Ration Card Amendment: ಅನ್ನಭಾಗ್ಯ ಯೋಜನೆಗೆ ಹಣ ಖಾತೆಗೆ ಬರದವರಿಗೆ ಸಿಹಿಸುದ್ದಿ ನೀಡಿದ ಸರ್ಕಾರ, ನವೆಂಬರ್ 1 ರಿಂದ ಹೊಸ ಸೇವೆ.
ನವೆಂಬರ್ 1 ರೇಷನ್ ಕಾರ್ಡ್ ಇದ್ದವರು ಮತ್ತೆ ತಮ್ಮ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು.
Ration Card Amendment Date Extended: ರಾಜ್ಯದಲ್ಲಿ ಇತ್ತೀಚಿಗೆ ಸರ್ಕಾರ Ration Card ಸಂಬಂಧಿತ ಅನೇಕ ರೀತಿಯ ಅಪ್ಡೇಟ್ ಅನ್ನು ನೀಡುತ್ತಿದೆ ಎನ್ನಬಹುದು. ರಾಜ್ಯದ ಜನತೆ ಈಗಾಗಲೇ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಜನರು ಸರ್ಕಾರದ ಈ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು.
ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿರುವಂತೆ ಸರ್ಕಾರ 5ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಯನ್ನು ಬದಲಾಗಿ ಹಣವನ್ನು ನೀಡುತಿದೆ. ಆದರೆ ಸರ್ಕಾರದ Anna Bhagya ಯೋಜನೆಯ ಲಾಭವನ್ನು ಇಲ್ಲ BPL ರೇಷನ್ ಕಾರ್ಡ್ ಹೊಂದಿರುವವರು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಲಾನುಭವಿಗಳ ಪಡಿತರ ಚೀಟಿಯಲ್ಲಿ ಇರುವ ತಪ್ಪುಗಳು.
ಪಡಿತರ ಚೀಟಿದಾರರಿಗೆ ತಿದ್ದುಪಡಿಗೆ ಮತ್ತೊಂದು ಅವಕಾಶ
ಮುಖ್ಯವಾಗಿ ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ತೆ ಮಹಿಳೆಯೇ ಆಗಿರಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ರೇಷನ್ ಕಾರ್ಡ್ ಮಾಹಿತಿ ತಪ್ಪಿದ್ದರೆ ಯಾವುದೇ ಕಾರಣಕ್ಕೂ Anna Bhagya ಯೋಜನಾ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುವುದಿಲ್ಲ. ಹೀಗಾಗಿ ರಾಜ್ಯದ ಲಕ್ಷಾಂತರ ಅರ್ಹ ಪಲಾನುಭವಿಗಳು ಪಡಿತರ ಚೀಟಿ ತಿದ್ದುಪಡಿಗಾಗಿ ಕಾಯುತ್ತಿದ್ದಾರೆ.
ಸದ್ಯ ಸರ್ಕಾರ ಈಗಾಗಲೇ ಹಲವು ಬಾರಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದೆ. ಇದೀಗ ಮತ್ತೆ ಪಡಿತರ ತಿದ್ದುಪಡಿಗೆ ಅವಕಾಶ ನೀಡುವ ಮೂಲಕ ಅರ್ಹ ಪಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ. ಇನ್ನು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳದೆ ಇರುವವರು ಸರ್ಕಾರ ನೀಡುತ್ತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ರಾಜ್ಯದ ಜನತೆಗೆ November 1 ರಿಂದ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ
ಸರ್ಕಾರ ಈ ಹಿಂದೆ October 19 ರಿಂದ 21 ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು. ಆದರೆ ಸೈಬರ್ ಸಮಸ್ಯೆಯಿಂದಾಗಿ ಬಹುತೇಕ ಜನರು ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜನತೆಗೆ ಮತ್ತೊಮ್ಮೆ ಅವಕಾಶವನ್ನು ನೀಡಿದೆ.
November 1 ರಿಂದ ಜನರು ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ಫಲಾನುಭವಿಗಳ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ನಲ್ಲಿ ಸದಸ್ಯರ ಹೆಸರನ್ನು ರದ್ದುಗೊಳಿಸುವುದು, ಕಾರ್ಡ್ ನಲ್ಲಿ ಸದಸ್ಯರ ಹೆಸರು ಸೇರ್ಪಡೆ, ಕಾರ್ಡ್ ನಲ್ಲಿನ ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆಗೆ ಸರ್ಕಾರ ಮತ್ತೊಮ್ಮೆ ಅನುಮತಿ ನೀಡಿದೆ.