Ration Card Update: APL, BPL ರೇಷನ್ ಕಾರ್ಡ್ ಹೊಂದಿರುವವರ ಗಮನಕ್ಕೆ, ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ.
ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ.
Ration Card Amendment Latest Update: ಸದ್ಯ ರಾಜ್ಯದಲ್ಲಿ Ration Card ಸಂಬಂಧಿತ ಅನೇಕ ಅಪ್ಡೇಟ್ ಗಳು ಹರಿದಾಡುತ್ತಿವೆ. ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಗಳಿಗೆ ರೇಷನ್ ಕಾರ್ಡ್ ಮುಖ್ಯ ದಾಖಲೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. Ration Card ನ ಮಾಹಿತಿ ಸರಿ ಇಲ್ಲದೆ ಇದ್ದರೆ ರಾಜ್ಯದ ಅರ್ಹ ಫಲಾನುಭವಿಗಳು ಕೂಡ Anna Bhagya ಹಾಗೂ Gruha Lakshmi ಯೋಜನೆಯ ಲಾಭದಿಂದ ವಂಚಿತರಾಗಬೇಕಿದೆ.
ಈಗಾಗಲೇ ಕಾಂಗ್ರೆಸ್ ನ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾಂರಂಟಿಗಳು ಅನುಷ್ಠಾನಗೊಂಡಿದ್ದು, ರಾಜ್ಯದ ಜನಎ ಯೋಜನೆಗಳ ಲಾಭ ಪಡೆಯುಯುತ್ತಿದ್ದಾರೆ. ಆದರೆ ರೇಷನ್ ಕಾರ್ಡ್ ದಾಖಲೆ ಸರಿ ಇಲ್ಲದ ಸಾಕಾಷ್ಟು ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿತ್ತು. ಇದೀಗ ಮತ್ತೆ ಎರಡನೇ ಹಂತದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ.
APL, BPL ರೇಷನ್ ಕಾರ್ಡ್ ಹೊಂದಿರುವವರ ಗಮನಕ್ಕೆ
ಈ ಹಿಂದೆ ರಾಜ್ಯದಲ್ಲಿ BPL Card ತಿದ್ದುಪಡಿಗಾಗಿ ಒಟ್ಟು 3.18 ಲಕ್ಷ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದರು. ಅದರ ಜೊತೆಗೆ ಕಳೆದ ಒಂದು ತಿಂಗಳಿನಿಂದ ಹೊಸದಾಗಿ ತಿದ್ದುಪಡಿಗೆ ಒಟ್ಟು 53,219 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 3 ಲಕ್ಷ 70 ಸಾವಿರ ಅರ್ಜಿಗಳು ಕಾರ್ಡ್ ತಿದ್ದುಪಡಿಗಾಗಿ ಸಲ್ಲಿಕೆಯಾಗಿದೆ. ಸದ್ಯ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಒಟ್ಟು 1,17,646 BPL Card ಗಳ ತಿದ್ದುಪಡಿಗೆ ಅನುಮತಿ ನೀಡಲಾಗಿದೆ.
ಈ ಹಿಂದೆ ಸರ್ಕಾರ ಉಚಿತ ಯೋಜನೆಯಡಿ ಅರ್ಹರು ಲಾಭವನ್ನು ಪಡೆಯಲು ರೇಷನ್ ಕಾರ್ಡ್ ನ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಕೊಡ ಕೆಲವರ ಪಡಿತರ ಚೀಟಿ ತಿದ್ದುಪಡಿ ಆಗಿಲ್ಲ. ಮನೆಯ ಮುಖ್ಯಸ್ಥೆ ಮಹಿಳೆ ಆಗಿಲ್ಲದಿದ್ದರೆ ಅದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕಿದೆ. ಈ ಹಿಂದೆ ಸರ್ಕಾರ ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 14 ರ ವರೆಗೆ ಸರ್ಕಾರ ಕಾಲಾವಕಾಶವನ್ನು ನೀಡಿತ್ತು. Septembar 14 ರ ನಂತರ ರೇಷನ್ ಕಾರ್ಡ್ ತಿದ್ದುಪಡಿಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ದಿನಾಂಕ ವಿಸ್ತರಣೆ ಮಾಡಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ
ಸದ್ಯ ರಾಜ್ಯ ಸರ್ಕಾರ October 5 ರಿಂದ October 13 ರವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ರೇಷನ್ ಕಾರ್ಡ್ ತಿದ್ದ್ಯುಪದಿಗೆ ಅವಕಾಶ ನೀಡಲಾಗಿದ್ದು, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಗಳಲ್ಲಿ ಆದಷ್ಟು ಬೇಗ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳ ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಕಾರ್ಡ್ ನಲ್ಲಿ ಸದಸ್ಯರ ಹೆಸರನ್ನು ರದ್ದುಗೊಳಿಸುವುದು, ಕಾರ್ಡ್ ನಲ್ಲಿ ಸದಸ್ಯರ ಹೆಸರು ಸೇರ್ಪಡೆ, ಕಾರ್ಡ್ ನಲ್ಲಿನ ಮಹಿಳಾ ಮುಖ್ಯಸ್ಥರ ಹೆಸರು ಬದಲಾವಣೆಗೆ ಸರ್ಕಾರ ಅನುಮತಿ ನೀಡಿದೆ.