Ration Card: ರೇಷನ್ ಕಾರ್ಡಿನಲ್ಲಿ ಮಗುವಿನ ಹೆಸರನ್ನ ಸುಲಭವಾಗಿ ಆನ್ಲೈನ್ ಮೂಲಕ ಸೇರಿಸಬಹುದು, ಇಲ್ಲಿದೆ ವಿಧಾನ

ಈಗ ಆನ್ಲೈನ್ ನಲ್ಲಿ ಸುಲಭವಾಗಿ ನಿಮ್ಮ ಮಗುವಿನ ಹೆಸರನ್ನ ರೇಷನ್ ಕಾರ್ಡಿನಲ್ಲಿ ಸೇರಿಸಬಹುದಾಗಿದೆ

Add Members For Ration Cards: ಭಾರತದಲ್ಲಿ ಪಡಿತರ ಚೀಟಿಗೆ (Ration Cards) ಹೆಚ್ಚಿನ ಆಧ್ಯತೆ ಇದೆ. ಪ್ರತಿ ಅರ್ಹ ಕುಟುಂಬಗಳಿಗೂ ಈ ಪಡಿತರ ಚೀಟಿ ಬಹಳ ಸಹಾಯಕ ಆಗಿದೆ. ದೇಶದಲ್ಲಿ ಪಡಿತರ ಚೀಟಿಯನ್ನು ಪ್ರಮುಖ ದಾಖಲೆಯಾಗಿ ಹಾಗು ಗುರುತಿನ ಪುರಾವೆಯಾಗಿ ಗುರುತಿಸಲಾಗಿದೆ. ಪ್ರತಿಯೊಂದು ಕೆಲಸಕ್ಕೂ ಪಡಿತರ ಚೀಟಿ ಬಹಳ ಮುಖ್ಯ ಆಗಿದೆ. ಸರ್ಕಾರದಿಂದ ದೊರೆಯುವ ಪಡಿತರ ಪಡೆಯಲು, ಸರ್ಕಾರದ ಎಲ್ಲಾ ಯೋಜನೆಯ ಫಲಾನುಭವಿಗಳಾಗಲು, ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಮತ್ತು ಇತರ ಸರ್ಕಾರಿ ಸೇವೆಗಳನ್ನು ಪಡೆಯಲು ಪಡಿತರ ಚೀಟಿ ಅಗತ್ಯ ದಾಖಲೆ ಆಗಿದೆ.

BPL- APL Ration Card Distribution
Image Credit: DNA India

ಪಡಿತರ ಚೀಟಿಗೆ ಅರ್ಜಿ ಹಾಕಲು ಬೇಕಾಗಿರುವ ಪ್ರಮುಖ ದಾಖಲೆಗಳು

ಪಡಿತರ ಚೀಟಿ ಹೊಂದಿಲ್ಲದಿದ್ದರೆ ರಾಜ್ಯ ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಥವಾ ಹತ್ತಿರದ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ನಿವಾಸ ಪ್ರಮಾಣಪತ್ರ, ಕುಟುಂಬದ ಮುಖ್ಯಸ್ಥನ ಗುರುತಿನ ಪುರಾವೆ, ಕುಟುಂಬದ ಆದಾಯದ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. ಪಡಿತರ ಚೀಟಿಯ ಸಿಂಧುತ್ವವು 5 ವರ್ಷಗಳಿರುತ್ತದೆ. ಅದನ್ನು ನವೀಕರಿಸಲು ರಾಜ್ಯದ ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕು.ಈಗ ಪಡಿತರ ಚೀಟಿಯಲ್ಲಿ ಮಗುವಿನ ಹೆಸರನ್ನು ಸೇರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

BPL Ration Card Delete Latest News Update
Image Credit: Original Source

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಪಡಿತರ ಕಾರ್ಡ್‌ಗೆ ಮಗುವಿನ ಹೆಸರು ಸೇರಿಸಲು ರಾಜ್ಯದ ಆಹಾರ ಇಲಾಖೆಯ ವೆಬ್‌ಸೈಟ್‌ ಗೆ ಭೇಟಿನೀಡಿ. ಪಡಿತರ ಕಾರ್ಡ್‌ ಗೆ ಸದಸ್ಯರನ್ನು ಸೇರಿಸಿ ಅಥವಾ “ರೇಷನ್ ಕಾರ್ಡ್‌ಗೆ ಹೆಸರನ್ನು ಸೇರಿಸಿ” ಎಂಬ ಲಿಂಕ್‌ ಸರ್ಚ್‌ ಮಾಡಿ. ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ತೆರೆಯಿರಿ. ನಿಮ್ಮ ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಮಗುವಿನ ಹೆಸರು, ಹುಟ್ಟಿದ ದಿನಾಂಕ, ನಿವಾಸ ಪ್ರಮಾಣಪತ್ರ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯಂತಹ ಅಗತ್ಯವಿರುವ ಮಾಹಿತಿಯನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ. ನಿಮ್ಮ ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

Join Nadunudi News WhatsApp Group

ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿಯನ್ನು ಸಲ್ಲಿಸಿ. ಅರ್ಜಿಯನ್ನು ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ದೊರೆಯುತ್ತದೆ. ಅರ್ಜಿಯ ಸ್ಟೇಟಸ್‌ ಪರಿಶೀಲಿಸಲು ಈ ಅಪ್ಲಿಕೇಶನ್ ಸಂಖ್ಯೆಯನ್ನು ಬಳಸಬಹುದು. ಅರ್ಜಿ ಪರಿಶೀಲಿಸಿದ ನಂತರ ಮಗುವಿನ ಹೆಸರನ್ನು ಪಡಿತರ ಚೀಟಿಗೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ 10-15 ದಿನಗಳನ್ನು ತೆಗೆದುಕೊಳ್ಳುತ್ತದೆ. ಪಡಿತರ ಚೀಟಿಗೆ ಮಗುವಿನ ಹೆಸರನ್ನು ಸೇರಿಸಲು ಮಗು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅವರು ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎನ್ನುವುದು ನೆನಪಿನಲ್ಲಿಡಿ.

Join Nadunudi News WhatsApp Group