Ration Card: ಕಾಂಗ್ರೆಸ್ ಸರ್ಕಾರ ಬರುತ್ತಲೇ ಇದೀಗ ರೇಷನ್ ಪಡೆಯುವ ಎಲ್ಲ ವರ್ಗದ ಜನರಿಗೆ ಮತ್ತೊಂದು ಸಿಹಿಸುದ್ದಿ.
ಪ್ರತಿ ತಿಂಗಳು ರೇಷನ್ ದಾನ್ಯ ಪಡೆದುಕೊಳ್ಳುವ ಎಲ್ಲರಿಗೂ ಇನ್ನೊಂದು ಗುಡ್ ನ್ಯೂಸ್ ನೀಡಿದ ಕಾಂಗ್ರೆಸ್ ಸರ್ಕಾರ.
India’s First Ration ATM: ಸದ್ಯ ಭಾರತವೀಗ ಡಿಜಿಟಲ್ ಕಡೆ ಸಾಗುತ್ತಿರುವುದು ಎಲ್ಲರಿಗು ತಿಳಿದಿರುವ ವಿಷಯ. ದೇಶದ ಅನೇಕ ಕಾಮಗಾರಿಗಳು ಹಾಗು ಜನರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳಲ್ಲಿ ಡಿಜಿಟಲ್ ಉತ್ತೇಜನವನ್ನು ನಾವು ನೋಡಿದ್ದೇವೆ.
ಈಗಾಗಲೇ ಭಾರತ ಕ್ರತಕ ಬುದ್ದಿಮತ್ತೆ (AI ) ನಂತಹ ಆಧುನಿಕತೆಯನ್ನು ಕೂಡ ಹಲವು ಇಲಾಖೆಗಳಲ್ಲಿ ಬಳಸಿಕೊಳ್ಳಲು ಮುಂದಾಗಿದೆ.
ರೇಷನ್ ಹಂಚಿಕೆಗೂ ಬರಲಿದೆ ಆಧುನಿಕತೆ
ಹೌದು ಭಾರತದಲ್ಲಿ ಇದೀಗ ಬಡಜನರು ರೇಷನ್ ಪಡೆಯಲು ಕ್ಯೂ ನಿಲ್ಲುವುದನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ನೀವು ನೋಡುವ ಸಾಮಾನ್ಯ ದ್ರಶ್ಯವಾಗಿದೆ, ಇದೀಗ ಭಾರತದಲ್ಲಿ ರೇಷನ್ ಪಡೆಯುವ ವಿಧಾನವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ .
ATM ರೀತಿಯ ಮಷಿನ್ ನಿಂದ ಸಿಗಲಿದೆ ಜನರಿಗೆ ರೇಷನ್
ಹೌದು ಭಾರತ ಸರ್ಕಾರವೀಗ ಜನರಿಗೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಗುವ ಸಮಯ ಹರಣ ಹಾಗು ತೂಕದಲ್ಲಿನ ಮೋಸ ಹಾಗೆಯೆ ಜನರಿಗೆ ಸುಲಭವಾಗಿ ಹೆಚ್ಚಿನ ವೇಗದಲ್ಲಿ ರೇಷನ್ ಹಂಚಿಕೆಯನ್ನು ಡಿಜಿಟಲ್ ರೂಪದಲ್ಲಿ ನೀಡಲು ಏಟಿಎಂ ರೀತಿಯ ಮಷಿನ್ ಅಳವಡಿಸಲು ಯೋಜನೆ ಹೂಡಿದೆ.
ಲಕ್ನೋದಲ್ಲಿ ಬಂತು ದೇಶದ ಮೊದಲ ರೇಷನ್ ನೀಡುವ ಏಟಿಎಂ ಮಷಿನ್
ಹೌದು ಉತ್ತರ ಪ್ರದೇಶದ ಲಕ್ನೋದಲ್ಲಿ ಈಗಾಗಲೇ ದೇಶದ ಮೊದಲ ರೇಷನ್ ನೀಡುವ ಏಟಿಎಂ ಮಷಿನ್ ಕಾರ್ಯ ನಿರ್ವಹಣೆ ಮಾಡುತ್ತಿದೆ. ಜನರಿಗೆ ಇಲ್ಲಿ ಬಹಳ ವೇಗವಾಗಿ ಹಾಗು ಸುಲಭದಲ್ಲಿ ರೇಷನ್ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.
ಕರ್ನಾಟಕಕ್ಕೂ ಕಾಲಿಡಲಿದೆ ಈ ಎಟಿಎಂ ಮಷಿನ್
ಹೌದು ಕರ್ನಾಟಕದಲ್ಲಿ ಈಗಾಗಲೇ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ಕರ್ನಾಟಕದಲ್ಲಿ ಈ ರೇಷನ್ ಹಂಚಿಕೆಯ ಏಟಿಎಂ ಅನ್ನು ಶೀಘ್ರದಲ್ಲೇ ಪರಿಚಯಿಸಲಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ ಜನರಿಗೆ ಇನ್ಮೇಲೆ ರೇಷನ್ ಹಂಚುವ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಇರದೇ ವೇಗವಾಗಿ ನ್ಯಾಯ ಮಾರ್ಗದಲ್ಲಿ ರೇಷನ್ ಸಿಗಲಿದೆ.