Rashmika Mandanna: ಅಲ್ಲೂ ಅರ್ಜುನ್ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ, ಸಾಧನೆ ನೋಡಿ ಮೆಚ್ಚಿಕೊಂಡ ಅಭಿಮಾನಿಗಳು.
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾರತದ ಮೂರನೇ ಅತ್ಯಂತ ಜನಪ್ರಿಯ ಸೆಲಬ್ರೆಟಿ ಆಗಿದ್ದಾರೆ. ಈ ಪಟ್ಟಿಯಲ್ಲಿ ಅಲ್ಲೂ ಅರ್ಜುನ್ ಸಹ ಸಾಧನೆ ಮಾಡಿದ್ದಾರೆ. ಅಂದರೆ ಅಲ್ಲೂ ಅರ್ಜುನ್ ಅವರು 17 ನೇ ಸ್ಥಾನದಲ್ಲಿದ್ದಾರೆ.
Rashmika Mandanna Achivement: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna)ಸದಾ ಸುದ್ದಿಯಲ್ಲಿದ್ದಾರೆ ಎನ್ನಬಹುದು. ಅದೆಷ್ಟೇ ಟ್ರೊಲ್ ಗಳಿಗೆ ಒಳಗಾದರು ಸಹ ನಟಿ ರಶ್ಮಿಕಾ ಮಂದಣ್ಣ ತಲೆ ಕೆಡಿಸಿಕೊಳ್ಳದೆ ತಮ್ಮ ವೃತ್ತಿ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ.
ಟ್ರೊಲ್ ಮಾಡುವವರ ಬಾಯಿ ಮುಚ್ಚಿಸಲು ನಟಿ ರಶ್ಮಿಕಾ ಮಂದಣ್ಣ ಹೆಚ್ಚು ಹೆಚ್ಚು ಸಾಧಗಳನ್ನು ಮಾಡುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಭಿಮಾನಿಗಳು ನಟಿ ರಶ್ಮಿಕಾ ಮಂದಣ್ಣ ಸಾಧನೆ ನೋಡಿ ಮೆಚ್ಚಿಕೊಂಡಿದ್ದಾರೆ.
ರಶ್ಮಿಕಾ ಸಾಧನೆ ನೋಡಿ ಮೆಚ್ಚಿಕೊಂಡ ಫ್ಯಾನ್ಸ್
ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ ಸಿನಿಮಾದಲ್ಲಿ ಅಲ್ಲೂ ಅರ್ಜುನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅಲ್ಲೂ ಅರ್ಜುನ್ ಸಾಧನೆಯನ್ನು ಹಿಂದಿಕ್ಕಿದ್ದಾರೆ ಎನ್ನುವ ಸುದ್ದಿ ಆಗಿದೆ. ಟ್ರೊಲ್ ಮಾಡುವವರು ಸಹ ರಶ್ಮಿಕಾ ಅವರ ಸಾಧನೆಯನ್ನು ನೋಡಿ ಬೆರಗಾಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಪ್ರೈದ್ದ IMDb ಕಂಪನಿ ಬಿಡುಗಡೆ ಮಾಡಿದ ಜನಪ್ರಿಯ ಭಾರತೀಯ ಸೆಲಬ್ರೆಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವಾರ ಜನಪ್ರಿಯ IMDb ಸಂಸ್ಥೆ ಬಿಡುಗಡೆ ಮಾಡಿದ ಜನಪ್ರಿಯ ಭಾರತೀಯ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಭಾರತದ ಮೂರನೇ ಅತ್ಯಂತ ಜನಪ್ರಿಯ ಸೆಲಬ್ರೆಟಿ ರಶ್ಮಿಕಾ ಮಂದಣ್ಣ
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಭಾರತದ ಮೂರನೇ ಅತ್ಯಂತ ಜನಪ್ರಿಯ ಸೆಲಬ್ರೆಟಿ ಆಗಿದ್ದಾರೆ. ಈ ಪಟ್ಟಿಯಲ್ಲಿ ಅಲ್ಲೂ ಅರ್ಜುನ್ ಸಹ ಸಾಧನೆ ಮಾಡಿದ್ದಾರೆ. ಅಂದರೆ ಅಲ್ಲೂ ಅರ್ಜುನ್ ಅವರು 17 ನೇ ಸ್ಥಾನದಲ್ಲಿದ್ದಾರೆ. ಅಂದರೆ ನಟಿ ರಶ್ಮಿಕಾ ಅಲ್ಲೂ ಅರ್ಜುನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಕಾರಣದಿಂದ ನಟಿ ರಶ್ಮಿಕಾ ಮಂದಣ್ಣ ಅವರನ್ನು ಅಭಿಮಾನಿಗಳು ಹೊಗಳುತ್ತಿದ್ದಾರೆ.