Rashmika Mandanna Ramp Walk: ಮಾಡರ್ನ್ ಸೀರೆಯಲ್ಲಿ ರ‍್ಯಾಂಪ್ ವಾಕ್ ಮೂಲಕ ಗಮನ ಸೆಳೆದ ಕಿರಿಕ್ ಬ್ಯೂಟಿ ರಶ್ಮಿಕಾ, ಫೋಟೋ ವೈರಲ್.
Rashmika Mandanna Ramp Walk Modern Saree: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳ ಜೊತೆ ಫೋಟೋ ಹಂಚಿಕೊಳ್ಳುತ್ತ ಹತ್ತಿರದಲ್ಲಿರುತ್ತಾರೆ. ಇದೀಗ ನಟಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಲುಕ್ ಅನ್ನು ರಿವಿಲ್ಲ ಮಾಡಿದ್ದಾರೆ.
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ತಮ್ಮ ದಿನಚರಿಯನ್ನು ಅಭಿಮಾನಿಗಳಿಗೆ ತಿಳಿಸುತ್ತ ಇರುತ್ತಾರೆ. ಇನ್ನು ತಮ್ಮ ಹೊಸ ಹೊಸ ಲುಕ್ ಅನ್ನು ರಿವೀಲ್ ಮಾಡುದರ ಜೊತೆಗೆ ಕೆಲವು ವಿಡಿಯೋಗಳನ್ನು ಹಂಚುಕೊಳ್ಳುತ್ತಾರೆ.
ರ‍್ಯಾಂಪ್ ವಾಕ್ ಮೂಲಕ ಗಮನ ಸೆಳೆದ ಕಿರಿಕ್ ಬ್ಯೂಟಿ
ನಟಿ ರಶ್ಮಿಕಾ ಮಂದಣ್ಣ ಇದೀಗ ಸಾಲು ಸಾಲು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ನಟಿ ಖಾಸಗಿ ಇವೆಂಟ್ ನಲ್ಲಿ ರ‍್ಯಾಂಪ್ ವಾಕ್ ಮಾಡುದರ ಮೂಲಕ ನೋಡುಗರ ಗಮನ ಸೆಳೆದಿದ್ದಾರೆ.
ಕಪ್ಪು ಬಣ್ಣದ ಮಾಡೆರ್ನ್ ಸೀರೆಯಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ
ಮುಂಬೈ ನಲ್ಲಿ ನಡೆದ ಪ್ಯಾಷನ್ ವೀಕ್ ಇವೆಂಟ್ ನಲ್ಲಿ ರಶ್ಮಿಕಾ ರ‍್ಯಾಂಪ್ ವಾಕ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣದ ಮಾಡೆರ್ನ್ ಸೀರೆಯಲ್ಲಿನ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
View this post on Instagram
ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ (Kirik Party) ಸಿನಿಮಾದ ಮೂಲಕ ಜನರಿಗೆ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ದೂರ ಇದ್ದರು ಕೂಡ ಬಹು ಬೇಡಿಕೆ ಇರುವ ನಟಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.