Rashmika Marriage: ಗುಟ್ಟಾಗಿ ಮದುವೆಯಾದ ನಟಿ ರಶ್ಮಿಕಾ ಮಂದಣ್ಣ, ಆ ನಟನ ಜೊತೆ ನನಗೆ ಮದುವೆಯಾಗಿದೆ ಅಂದ ರಶ್ಮಿಕಾ.
ಮದುವೆ ಬಗ್ಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, ನನಗೆ ಈಗಾಗಲೇ ಮದುವೆಯಾಗಿದೆ ಅಂದ ರಶ್ಮಿಕಾ ಮಂದಣ್ಣ.
Rashmika Mandanna About Marriage: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಹೆಚ್ಚಾಗಿ ತಮ್ಮ ಮದುವೆ, ಪ್ರೀತಿ, ಡೇಟಿಂಗ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೈಲೈಟ್ ಆಗುತ್ತಾರೆ.
ಇತ್ತೀಚೆಗಂತೂ ನಟಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದರು. ಇವರ ಲವ್ ಸ್ಟೋರಿ ಬಗ್ಗೆ ಮತ್ತೆ ಗಾಸಿಪ್ ಹರಿದಾಡಿದೆ. ಇನ್ನು ಚಿತ್ರರಂಗದಲ್ಲಿ ಬಹುಬೇಡಿಕೆ ಇರುವ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆಯ ಬಗ್ಗೆ ಇದೀಗ ಬಿಗ್ ಅಪ್ಡೇಟ್ ದೊರಕಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ನಟಿ ಕನ್ನಡ ಚಿತ್ರರಂಗದಿಂದ ದೊರ ಇದ್ದರು ಕೂಡ ಪರ ಭಾಷಾ ಚಿತ್ರಗಳಲ್ಲಿ ನಟಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲಿ ನಟಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ.
ಸಾಲು ಸಾಲು ಚಿತ್ರಗಳ ಚಿತ್ರೀಕರಣದಲ್ಲಿ ನಟಿ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ಬ್ಯುಸಿ ಶೆಡ್ಯೂಲ್ ನಡುವೆ ನಟಿ ತಮ್ಮ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಿರಿಕ್ ಬೆಡಗಿಯ ಮದುವೆಯ ಅಪ್ಡೇಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿನಿಮಾದ ಪ್ರಮೋಷನ್ ನಲ್ಲಿ ರಶ್ಮಿಕಾ ಬ್ಯುಸಿ
ನಟ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ನ ಖ್ಯಾತ ನಟ ಟೈಗರ್ ಶ್ರಾಫ್ ಜೊತೆ ಪ್ರಚಾರಕ್ಕೆ ಹೋದ ವೇಳೆ ನಟಿ ರಶ್ಮಿಕಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಮದುವೆಯಾಗದೆ ಇದ್ದಾಗ ಮದುವೆಯ ಬಗೆಗಿನ ಪ್ರಶ್ನೆಗಳನ್ನು ಎದುರಿಸಲೇಬೇಕಾಗುತ್ತದೆ. ಅದರಲ್ಲೂ ರಶ್ಮಿಕಾ ಮಂದಣ್ಣ ಆಗಾಗ ಡೇಟಿಂಗ್ ವಿಚಾರವಾಗಿ ಸುದ್ದಿಯಾಗುತ್ತಾರೆ. ರಶ್ಮಿಕಾ ಮದುವೆಯಾಗುವ ಹುಡುಗನ ಬಗ್ಗೆ ತಿಳಿಯಲು ಎಲ್ಲರು ಕುತೂಹಲರಾಗಿದ್ದಾರೆ.
ನಾನು ಈಗಾಗಲೇ ಮದುವೆಯಾಗಿದ್ದೇನೆ ಎಂದ ಕಿರಿಕ್ ಬ್ಯೂಟಿ
ಇನ್ನು ಸಿನಿಮಾ ಪ್ರಚಾರದ ವೇಳೆ ನಿರೂಪಕಿ ಓರ್ವರು ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆ ನಟಿ ರಶ್ಮಿಕಾ” ನಾನು ಈಗಾಗಲೇ ಮದುವೆಯಾಗಿದ್ದೇನೆ. ನಾನು ನರುಟೋನನ್ನು ವಿವಾಹವಾಗಿದ್ದೇನೆ. ಅವನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮನಸ್ಸಿನಲ್ಲಿ ಅವನೊಬ್ಬನೇ ಇದ್ದಾನೆ ” ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅಷ್ಟಕ್ಕೂ ನಟಿ ಮದುವೆಯಾಗಿರುವ ಹುಡುಗ ಯಾರಿರಬಹುದು ಎಂದು ಎಂದು ಯೋಚಿಸುತ್ತಿರುತ್ತಾರೆ. ಈ ನರುಟೋ ಎನಿಮಿ ಕಾರ್ಟೂನ್ ನಲ್ಲಿ ಬರುವ ಒಂದು ಪಾತ್ರವಾಗಿದೆ. ಕಾರ್ಟೂನ್ ಪಾತ್ರದಾರಿಯನ್ನು ಮದುವೆಯಾಗಿದ್ದೇನೆ ಎಂದು ನಟಿ ಹಾಸ್ಯಾಸ್ಪದವಾಗಿ ಉತ್ತರ ನೀಡಿದ್ದಾರೆ.