಮಯದಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಮದುವೆಯ ವಿಚಾರವಾಗಿ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು ನನಗೆ ಈಗಾಗಲೇ ಮದುವೆ ಆಗಿದೆ ಎಂದು ಹೇಳಿದ್ದಾರೆ.
ನಾನು ನಾರುಟೋನನ್ನೂ ಮದುವೆಯಾಗಿದ್ದೇನೆ ಮತ್ತು ನಾನು ಅವನನ್ನು ತುಂಬಾ ಪ್ರೀತಿ ಮಾಡುತ್ತೇನೆ ಮತ್ತು ಸದ್ಯ ನನ್ನ ಮನಸ್ಸಿನಲ್ಲಿ ಅವನೊಬ್ಬನೇ ಇದ್ದಾನೆ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಇನ್ನು ನಾಟುರೋ ಅನ್ನುವುದು ಕಾರ್ಟೂನ್ ನಲ್ಲಿ ಬರುವ ಒಂದು ಪಾತ್ರವಾಗಿದೆ.
ಎಲ್ಲಾ ಮಕ್ಕಳು ಸೆಲೆಬ್ರಿಟಿಗಳು ಈ ಕಾರ್ಟೂನ್ ನೋಡಲು ಇಷ್ಟಪಡುತ್ತಾರೆ ಮತ್ತು ಈ ಕಾರ್ಟೂನ್ ಬರುವ ನಾಟುರೋ ನನಗೆ ಬಹಳ ಇಷ್ಟ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಮಾತನ್ನ ಕೇಳಿದ ನೆಟ್ಟಿಗರು ಮತ್ತೆ ನಟಿ ರಶ್ಮಿಕಾ ಮಂದಣ್ಣ ಅವರನ್ನ ಟ್ರೊಲ್ ಮಾಡಲು ಕೂಡ ಆರಂಭ ಮಾಡಿದ್ದಾರೆ.