Ads By Google

ಕೆಜಿಎಫ್ ಚಿತ್ರದ ಕಾರಣ ಪುಷ್ಪ 2 ನಲ್ಲಿ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಬಿಟ್ಟು ಕತ್ತರಿ, ಶಾಕ್ ನಲ್ಲಿ ರಶ್ಮಿಕಾ.

Srivalli Rasmika mandanna
Ads By Google

ಸದ್ಯ ಭಾರತದ ಚಿತ್ರರಂಗದಲ್ಲಿ ಬಹಳ ಸಾಧನೆಯನ್ನ ಮಾಡುತ್ತಿರುವ ಚಿತ್ರರಂಗವೆಂದರೆ ಅದೂ ದಕ್ಷಿಣ ಭಾರತದ ಚಿತ್ರರಂಗ ಎಂದು ಹೇಳಬಹುದು. ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಮೂಡಿ ಬರುತ್ತಿದ್ದು ಅಭಿಮಾನಿಗಳು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಕನ್ನಡದ ಕೆಜಿಎಫ್ ಚಿತ್ರದ ನಂತರ ದಕ್ಷಿಣ ಭಾರತದಲ್ಲಿ ಸಕತ್ ಸುದ್ದಿಯಲ್ಲಿ ಇರುವ ಚಿತ್ರವೆಂದರೆ ಅದೂ ಪುಷ್ಪ ಮತ್ತು ವಿಕ್ರಂ ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಈ ಎರಡು ಚಿತ್ರಗಳ ಎರಡನೆಯ ಭಾಗವನ್ನ ನೋಡಲು ಜನರು ಕಾದು ಮುಂದಿನ ವರ್ಷ ಈ ಚಿತ್ರಗಳು ತೆರೆಕಾಣಲಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಪುಷ್ಪ ಚಿತ್ರದ ದೊಡ್ಡ ಸುದ್ದಿಯೊಂದು ಬಂದಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ.

ಹೌದು ಪುಷ್ಪ ಚಿತ್ರದ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿಯನ್ನ ಹಾಕಲಾಗಿದೆ ಅನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಶ್ರೀವಲ್ಲಿ ಪಾತ್ರಕ್ಕೆ ಕತ್ತರಿಯನ್ನ ಹಾಕಲು ಪ್ರಮುಖವಾದ ಕಾರಣ ಕೆಜಿಎಫ್ 2 ಚಿತ್ರವೆಂದು ಹೇಳಲಾಗುತ್ತಿದೆ. ಹಾಗಾದರೆ ಕೆಜಿಎಫ್ 2 ಚಿತ್ರದ ಕಾರಣ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಹಾಕಲು ಹಾಕಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಹೌದು ನೀವೆಲ್ಲ ಕೆಜಿಎಫ್ 2 ಚಿತ್ರವನ್ನ ನೋಡಿರುತ್ತೀರಿ ಮತ್ತು ಚಿತ್ರದ ಕೊನೆಯಲ್ಲಿ ಚಿತ್ರದ ನಾಯಕಿಯನ್ನ ವಿಲನ್ ಗಳು ಸಾಯಿಸುತ್ತಾರೆ.

ಪುಷ್ಪ ಚಿತ್ರದ ಎರಡನೆಯ ಭಾಗದ ಆರಂಭದಲ್ಲೇ ಶ್ರೀವಲ್ಲಿಯನ್ನ ಸಾಯಿಸುವುದರ ಮೂಲಕ ವಿಲನ್ ಗಳು ತಮ್ಮ ಸೇಡು ತೀರಿಸಿಕೊಳ್ಳುತ್ತಾರೆ ಅನ್ನುವ ಅನ್ನುವ ಮಾತುಗಳು ಕೇಳಿಬರುತ್ತಿದೆ. ಕೆಜಿಎಫ್ 2 ಚಿತ್ರದ ನೋಡಿದ ನಿರ್ದೇಶಕ ಸುಕುಮಾರ್ ಅವರು ಚಿತ್ರದ ಕಥೆಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಂದಿರುವ ಮಾಹಿತಿ ನಿಜವಾದರೆ ಪುಷ್ಪ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಚ್ಚಿನ ಪಾತ್ರಕ್ಕೆ ಕತ್ತರಿ ಬೀಳುವ ಎಲ್ಲಾ ಲಕ್ಷಣ ಇದೆ ಎಂದು ಹೇಳಬಹುದು.

ಕೆಜಿಎಫ್ ಚಿತ್ರದ ಮಾದರಿಯನ್ನೇ ಪುಷ್ಪ ಚಿತ್ರ ಅನುಸರಿಸುತ್ತಿದೆ ಅನ್ನುವ ಮಾಹಿತಿಗಳು ಮೂಲಗಳಿಂದ ತಿಳಿದುಬಂದಿದೆ. ಸದ್ಯ ಚಿತ್ರದ ಕಥೆ ಯಾವ ರೀತಿಯಲ್ಲಿ ಇದೆ ಅನ್ನುವುದನ್ನ ಊಹೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿದೆ. ಸದ್ಯ ಕೆಜಿಎಫ್ ಮತ್ತು ವಿಕ್ರಂ ಚಿತ್ರ ಬಾಕ್ಸ್ ಕೊಳ್ಳೆ ಹೊಡೆದಿದ್ದು ಪುಷ್ಪ 2 ಚಿತ್ರ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ದೊಡ್ಡ ಸಾಧನೆಯನ್ನ ಮಾಡುವುದರಲ್ಲಿ ಎರಡು ಮಾತಿಲ್ಲ. ಸ್ನೇಹಿತರೆ ನಿಮ್ಮ ಪ್ರಕಾರ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಬೀಳಬಹುದಾ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field