Address Change: ರೇಷನ್ ಕಾರ್ಡ್ ಇದ್ದವರಿಗೆ ಹೊಸ ಮಾರ್ಗಸೂಚಿ, ಈ ರೀತಿ ಸುಲಭಾವಾಗಿ ಬದಲಾಯಿಸಿ ನಿಮ್ಮ ವಿಳಾಸ.
ಆನ್ಲೈನ್ ಸುಲಭವಾಗಿ ರೇಷನ್ ಕಾರ್ಡ್ ನಲ್ಲಿ ಇರುವ ವಿಳಾಸವನ್ನ ಬದಲಾಯಿಸಬಹುದು.
Ration Card Address Change: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಹೆಚ್ಚು ಹೆಚ್ಚು ಜನರು BPL ರೇಷನ್ ಕಾರ್ಡ್ (Ration Card) ಗೆ ಅಜಿ ಸಲ್ಲಿಸುತ್ತಿದ್ದಾರೆ.
ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಅಗತ್ಯವಾಗಿದೆ. ಇದೀಗ ನೀವು ನಿಮ್ಮ ಪಡಿತರ ಚೀಟಿ ವಿವರಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಬದಲಿಸಬಹುದು. ಆನ್ಲೈನ್ ಮೂಲಕ ಕರ್ನಾಟಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ರೇಷನ್ ಕಾರ್ಡ್ ವಿಳಾಸ ಬದಲಾವಣೆ (Ration Card Address Change)
ಇನ್ನು ಜನರು ಹೆಚ್ಚಾಗಿ ಕೇಳುವ ವಿಷಯವೆಂದರೆ ಪಡಿತರ ಚೀಟಿ ವಿಳಾಸ ಬದಲಾವಣೆ. ಇದೀಗ ಆನ್ಲೈನ್ ಅಲ್ಲಿ ಹೆಸರು ಬದಲಾವಣೆ, ಸದಸ್ಯರ ಸೇರ್ಪಡೆ ಅಥವಾ ಅಳಿಸುವಿಕೆ, ಮುಂತಾದ ಬದಲಾವಣೆಗಳ ಕುರಿತು ಮಾಹಿತಿ ಲಭಿಸಿದೆ. ನಿಮ್ಮ ಹತ್ತಿರದ ಬಯೋ-ಫೋಟೋ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನಿಮ್ಮ ಕಾರ್ಡ್ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಬಹುದು. ರೇಷನ್ ಕಾರ್ಡ್ ಮಾನ್ಯವಾಗಿದ್ದರೆ ನೀವು ಸುಲಭವಾಗಿ ಅದರಲ್ಲಿನ ವಿಳಾಸ ಬದಲಾವಣೆ ಮಾಡಬಹುದು.
ಆನ್ಲೈನ್ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ
ಆನ್ಲೈನ್ ಪೋರ್ಟಲ್ ಅಲ್ಲಿ ನೀಡಲಾದ ತಿದ್ದುಪಡಿಗಳಲ್ಲಿ ಫಾರ್ಮ್ ಅನ್ನು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಬೇಕು. ಪಡಿತರ ಚೀಟಿಯಲ್ಲಿ ಬದಲಾವಣೆ ಅಗತ್ಯವಾಗಿರುದರಿಂದ, ಅರ್ಜಿ ನಮೂನೆಗಳ ಜೊತೆಗೆ ವಿಳಾಸ ಪುರಾವೆಗಳನ್ನು ನೀಡಬೇಕಾಗುತ್ತದೆ. ಇದಾದ ನಂತರ ಫಾರ್ಮ್ ಅನ್ನು ವೆಬ್ ಸೈಟ್ ಗೆ ಕಳುಹಿಸಬೇಕು.
ನೀಡಲಾದ ವಿವರಗಳು ಹೊಂದಿಕೆಯಾಗದಿದ್ದರೆ ಅರ್ಜಿ ತಿರಸ್ಕಾರಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಅರ್ಜಿ ಸಲ್ಲಿಕೆಯ ಸಮಯದಲ್ಲಿ ಯಾವುದೇ ತಪ್ಪಾದ ವಿವರವನ್ನು ನೀಡಬಾರದು. ಭರ್ತಿ ಮಾಡಿದ ಫಾರ್ಮ್ ಅನ್ನು ಮಿಸೇವಾ ಕಚೇರಿ ಅಥವಾ ಅಧಿಕೃತ ವೆಬ್ ಸೈಟ್ ಗೆ ಕಳುಹಿಸಬೇಕಾಗುತ್ತದೆ. ಫಾರಂ ಕಾರ್ಯ ವಿಧಾನದಲ್ಲಿ ಒಳಗೊಂಡಿರುವ ಎಲ್ಲಾ ಪರಿಶೀಲನಾ ಪ್ರಕ್ರಿಯೆಯ ಮೂಲಕ ಹೋದಾಗ ಹೊಸ ಮತ್ತು ನವೀಕರಿಸಿದ ಪಡಿತರ ಚೀಟಿಯನ್ನು ಅರ್ಜಿದಾರರರಿಗೆ ತಲುಪಿಸುತ್ತದೆ.
ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
*ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಕುಟುಂಬದ ಎಲ್ಲಾ ಸದಸ್ಯ ಆಧಾರ್ ಕಾರ್ಡ್ ಅಗತ್ಯವಾಗಿದೆ. 6 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರ ಬಯೋಮೆಟ್ರಿಕ್, ಇನ್ನು ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ, ಆದಾಯ ಪ್ರಮಾಣ ಪತ್ರ.
*ಆರು ವಯಸ್ಸಿನ ಕಡಿಮೆ ವಯಸ್ಸಿನ ಮಕ್ಕಳ ಜನನ ಪ್ರಮಾಣ ಪತ್ರ.
*ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ ಇವೆಲ್ಲದರ ಸ್ಕಾನ್ ಮಾಡಿದ ಪ್ರತಿ ಅಗತ್ಯ.
*ಸ್ಕಾನ್ ಮಾಡಿದ ಕುಟುಂಬದ ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಇತ್ತೀಚಿನ ಪಾಸ್ ಪೋಸ್ಟ್ ಸೈಜ್ ಭಾವಚಿತ್ರ, ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಹಾಗೂ ವಾರ್ಡ್ ಕೌನ್ಸಿಲರ್ ಅಥವಾ ಸ್ವಯಂ ಘೋಷಣೆ ಪ್ರಮಾಣ ಪತ್ರ ಅಗತ್ಯವಾಗಿದೆ.