Card Amendment: BPL ರೇಷನ್ ಕಾರ್ಡ್ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ ಸಿದ್ದರಾಮಯ್ಯ ಸರ್ಕಾರ, ಮತ್ತೊಂದು ಅವಕಾಶ.
ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರದಿಂದ ಇನ್ನೊಂದು ಗುಡ್ ನ್ಯೂಸ್.
Ration Card Amendment: ಪಡಿತರ ವ್ಯವಸ್ಥೆ ಕರ್ನಾಟಕದಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ಜಾರಿಗೆ ತರಲಾಗಿದೆ. ಬಡ ವರ್ಗದವರಿಗೆ ಆಹಾರ ಸೌಲಭ್ಯ ವಿಧಿಸುವ ಜೊತೆಗೆ ಆರೋಗ್ಯ ಶೈಕ್ಷಣಿಕ, ಸಾಮಾಜಿಕ ಇನ್ನಿತರ ಸರಕಾರಿ ಸೌಲಭ್ಯ ಪಡೆಯಲು ಇಂದು ರೇಶನ್ ಕಾರ್ಡ್ ಕೆಲ ಮೂಲ ದಾಖಲೆಗಳಲ್ಲಿ ಒಂದಾಗಿದೆ. ಇಂದು ಪಡಿತರ ವಿತರಣಾ ವ್ಯವಸ್ಥೆಯು ತುಂಬಾ ಅನುಕೂಲಕರವಾಗಿದ್ದು ಅನೇಕ ಬಡ ವರ್ಗದವರಿಗೆ ಈ ವ್ಯವಸ್ಥೆ ಸಾಕಷ್ಟು ಅನುಕೂಲವಾಗಿದೆ.
ಚುನಾವಣೆಗೆ ಪೂರ್ವದಲ್ಲಿ ಪಂಚ ಗ್ಯಾರೆಂಟಿ ತಿಳಿಸಿದ್ದ ಕಾಂಗ್ರೆಸ್ ಸರಕಾರ ಬಳಿಕ ಪಂಚ ಗ್ಯಾರೆಂಟಿ ಒಂದೊಂದಾಗೆ ಇಡೇರಿಸುತ್ತಾ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಹಣ ನೀಡಲು ಮುಂದಾಗಿದ್ದು ತಿಳಿಯುತ್ತಿದ್ದಂತೆ ಮನೆ ಸದಸ್ಯರ ಸಂಖ್ಯೆ ಹೆಚ್ಚಿಸಲು ಮತ್ತು ಹೆಸರು , ವಿಳಾಸ ಇನ್ನಿತರ ತಿದ್ದುಪಡಿಗೆ ನಿರ್ದಿಷ್ಟ ಗಡುವು ಸಹ ನೀಡಲಾಗುತ್ತಿದೆ. ಹಾಗಾಗಿ ಅಂದು ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿದ್ದವರಿಗೆ ಬಳಿಕ ಯೋಜನೆಯ ಫಲಾನುಭವಿಗಳಾಗಲು ಸಾಕಷ್ಟು ತೊಂದರೆ ಆಗಿದ್ದು ಇದೀಗ ಹೊಸ ವಿಚಾರ ಹೊರ ಬಿದ್ದಿದೆ.
ಯಾವಾಗ ತಿದ್ದುಪಡಿ?
ಪಡಿತರ ಕಾರ್ಡ್ ತಿದ್ದುಪಡಿಗೆ ನವೆಂಬರ್ ಮೊದಲವಾರ ಅವಕಾಶ ನೀಡಿದ್ದಾರೆ. ನವೆಂಬರ್ 1ರ ಬಳಿಕ ಪಡಿತರ ಅಗತ್ಯ ದಾಖಲೆಯನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ನವೆಂಬರ್ 1 ರ ಬಳಿಕ ಬೆಳಗ್ಗೆ 10 ರಿಂದ ಸಂಜೆ 7ರ ವರೆಗೆ ಹೆಸರು, ಇನಿಶಿಯಲ್, ಸ್ಥಳ ದಾಖಲಾತಿ ಇನ್ನಿತರ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಹೀಗಾಗಿ ರೇಶನ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತಿದ್ದ ಜನರಿಗೆ ಇದೊಂದು ಉತ್ತಮ ಅವಕಾಶ ಎಂದರೂ ತಪ್ಪಾಗದು.
ಈ ತಿದ್ದುಪಡಿಗೆ ಅವಕಾಶ ಇದೆ
ಹೆಸರು ತಪ್ಪಾಗಿದ್ದದ್ದು, ಹೆಸರು ಬದಲಾವಣೆ, ಪಡಿತರ ಕೇಂದ್ರ ಬದಲಾವಣೆ, ಮುಖ್ಯಸ್ಥರ ಹೆಸರು ಬದಲಾವಣೆ, ಪುರುಷ ಯಜಮಾನ ಎಂದಿದ್ದ ಹಳೆ ಕಾರ್ಡ್ ತಿದ್ದುಪಡಿ ಮುಖೇನ ಮಹಿಳೆ ಮುಖ್ಯಸ್ಥರಾಗಿ ಮಾಡಲು, ಫೋಟೋ ಬದಲಾವಣೆ, ಮರಣ ಹೊಂದಿದ್ದವರನ್ನು ಕಾರ್ಡ್ ನಿಂದ ಅಳಿಸುವುದು ಮತ್ತು ಹೊಸ ಸದಸ್ಯರ ಸೇರ್ಪಡೆ ಇನ್ನಿತರ ತಿದ್ದುಪಡಿ ಮಾಡಬಹುದು.
ಒಟ್ಟಾರೆಯಾಗಿ APL ಹಾಗೂ BPLಕಾರ್ಡ್ ತಿದ್ದುಪಡಿ ಮಾಡಲು ಸಾಕಷ್ಟು ಅವಕಾಶ ನೀಡುವಂತೆ ಈ ಹಿಂದೆ ಅನೇಕ ಬಾರಿ ಮನವಿ ಬಂದಿತ್ತು. ಕೊಟ್ಟ ಸಮಯ ಇನ್ನಷ್ಟು ವಿಸ್ತರಿಸಬೇಕೆಂದು ಸಹ ಮನವಿ ಮಾಡಲಾಗಿದೆ ಹಾಗಾಗಿ ಸರಕಾರ ನವೆಂಬರ್ ತಿಂಗಳಿನಲ್ಲಿ ಮತ್ತಷ್ಟು ಅವಕಾಶ ವಿಸ್ತರಿಸಲಿದೆ.