Ratan Tata: ಕೋಟ್ಯಾಧಿಪತಿ ಆದ್ರೂ ರತನ್ ಟಾಟಾ ಯಾಕೆ ಮದುವೆಯಾಗಿಲ್ಲ!ಇಷ್ಟ ಪಟ್ಟ ಹುಡುಗಿ ಬಿಟ್ಟು ಹೋಗಿದ್ದು ಯಾಕೆ ?
ಮನಸಾರೆ ಪ್ರೀತಿಸಿದ್ದರು ಆಕೆಯಿಂದ ದೂರವಾಗಿದ್ದ ರತನ್ ಟಾಟಾ.
Ratan Tata Marriage: ಭಾರತದ ಶ್ರೀಮಂತ ಉದ್ಯಮಿ ಎಂದು ಕರೆಸಿಕೊಳ್ಳುವ ರತನ್ ಟಾಟಾ(Ratan Tata) ಅವರು ಕೋಟ್ಯಾಂತರ ಭಾರತೀಯರಿಗೆ ರೋಲ್ ಮಾಡೆಲ್ ಆಗಿದ್ದಾರೆ. ಪ್ರಪಂಚದಾದ್ಯಂತ ರತನ್ ಟಾಟಾ ಅವರು ಟಾಟಾ ಗ್ರೂಪ್ ನ ಅದ್ಬುತ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಸರಳ ವ್ಯಕ್ತಿತ್ವದ ಟಾಟಾ ಎಂದರೆ ಎಲ್ಲರೂ ಬಹಳ ಇಷ್ಟ ಪಡುತ್ತಾರೆ.
ಬಿಲಿಯನೇರ್ ಆದ ಟಾಟಾ ಯಾಕೆ ಮದುವೆಯಾಗಿಲ್ಲ? ಅವರಿಗೆ ಯಾವತ್ತೂ ಪ್ರೀತಿಯಾಗಿಲ್ವಾ? ರತನ್ ಟಾಟಾ ಅವರ ಬಿಸಿನೆಸ್ ಲೋಕದ ಸಾಧನೆ ಹೊರತಾಗಿ ಅವರ ವಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಇದೀಗ ರತನ್ ಟಾಟಾ ಅವರು ತಾವು ಅವಿವಾಹಿತರಾಗಿ ಉಳಿದಿರುವ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ರತನ್ ಟಾಟಾ ಅವರ ಬಾಲ್ಯದ ಜೀವನ
ರತನ್ ಟಾಟಾ ಅವರು ಹೂಮನ್ಸ್ ಆಪ್ ಬಾಂಬೆಯಲ್ಲಿ ಥ್ರೋಬ್ಯಾಕ್ ಸಂದರ್ಶನದಲ್ಲಿ ತಮ್ಮ ಬಾಲ್ಯದ ನೆನಪುಗಳ ಬಗ್ಗೆ ಮಾತನಾಡಿದ್ದಾರೆ. ಟಾಟಾ ಅವರು ತಮ್ಮ ಬಾಲ್ಯದ ಜೀವನ ತುಂಬ ಸಂತೋಷಕರವಾಗಿತ್ತು ಎಂದು ಹೇಳಿಕೊಂಡಿದ್ದರು ಆದರೆ ಟಾಟಾ ಅವರ ಪೋಷಕರು ವಿಚ್ಛೇದನ ಪಡೆದಾಗ ಅವರು ತುಂಬ ದುಃಖವನ್ನು ಅನುಭವಿಸಿದ್ದರು. ರತನ್ ಟಾಟಾ ಅವರು ತಮ್ಮ ತಾಯಿಯ ಎರಡನೇ ಮದುವೆ ಬಗ್ಗೆ ಚಿಂತೆಗೆ ಒಳಗಾಗಿದ್ದರು. ಟಾಟಾ ಅವರ ಸಹಪಾಠಿಗಳು ಅವರನ್ನು ಚುಡಾಯಿಸುತ್ತಿದರು ಎಂದು ಹೇಳಿಕೊಂಡಿದ್ದರು.
ಮನಸಾರೆ ಪ್ರೀತಿಸಿದ್ದರು ಆಕೆಯಿಂದ ದೂರವಾಗಿದ್ದ ಟಾಟಾ
ರತನ್ ಟಾಟಾ ಅವರು ಲಾಸ್ ಏಂಜಲೀಸ್ ನಲ್ಲಿ ಇರುವಾಗ ಒಬ್ಬರನ್ನು ಪ್ರೀತಿಸುತ್ತಿದ್ದರು ಆದರೆ ಅಜ್ಜಿಯ ಅರೋಗ್ಯ ಸಮಸ್ಯೆಯ ಕಾರಣ ಅವರು ಭಾರತಕ್ಕೆ ಹಿಂದಿರುಗ ಬೇಕಾಯಿತು. ಪ್ರೀತಿಸಿದ ಹುಡುಗಿ ನನ್ನನ್ನು ಭಾರತದಲ್ಲಿ ಭೇಟಿ ಮಾಡಲು ಮುಂದಾಗಿದ್ದಳು ಆದರೆ ಆಗ ಭಾರತ -ಚೀನಾ ಯುದ್ಧ ಪ್ರಾರಂಭವಾಗಿತ್ತು ಹಾಗಾಗಿ ಅವರ ಪೋಷಕರು ಅವಳಿಗೆ ಭಾರತಕ್ಕೆ ತೆರಳಲು ಅವಕಾಶ ನೀಡಲಿಲ್ಲ. ಇದರಿಂದ ಟಾಟಾ ಅವರು ಮನಸಾರೆ ಪ್ರೀತಿಸಿದವರಿಂದ ದೂರವಾದರು.
ಜೀವನ ಸಂಗತಿ ಇಲ್ಲ ಎಂಬ ಕಾರಣಕ್ಕೆ ನಾನು ಎಂದು ಬೇಸರ ವ್ಯಕ್ತ ಪಡಿಸಿಲ್ಲ. “ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೆ ಮತ್ತು ಪ್ರಯಾಣಿಸುತ್ತಿದ್ದೆ, ನನಗಾಗಿ ಸ್ವಲ್ಪ ಸಮಯ ನೀಡಲು ಸಾಧ್ಯವಾಗಲಿಲ್ಲ. ಆದರೆ ಇಂದು ನಾನು ಹಿಂತಿರುಗಿ ನೋಡಿದಾಗ, ನಾನು ಯಾವುದಕ್ಕೂ ವಿಷಾದಿಸುವುದಿಲ್ಲ, ಒಂದು ಸೆಕೆಂಡ್ ಕೂಡ ” ಎಂದು ಟಾಟಾ ಸ್ಪಷ್ಟವಾಗಿ ತಿಳಿಸಿದ್ದಾರೆ.