Ration Bandh: ಕರ್ನಾಟಕ ಸರ್ಕಾರದ ಆದೇಶ, ಇಂತವರಿಗೆ ಮುಂದಿನ ತಿಂಗಳಿನ ರೇಷನ್ ಬಂದ್.
ಇಂತಹ ಜನರಿಗೆ ರೇಷನ್ ಅನ್ನು ಬಂದ್ ಮಾಡಲು ಈಗ ರಾಜ್ಯ ಸರ್ಕಾರ ಆದೇಶವನ್ನ ನೀಡಿದೆ.
Ration Card Update: ಪಡಿತರ ಚೀಟಿದಾರರಿಗೆ ಇದೀಗ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಕಾಂಗ್ರೆಸ್ (Congress) ಸರ್ಕಾರದ ಅನ್ನಭಾಗ್ಯ (Annabhagya) ಯೋಜನೆಯಿಂದ ಬಿಪಿಎಲ್ ಹಾಗು ಅಂತ್ಯೋದಯ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಲಾಗಿತ್ತು, ಆದರೆ ಕೊನೆಯ ಗಳಿಗೆಯಲ್ಲಿ ನಿಯಮದಲ್ಲಿ ಸಣ್ಣ ಬದಲಾವಣೆ ಮಾಡಲಾಯಿತು.
10 ಕೆಜಿ ಅಕ್ಕಿ ನೀಡಲು ಸರ್ಕಾರಕ್ಕೆ ಸದ್ಯಕ್ಕೆ ಆಗದಿರುವ ಕಾರಣ ಸರ್ಕಾರ 5 ಕೆಜಿ ಅಕ್ಕಿ ಬದಲು ಕುಟುಂಬದ ಸದಸ್ಯರಿಗೆ ತಲಾ 34 ರೂಪಾಯಿ ನೀಡುವುದಾಗಿ ಹೇಳಿತ್ತು. ಅದೇ ರೀತಿಯಲ್ಲಿ ಹಣವನ್ನ ವರ್ಗಾವಣೆ ಮಾಡಲಾಗುತ್ತಿದ್ದು ಸಾಕಷ್ಟು ಜನರ ಖಾತೆಗೆ ಹಣ ವರ್ಗಾವಣೆ ಆಗಿದೆ ಮತ್ತು ಹಣ ವರ್ಗಾವಣೆ ಪ್ರಕ್ರಿಯೆ ಇನ್ನೂ ಕೂಡ ನಡೆಯುತ್ತಿದೆ.
ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಹೊಸ ಮಾಹಿತಿ
ಇದೀಗ ಸರ್ಕಾರದಿಂದ ಅಂತೋದಯ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅಂತ್ಯೋದಯ ಕಾರ್ಡ್ ನಲ್ಲಿ 3 ಅಥವಾ ಅದಕ್ಕಿಂತ ಕಡಿಮೆ ಸದಸ್ಯರಿರುವವರು ತಿಂಗಳಿಗೆ 35 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುತ್ತಾರೆ. ಆದರೆ ಇಂತವರಿಗೆ ನಗದು ಹಣ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.
ಅದೇ ರೀತಿ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವವರ ಕುಟುಂಬಕ್ಕೆ ನಗದು ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಈ ಕೆಲಸ ಮಾಡದಿದ್ದರೆ ಮುಂದಿನ ತಿಂಗಳು ಉಚಿತ ರೇಷನ್ ಸ್ಥಗಿತ
ಈ ಹಿಂದಿನ ತಿಂಗಳಲ್ಲಿ ಪಡಿತರವನ್ನು ಪಡೆದುಕೊಂಡಿರುವ ಕುಟುಂಬಗಳು ಮುಂದಿನ ತಿಂಗಳು ರೇಷನ್ ಅನ್ನು ಪಡೆದುಕೊಳ್ಳಲು ಮತ್ತು ನಗದು ಹಣವನ್ನು ಪಡೆಯಬಹುದು. ಆದರೆ ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರು ಇನ್ನು ಖಾತೆ ತೆರೆಯದೆ ಇದ್ದರೆ ಅಥವಾ ತಮ್ಮ ಅಕೌಂಟ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸದೇ ಇದ್ದರೆ ಇವರಿಗೆ ನಗದು ಹಣ ವರ್ಗಾವಣೆ ಆಗುವುದಿಲ್ಲ.
ಹಣ ವರ್ಗಾವಣೆ ಆಗಲು ಕುಟುಂಬದ ಮುಖ್ಯಸ್ಥರ ಖಾತೆ ಸಕ್ರಿಯಗೊಳಿಸಬೇಕಾಗುತ್ತದೆ. ಇನ್ನು ಇ-ಕೆವೈಸಿಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳು ಅಂದರೆ ಆಗಸ್ಟ್ ನಿಂದ ಆಹಾರ ಧಾನ್ಯ ಹಾಗು ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ.