Ads By Google

Rashmika And Rakshit Shetty: ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡ ರಶ್ಮಿಕಾ ಮಂದಣ್ಣ, ವೈರಲ್ ಆಯಿತು ಪೋಸ್ಟ್.

Rashmika Mandanna remembers the team of Kirik Party again
Ads By Google

 Rashmika Mandanna Kirik Party: ರಶ್ಮಿಕಾ ಮಂದಣ್ಣ (Rashmika Mandanna)  ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಂತೂ ಬಾಲಿವುಡ್ ನಲ್ಲಿ ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಇದೀಗ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ 6 ವರ್ಷ ಪೂರೈಸಿದ್ದಾರೆ.

ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ  (Kirik Party) ಚಿತ್ರ ಬಿಡುಗಡೆಯಾಗಿ ಇಂದಿಗೆ ಆರು ವರ್ಷ ಕಳೆದಿದೆ. ಈ ವಿಷಯದ ಬಗ್ಗೆ ರಶ್ಮಿಕಾ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

Image Credit: ragalahari

ಕಿರಿಕ್ ಪಾರ್ಟಿ ಚಿತ್ರ ನೆನಪಿಸಿಕೊಂಡ ರಶ್ಮಿಕಾ
ಇನ್ನು ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟಿ ರಶ್ಮಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ನಡುವೆ ರಶ್ಮಿಕಾ ತಮ್ಮ ಮೊದಲೇ ಚಿತ್ರವನ್ನು ಮರೆತ ಕಾರಣದಿಂದಾಗಿ ನಟಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಈ ವಿವಾದ ಬೆನ್ನಲೇ ನಟಿ ಕಿರಿಕ್ ಪಾರ್ಟಿ ಚಿತ್ರ 6 ವರ್ಷ ಪೂರೈಸಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಮ್ಮ ಮೊದಲ ಚಿತ್ರವನ್ನು ನೆನಪಿಸಿಕೊಂಡಿದ್ದಾರೆ.

Imge Credit: timesnownews

ಸ್ಪೆಷಲ್ ಪೋಸ್ಟ್ ಹಂಚಿಕೊಂಡ ಕಿರಿಕ್ ಬೆಡಗಿ
ಡಿಸೆಂಬರ್ 30, 2016 ರರಲ್ಲಿ ರಕ್ಷಿತ್ ಶೆಟ್ಟಿ (Rakshith Shetty) ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ತೆರೆಯ ಮೇಲೆ ಬಂದು ಸಾಕಷ್ಟು ಸದ್ದು ಮಾಡಿತ್ತು. ಸಾನ್ವಿ ಮತ್ತು ಕರ್ಣನ ಲವ್ ಸ್ಟೋರಿ ಎಲ್ಲರ ಮೆಚ್ಚುಗೆ ಪಡೆದಿತ್ತು.

ಆದರೆ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ನಟಿ ನಡೆದು ಬಂದ ಹಾದಿಯನ್ನು ಮರೆಯುವ ರೀತಿಯಲ್ಲಿ ತಮ್ಮ ಮೊದಲ ಚಿತ್ರಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದರು. ಹಾಗಾಗಿ ರಶ್ಮಿಕಾ ನೆಟ್ಟಿಗರ ಟ್ರೊಲ್ ಗೆ ಗುರಿಯಾಗಿದ್ದರು. ಅದರ ಜೊತೆಗೆ ಕನ್ನಡ ಇಂಡಸ್ಟ್ರಿಯಿಂದ ರಶ್ಮಿಕರನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದ್ದಿತ್ತು.

Image Credit: pinkvilla

ಆದರೆ ಇದೀಗ ನಟಿ ಕಿರಿಕ್ ಪಾರ್ಟಿ ಚಿತ್ರ 6 ವರ್ಷ ಪೂರೈಸಿದ ಸಂಭ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಅಪ್ಲೋಡ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಇದನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಎಲ್ಲವು ಆರಂಭವಾದ ದಿನ
‘ಕಿರಿಕ್ ಪಾರ್ಟಿಗೆ 6 ವರ್ಷ , ಎಲ್ಲವು ಆರಂಭವಾದ ದಿನ ಎಂದು ರಶ್ಮಿಕಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಅದರ ಜೊತೆಗೆ ಕಿರಿಕ್ ಪಾರ್ಟಿ ಚಿತ್ರದ ಪೋಸ್ಟರ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಇನ್ನು ರಶ್ಮಿಕಾ ಅವರ ಈ ಪೋಸ್ಟ್ ಅನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field