Ration Card Cancel: ಮತ್ತೆ ರದ್ದಾಗಲಿದೆ ಇಂತವರ ರೇಷನ್ ಕಾರ್ಡ್, ಕೇಂದ್ರ ಸರ್ಕಾರದ ಮಹತ್ವದ ಆದೇಶ.

Ration Card Updates And Rules: ಇದೀಗ ಪಡಿತರ ಚೀಟಿದಾರರಿಗೊಂದು ಮಹತ್ವದ ಸುದ್ದಿ ಹೊರ ಬಿದ್ದಿದೆ. ಪಡಿತರ ಚೀಟಿ ಹೊಂದಿರುವವರು ಈ ಸುದ್ದಿಯನ್ನು ತಿಳಿದುಕೊಳ್ಳಲೇ ಬೇಕು. ಕೇಂದ್ರ ಸರ್ಕಾರ ಲಕ್ಷಾಂತರ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯ ನೀಡುತ್ತಿದೆ.

ಈ ವರ್ಷವೂ ಅಂದರೆ 2023 ರಲ್ಲಿಯೂ ಪಡಿತರ ಚೀಟಿದಾರರಿಗೆ ಉಚಿತ ಪಡಿತರ ಸೌಲಭ್ಯ ಸಿಗಲಿದೆ ಎಂದು ಸರ್ಕಾರ ಘೋಷಿಸಿದೆ. ಆದರೆ ಅನೇಕ ಅನರ್ಹರು ಉಚಿತ ಪಡಿತರ ಲಾಭ ಪಡೆಯುತ್ತಿರುವುದು ಕಂಡು ಬಂದಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

The central government has issued an order to cancel the ration cards of the rich and the poor who are getting ration grains from the ration shops.
Image Credit: deccanherald

ಅನರ್ಹರಿಗೆ ಪಡಿತರ ಚೀಟಿ ರದ್ದು
ಇದೀಗ ಅನರ್ಹರು ಉಚಿತ ಪಡಿತರವನ್ನು ಪಡೆದುಕೊಳ್ಳುತ್ತಿರುವವರಿಗೆ ಸರ್ಕಾರದಿಂದ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಅನರ್ಹರು ಉಚಿತವಾಗಿ ರೇಷನ್ ಪಡೆಯುತ್ತಿದ್ದರೆ ಅಂತವರು ತಾವಾಗಿಯೇ ಪಡಿತರ ಚೀಟಿಯನ್ನು ರದ್ದುಪಡಿಸಬೇಕು ಎಂದು ಸರ್ಕಾರದ ವತಿಯಿಂದ ಜನರಲ್ಲಿ ಮನವಿ ಮಾಡಲಾಗುತ್ತಿದೆ. ಪಡಿತರ ಚೀಟಿ ರದ್ದುಪಡಿಸದಿದ್ದರೆ ಆಹಾರ ಇಲಾಖೆ ತಂಡ ಪರಿಶೀಲನೆ ಬಳಿಕ ರದ್ದುಪಡಿಸಲಿದೆ ಮತ್ತು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿದೆ.

The central government has issued an order to cancel the ration cards of rich and ineligible people who are getting ration grains.
Image Credit: businesstoday

ಈ ಕಾರಣಗಳಿಂದ ರದ್ದಾಗಲಿದೆ ಪಡಿತರ ಚೀಟಿ
ರೇಷನ್ ಕಾರ್ಡ್ ಹೊಂದಿರುವವರು 100 ಚದರ ಮೀಟರ್ ವಿಸ್ತೀರ್ಣದ ಪ್ಲಾಟ್ ಅಥವಾ ಮನೆಯನ್ನು ಹೊಂದಿದ್ದರೆ ಅವರಿಗೆ ಪಡಿತರ ಚೀಟಿ ರದ್ದಾಗಲಿದೆ, ನಾಲ್ಕು ಚಕ್ರದ ವಾಹನ, ಟ್ರಾಕ್ಟರ್, ಶಸ್ತ್ರಾಸ್ತ್ರ ಪರವಾನಗಿ ಇದ್ದರೆ ಪಡಿತರ ಚೀಟಿ ರದ್ದಾಗಲಿದೆ.

ಕುಟುಂಬದ ಆದಾಯವು ಗ್ರಾಮದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ನಗರದಲ್ಲಿ ಮೂರೂ ಲಕ್ಷಕ್ಕಿಂತ ಹೆಚ್ಚು ಅವರ ಸ್ವಂತ ಆದಾಯದಿಂದ ಗಳಿಸಿದರೆ, ಅಂತಹ ಜನರು ಅವರ ಪಡಿತರ ಚೀಟಿಯನ್ನು ಪಡೆಯಲು ತಹಸಿಲ್ ಮತ್ತು ಡಿಎಸ್ಓ ಕಚೇರಿಯಲ್ಲಿ ಸರೆಂಡರ್ ಮಾಡಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group