Rashmika Kannada: ಕನ್ನಡ ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಶ್ಮಿಕಾ, ಮತ್ತೆ ಟ್ರೊಲ್ ಮಾಡಿದ ನೆಟ್ಟಿಗರು.
ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಆದ ನಟಿ ರಶ್ಮಿಕಾ ಮಂದಣ್ಣ.
Actress Rashmika Mandanna Troll: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಖ್ಯಾತ ನಟಿ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ ನಂತರ ಬಹುಬೇಡಿಕೆಯ ನಟಿಯಾಗಿ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಹೆಚ್ಚು ನೆಟ್ಟಿಗರಿಂದ ಟ್ರೊಲ್ ಗೆ ಒಳಗಾಗುತ್ತಾರೆ. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಟ್ರೊಲ್ ಆಗಿದ್ದಾರೆ.
ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ನಟಿ ರಶ್ಮಿಕಾ
ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪ್ರಶ್ನೆಗಳನ್ನು ಕೇಳಿ ಎಂದು ಅಭಿಮಾನಿಗಳ ಒಂದಿಷ್ಟು ಪ್ರಶ್ನೆಗೆ ಉತ್ತರ ನೀಡಿದ್ದಾರೆ. ರಶ್ಮಿಕಾ ಪ್ರಶ್ನೆಗಳನ್ನು ಕೇಳಿ ಎನ್ನುತ್ತಿದ್ದಂತೆ ಅಭಿಮಾನಿಗಳಿಂದ ಸಾಕಷ್ಟು ಪ್ರಶ್ನೆಗಳು ಹರಿದು ಬಂದಿದೆ. ಅದರಲ್ಲಿ ಕೆಲವು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಂಡು ನಟಿ ರಶ್ಮಿಕಾ ಉತ್ತರ ನೀಡಿದ್ದಾರೆ.
ಕನ್ನಡ ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡ ರಶ್ಮಿಕಾ
ನಟಿ ರಶ್ಮಿಕಾ ಅಭಿಮಾನಿಗಳು ಕೇಳಿದ ಪ್ರಶ್ನೆಯಲ್ಲಿ ಒಬ್ಬರು ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕನ್ನಡದಲ್ಲಿ ಎರಡು ಸಾಲು ಮಾತನಾಡುವುದರಲ್ಲಿಯೇ ನಟಿ ರಶ್ಮಿಕಾ ಮಂದಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ರಶ್ಮಿಕಾ ಅವರು ಮಾತನಾಡಿರುವ ಕನ್ನಡ ಈಗ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದೆ.
ಮತ್ತೆ ಟ್ರೊಲ್ ಆದ ನಟಿ ರಶ್ಮಿಕಾ
“ಎಲ್ಲರೂ ಹೇಗಿದ್ದೀರಾ. ನಾನು ಚೆನ್ನಾಗಿದ್ದೀನಿ ಯಾವಗಾಲು ನೌತಾ ಇರಿ. ನಾನು ನಿಮ್ಮ ಬಗ್ಗೆ ಯೋಚಿಸುತ್ತಿರುತ್ತೇನೆ ಎಂದಿದ್ದಾರೆ”. ಯಾವಾಗಲು ನಗ್ತಾ ಇರಿ ಎನ್ನುವ ಬದಲು ಯಾವಾಗಲೂ ನೌತಾ ಇರಿ ಎಂದಿದ್ದಾರೆ. ರಶ್ಮಿಕಾ ಒಂದಲ್ಲ ಒಂದು ವಿಚಾರದಿಂದ ಟ್ರೊಲ್ ಆಗುತ್ತಾರೆ. ಆದರೆ ಇತ್ತೀಚಿಗೆ ಟ್ರೊಲ್ ಗಳಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಟ್ರೊಲ್ ಆಗಿದ್ದಾರೆ. ನಟಿ ರಶ್ಮಿಕಾ ಅವರ ಈ ಟ್ರೊಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.