Ads By Google

Rashmika Mandanna In Dubai: ಫ್ಯಾಮಿಲಿ ಜೊತೆ ದುಬೈ ಟ್ರಿಪ್ ಗೆ ಹೋದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಫೋಟೋಗಳು ವೈರಲ್.

Actress Rashmika Mandanna is traveling in Dubai with Vijay Devarakonda's family
Ads By Google

Rashmika Mandanna with Vijay Devarakonda Family in Dubai: ಕನ್ನಡ ಚಿತ್ರರಂಗದ ಕಿರಿಕ್ ಪಾರ್ಟಿ (Kirik Party) ಸಿನಿಮಾದಿಂದ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಬಾಷಾ ನಟಿ.

ಕಿರಿಕ್ ಪಾರ್ಟಿ ಸಿನಿಮಾದ ನಂತರ ನಟಿ ರಶ್ಮಿಕಾ ಮಂದಣ್ಣನಿಗೆ ತೆಲುಗು ಚಿತ್ರದಿಂದ ಆಫರ್ ಬಂತು. ನಂತರ ನಟಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ (Vijay Devarakonda) ಜೊತೆಗೆ ಎರಡು ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು.

Image Credit: instagram

ಜನರನ್ನು ಮೋಡಿ ಮಾಡಿದ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿ
ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಜೋಡಿ ಸಾಕಷ್ಟು ಜನರನ್ನು ಮೋಡಿ ಮಾಡಿತ್ತು. ಈ ಜೋಡಿ ಜೊತೆಯಾಗಿ ನಟಿಸಿರುವ ಗೀತಾ ಗೋವಿಂದಂ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡು ಹಿಟ್ ಆಗಿತ್ತು.

ಈ ಸಿನಿಮಾದಲ್ಲಿ ನಟಿಸಿದ ಈ ಜೋಡಿಯನ್ನು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹಲವಾರು ಜನರು ತಿಳಿದುಕೊಂಡಿದ್ದರು. ಆದರೆ ಈ ಜೋಡಿ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಅಂತ ಹೇಳಿಕೊಂಡಿದ್ದಾರೆ.

Image Credit: postsen

ಫ್ಯಾಮಿಲಿ ಜೊತೆ ದುಬೈಗೆ ಹೋದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ
ಕಳೆದ ವರ್ಷ ಈ ಜೋಡಿ ಒಟ್ಟಿಗೆ ಸೇರಿ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಪೂರಕ ಈ ಜೋಡಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ದುಬೈ ಟ್ರಿಪ್ ತೆರಳಿದ್ದಾರೆ ಎನ್ನಲಾಗಿದೆ.

Image credit: instagram

ದುಬೈನಲ್ಲಿ ಜೊತೆಯಾಗಿ ಫೋಟೋ ತೆಗೆಸಿಕೊಂಡಿರುವ ರಶ್ಮಿಕಾ ಮತ್ತು ವಿಜಯ್
ಇದೀಗ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕುಟುಂಬದೊಂದಿಗೆ ದುಬೈಗೆ ತೆರಳಿರುವುದು ಕನ್ಫರ್ಮ್ ಆಗಿದೆ. ನಟ ವಿಜಯ್ ದೇವರಕೊಂಡ ಜೊತೆ ಸೇರಿ ನಟಿ ರಶ್ಮಿಕಾ ಮಂದಣ್ಣ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field