Ration Card: ರೇಷನ್ ಕಾರ್ಡ್ ಇದ್ದರೂ ಸಿಗಲ್ಲ ಅನ್ನಭಾಗ್ಯ ಯೋಜನೆಯ ಲಾಭ, ಇಂದೇ ಈ ತಪ್ಪು ಸರಿಪಡಿಸಿಕೊಳ್ಳಿ.

ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಸರ್ಕಾರದಿಂದ ಸಿಗುವ ಉಚಿತ ರೇಷನ್ ನಿಂದ ವಂಚಿತರಾಗುತ್ತೀರಿ.

Ration Card And Aadhar Card Link: ಭಾರತೀಯರಿಗೆ ಆಧಾರ್ ಕಾರ್ಡ್ (Aadhar Card) ಅಗತ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಮೂಲಕ ನೀವು ಎಲ್ಲ ಸರ್ಕಾರದ ಸೌಲಭ್ಯವನ್ನು ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ಇಲ್ಲದೆ ಈಗಿನ ಕಾಲದಲ್ಲಿ ಹೆಚ್ಚಿನ ಕೆಲಸ ನಡೆಯುವುದಿಲ್ಲ. ಅದರಲ್ಲಿ ಇತ್ತೀಚಿಗೆ ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕೇಂದ್ರ ಸರ್ಕಾರದಿಂದ ಮಾಹಿತಿ ಹೊರ ಬಿದ್ದಿದೆ. ಅದರಲ್ಲೂ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಗೆ ಸರ್ಕಾರ ಮತ್ತೆ ಗಡುವನ್ನು ಸೂಚಿಸಿದೆ.

If Aadhaar is not linked with Ration Card, Ration will not be available
Image Credit: Informalnewz

ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್
ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಕೆಲವು ಸಮಸ್ಯೆಗಳಿಂದ ಈಗ ಅಕ್ಕಿ ಬದಲು ಹಣ ನೀಡುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಈ ಬೆಳವಣಿಗೆ ಹಿನ್ನಲೆ ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಹಲವು ಜನ ಕಾಯುತ್ತಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ಸಹ ಮಹತ್ವದ ಮಾಹಿತಿ ನೀಡಿದ್ದು, ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ಗೆ ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಿದೆ.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿ
ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು.

If Aadhaar is not linked with Ration Card, Ration will not be available
Image Credit: Pipanews

ಆದ್ದರಿಂದ ಕೇಂದ್ರ ಸರ್ಕಾರ ಜನರಿಗೆ ಆಧಾರ್ ಗೆ ಪಡಿತರ ಲಿಂಕ್ ಮಾಡುವಂತೆ ಪದೇ ಪದೇ ಹೇಳುತ್ತಿದೆ. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿದರೆ ಸರ್ಕಾರದಿಂದ ಸಿಗುವ ಉಚಿತ ಪಡಿತರವನ್ನು ಪಡೆಯಬಹುದು. ಉಚಿತ ಪಡಿತರವನ್ನು ಪಡೆಯಲು ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ನೀವು ಸರ್ಕಾರದಿಂದ ಸಿಗುವ ಉಚಿತ ರೇಷನ್ ನಿಂದ ವಂಚಿತರಾಗಬೇಕಾಗುತ್ತದೆ.

Join Nadunudi News WhatsApp Group

ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ
* ಮೊದಲು ಆಹಾರ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಬೇಕು.

* ಅದರ ನಂತರ ಲಿಂಕ್ ಆಧಾರ್ ವಿತ್ ರೇಷನ್ ಕಾರ್ಡ್ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕು.

* ನಂತರ ನಿಮ್ಮ ಪಡಿತ ಚೀಟಿ ಸಂಖ್ಯೆಯನ್ನು ಸೇರಿಸಿ.

If Aadhaar is not linked with Ration Card, Ration will not be available
Image Credit: News18

* ಲಿಂಕ್ ಆಧಾರ್ ಮತ್ತು ಮೊಬೈಲ್ ಸಂಖ್ಯೆ ಆಯ್ಕೆಯನ್ನು ಆರಿಸಿ.

* ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

* ನಂತರ ನಿಮ್ಮ ಫೋನ್ ಗೆ ಬರುವ ಓಟಿಪಿ ನಮೂದಿಸಬೇಕು.

* ನಂತರ ಪಡಿತ ಚೀಟಿಯೊಂದಿದೆ ಆಧಾರ್ ಲಿಂಕ್ ಮಾಡಿ.
ಇದಾದ ನಂತರ ನಿಮ್ಮ ಮೊಬೈಲ್ ಗೆ ತಕ್ಷ ಲಿಂಕ್ ಆಗ ಮೆಸೇಜ್ ಬರುತ್ತದೆ.

Join Nadunudi News WhatsApp Group